Asianet Suvarna News Asianet Suvarna News

ದೀಪಾವಳಿ ಹಬ್ಬ: ನಿನ್ನೆ ಒಂದೇ ದಿನ 26 ಕ್ಕೂ ಹೆಚ್ಚು ಪಟಾಕಿ ಸಿಡಿತ ಪ್ರಕರಣಗಳು ದಾಖಲು!

ನಿನ್ನೆ ದೀಪಾವಳಿ ಹಬ್ಬದಂದು ಒಂದೇ ದಿನದಲ್ಲಿ 26ಕ್ಕೂ ಅಧಿಕ ಪಟಾಕಿ ಸಿಡಿತ ಪ್ರಕರಣಗಳು ದಾಖಲಾಗಿದೆ. ನಾರಾಯಣ ನೇತ್ರಾಲಯದಲ್ಲಿ 22 ಪ್ರಕರಣ ದಾಖಲಾದರೆ ಮಿಂಟೋ ಆಸ್ಪತ್ರೆಯಲ್ಲಿ 4 ಪ್ರಕರಣ ದಾಖಲಾಗಿವೆ. ನಾರಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 12 ಮಂದಿ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಾರೆ.

Diwali Festival More than 26 cases of firecrackers were recorded in one day yesterday at bengaluru rav
Author
First Published Nov 13, 2023, 9:11 AM IST

ಬೆಂಗಳೂರು (ನ.13): ನಿನ್ನೆ ದೀಪಾವಳಿ ಹಬ್ಬದಂದು ಒಂದೇ ದಿನದಲ್ಲಿ 26ಕ್ಕೂ ಅಧಿಕ ಪಟಾಕಿ ಸಿಡಿತ ಪ್ರಕರಣಗಳು ದಾಖಲಾಗಿದೆ.

ನಾರಾಯಣ ನೇತ್ರಾಲಯದಲ್ಲಿ 22 ಪ್ರಕರಣ ದಾಖಲಾದರೆ ಮಿಂಟೋ ಆಸ್ಪತ್ರೆಯಲ್ಲಿ 4 ಪ್ರಕರಣ ದಾಖಲಾಗಿವೆ. ನಾರಯಣ ನೇತ್ರಾಲಯದ 22 ಪ್ರಕರಣಗಳಲ್ಲಿ 12 ಮಂದಿ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ 4 ಮಕ್ಕಳು ಸೇರಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗ್ತಿದೆ. ಈ ಬಗ್ಗೆ ನಾರಾಯಣ ನೇತ್ರಾಲಯ ಮುಖ್ಯಸ್ಥ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿಯಿಂದ ಮಿಂಟೋ ಕಣ್ಣಿನ ಆಸ್ಪತ್ರೆಗೆ 7 ಕೇಸ್ ದಾಖಲಾಗಿವೆ. ಅದರಲ್ಲಿ ಎರಡು ಕೇಸ್ ಸಿರಿಯಸ್ ಇಂಜ್ಯೂರಿ  ಉಳಿದ 5 ಕೇಸ್ ಗಳು ಒಪಿಡಿಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. 10 ವರ್ಷದ ಬಾಲಕಿ , ಮತ್ತು 18 ವರ್ಷದ ಯುವಕ ಆಸ್ಪಗೆ ದಾಖಲು ಮಾಡಲಾಗಿದೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.

ದೀಪಾವಳಿಗೆ 24x7 ಕಣ್ಣಿನ ಚಿಕಿತ್ಸೆ, ಸಹಾಯವಾಣಿ ಆರಂಭಿಸಿದ ಮಿಂಟೋ ಆಸ್ಪತ್ರೆ: ಈಗ್ಲೇ ನೋಟ್‌ ಮಾಡ್ಕೊಳಿ!

ಎರಡು ಮಿತಿಗೆ ಕ್ಯಾರೇ ಅನ್ನದ ಜನರು:

ದೀಪಾವಳಿ ಹಬ್ಬದ ವೇಳೆ ಕೇವಲ ಹಸಿರು ಪಟಾಕಿ ಸಿಡಿಸಬೇಕು ಎಂಬ ಸೂಚನೆಯ ನಡುವೆ ಭಾನುವಾರ ನಗರದೆಲ್ಲೆಡೆ ನಿಯಮಗಳನ್ನು ಮೀರಿ ಎಲ್ಲ ಮಾದರಿಯ ಪಟಾಕಿ ಸಿಡಿಸಿರುವ ಜನರು. 

ಸೋಮವಾರ ಮತ್ತು ಮಂಗಳವಾರ ದೀಪಾವಳಿ ಅಮಾವಾಸ್ಯೆ ಮತ್ತು ಬಲಿಪಾಡ್ಯಮಿಯಂದು ಪಟಾಕಿ ಸಿಡಿಲಾಗಿದೆ. ಬಿಬಿಎಂಪಿ ಅನುಮತಿ ನೀಡಿರುವ ಮೈದಾನಗಳಲ್ಲಿ ತೆರೆದಿರುವ ಮಳಿಗೆಗಳಲ್ಲಿ ಜನ ಪಟಾಕಿ ಖರೀದಿಸಿದರು. ಪ್ರತಿದಿನ ರಾತ್ರಿ 8ರಿಂದ 10ರವರೆಗಿನ 2 ತಾಸು ಅವಧಿಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದರು. ಆದರೆ, ಭಾನುವಾರ ನಸುಕಿನಲ್ಲೇ ಆರಂಭವಾದ ಪಟಾಕಿ ಅಬ್ಬರ, ತಡರಾತ್ರಿವರೆಗೂ ಮುಂದುವರೆದಿತ್ತು.

ನವೆಂಬರ್ 12 ನಂತರ 2024ರವರೆಗೆ ಈ ರಾಶಿಗೆ ಸಂಪತ್ತು ಡಬಲ್.. ಯಶಸ್ಸು ಪಕ್ಕಾ..

ಸಿಗದ ಹಸಿರು ಪಟಾಕಿ

ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಜನರು ಪಟಾಕಿ ಮಳಿಗೆಗಳಲ್ಲಿ ಹಸಿರು ಪಟಾಕಿ ಕುರಿತು ವಿಚಾರಿಸಿದ್ದಾರೆ. ಆದರೆ, ಸರ್ಕಾರದ ಸೂಚನೆಯಂತೆ ಎನ್‌ಇಇಆರ್‌ಐ ಲೋಗೋ ಮತ್ತು ಕ್ಯೂ ಆರ್ ಕೋಡ್ ಇರುವ ನೈಜ ಹಸಿರು ಪಟಾಕಿ ಮಾರುಕಟ್ಟೆಯಲ್ಲಿ ಕಾಣಿಸಿಲ್ಲ. ಹೀಗಾಗಿ ಸಿಕ್ಕ ಪಟಾಕಿಗಳೆಲ್ಲವನ್ನು ಸಿಡಿಸಿದ್ದಾರೆ.

ದೀಪಾವಳಿ ಹಬ್ಬದ ಹಿನ್ನೆಲೆ 16 ಜನರಿಗೆ ಕಣ್ಣಿನ ಪ್ರಕರಣ ಕಂಡು ಬಂದಿದೆ. 9 ಜನರಿಗೆ ಪಟಾಕಿ ಹೊಡೆಯುವಾಗ ಗಾಯ ಆಗಿದೆ. ಉಳಿದವರಿಗೆ ನಿಂತ ವೇಳೆಯಲ್ಲಿ ಗಾಯ ಆಗಿದೆ. 7 ಮಕ್ಕಳಿಗೆ ಗಾಯಗಳಾಗಿವೆ. ಕೆಲವರಿಗೆ ಕಪ್ಪು ಗುಡ್ಡೆಯ ಮೇಲೆ ಗಾಯವಾಗಿದೆ  ಎಲ್ಲರಿಗೂ ಚಿಕಿತ್ಸೆ ನೀಡಿ ಕಳಿಸಲಾಗಿದೆ ಕಳೆದ ವರ್ಷಗಳಿಗೆ ಹೋಲಿಸಿದ್ರೆ ಪ್ರಕರಣಗಳ ತೀವ್ರತೆ ಕಡಿಮೆ ಇದೆ. ಫ್ಲವರ್ ಪಾಟ್ ಹಾಗೂ ರಾಕೆಟ್ ಇಂಜುರಿ ಹೆಚ್ಚಾಗಿದೆ.

ನಾರಾಯಣ ನೇತ್ರಾಲಯ ವೈದ್ಯೆ ಶೈಲಜಾ

Follow Us:
Download App:
  • android
  • ios