ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವಾಗ ಕಣ್ಣಿಗೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಚಿಕಿತ್ಸೆ ನೀಡಲು ಅನುಕೂಲ ಆಗುವಂತೆ ಮಿಂಟೋ ಆಸ್ಪತ್ರೆಯಿಂದ ಸಹಾಯವಾಣಿ ಹಾಗೂ 24x7 ಕಣ್ಣಿನ ಚಿಕಿತ್ಸಾ ವ್ಯವಸ್ಥೆಯನ್ನು ಆರಂಭಿಸಿದೆ. 

ಬೆಂಗಳೂರು (ನ.11): ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವಾಗ ಕಣ್ಣಿಗೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಚಿಕಿತ್ಸೆ ನೀಡಲು ಅನುಕೂಲ ಆಗುವಂತೆ ಮಿಂಟೋ ಆಸ್ಪತ್ರೆಯಿಂದ ಸಹಾಯವಾಣಿ ಹಾಗೂ 24x7 ಕಣ್ಣಿನ ಚಿಕಿತ್ಸಾ ವ್ಯವಸ್ಥೆಯನ್ನು ಆರಂಭಿಸಿದೆ. 

ದೇಶದಲ್ಲಿ ಅತ್ಯಂತ ಸಂಭ್ರಮದಿಂದ ಆಚರಣೆ ಮಾಡುವಂತಹ ದೀಪಾವಳಿ ಹಬ್ಬ ಬೆಳಕಿನ ಹಬ್ಬವಾಗಿದೆ. ಆದರೆ, ಬೆಳಕಿನ ಹಬ್ಬದಲ್ಲಿ ಪಟಾಕಿ ಸಿಡಿಸಲು ಹೋಗಿ ಕೆಲವರು ತಮ್ಮ ಬಾಳಿಗೆ ಶಾಶ್ವತ ಅಂಧತ್ವ ತೆಗೆದುಕೊಳ್ಳುವಂತೆ ಕಣ್ಣನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಅವಘಡಲ್ಲಿ ಕಣ್ಣಿಗೆ ಸಮಸ್ಯೆಯಾದಲ್ಲಿ ತುರ್ತು ಚಿಕಿತ್ಸೆ ನೀಡಲು ಸಹಾಯವಾಣಿ ಹಾಗೂ 24x7 ಕಣ್ಣಿನ ಚಿಕಿತ್ಸೆಯನ್ನು ಮಿಂಟೋ ನೇತ್ರಾಲಯದಿಂದ ಆರಂಭಿಸಲಾಗಿದೆ. 

ಜೆಡಿಎಸ್‌ ಕೋಟೆ ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸಿದ್ದ ತಂತ್ರಗಾರನಿಗೆ ಒಲಿದ ರಾಜ್ಯಾದ್ಯಕ್ಷ ಸ್ಥಾನ..!

ಮಿಂಟೊ ನೇತ್ರಾಲಯ ದೀಪಾವಳಿ ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಪಟಾಕಿ ಅವಘಡಗಳಿಗೆ ಕಣ್ಣಿನ ಚಿಕಿತ್ಸೆ ನೀಡಲು 24x7 ಸಿದ್ಧವಾಗಿದೆ. ಹಬ್ಬದ ಸಮಯದಲ್ಲಿನ ಚಿಕಿತ್ಸೆಗೆ ಬೇಕಾದ ಔಷಧ ಮತ್ತು ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ರೀತಿಯ ತುರ್ತು ಚಿಕಿತ್ಸಾ ನೀಡಲು ವಿಶೇಷ ತಜ್ಞರು ಸೇರಿದ ಒಂದು ವೈದ್ಯ ತಂಡ ನಿಯೋಜನೆ ಮಾಡಲಾಗಿದೆ. ಜೊತೆಗೆ ಗಾಯಗೊಂಡ ರೋಗಿಗಳನ್ನು ಚಿಕಿತ್ಸೆ ನೀಡಲು ಕೆಳಗಿನ ಯೋಜನೆಗಳನ್ನು ಮಾಡಲಾಗಿದೆ.

  • ಪಟಾಕಿ ಗಾಯಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ಬೆಡ್ ಮೀಸಲು
  • 10 ಪುರುಷ 10 ಮಹಿಳಾ ಬೆಡ್ ಹಾಗೂ 15 ಮಕ್ಕಳಿಗೆ ಪ್ರತ್ಯೇಕವಾದ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ..
  • ಆಸ್ಪತ್ರೆಯಲ್ಲು ಒಟ್ಟು 35 ಹಾಸಿಗೆಗಳು ಮೀಸಲಿದ್ದು, ರೋಗಿಗಳಿಗೆ ಬೇಕಾದ ಚಿಕಿತ್ಸೆ ನೀಡಲು ಸಿದ್ಧತೆಯಾಗಿದೆ.
  • ಗಾಯಗೊಂಡ ರೋಗಿಗಳಿಗೆ ಸರಬರಾಜು, ತಪಾಸಣೆ, ಚಿಕಿತ್ಸೆಗೆ ಸಿಬ್ಬಂದಿ ಹಾಗೂ ಔಷಧ ಸೇರಿ ಇತರೆ ಸಿದ್ದತೆ ಮಾಡಲಾಗಿದೆ.
  • ತುರ್ತು ಚಿಕಿತ್ಸೆಗೆ ವಾರ್ಡಗಳನ್ನ ಸಿದ್ಧತೆ ಮಾಡಲಾಗಿದೆ
  • ಯಾವುದೇ ತುರ್ತು ಸರ್ಜರಿ ಹಾಗೂ ಗಾಯಗೊಂಡ ರೋಗಿಗೆ ಚಿಕಿತ್ಸೆ ನೀಡಲು ಅಪರೇಶನ್ ಬ್ಲಾಕ್ ಕೂಡ ವ್ಯವಸ್ಥೆ ಮಾಡಲಾಗಿದೆ
  • ಕಣ್ಣಿನ ಗಾಯಗಳು ಜೊತೆಗೆ ಶರೀರದ ಇತರೆ ಭಾಗದಲ್ಲಿ ಮುಖ ಸೇರಿದಂತೆ ದೇಹದ ಇತರೆ ಭಾಗದಲ್ಲಿ ಸುಟ್ಟ ಗಾಯಗಳಿಗೆ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್ ಮೀಸಲಿಡಲು ಸೂಚಿಸಲಾಗಿದೆ.
  • ತುರ್ತು ಸಹಾಯವಾಣಿ - 9481740137, 080-26707176 ಆರಂಭಿಸಲಾಗಿದೆ.

ಲಿಂಗಾಯತ ಸಮುದಾಯಕ್ಕೆ ದಕ್ಕಿದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ: ಒಕ್ಕಲಿಗ/ ಒಬಿಸಿ ಶಾಸಕನಿಗೆ ವಿಪಕ್ಷ ಸ್ಥಾನ ಫಿಕ್ಸ್‌?

ರಾಜಾಜಿನಗರ ನಾರಾಯಣ ನೇತ್ರಾಲಯದಿಂದಲೂ ಸಹಾಯವಾಣಿ ಆರಂಭ:
ದೀಪಾವಳಿ ಸಡಗರದಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ನೆರವಿಗೆ ಆಸ್ಪತ್ರೆಗಳು ಸಜ್ಜುಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರದ ನಾರಾಯಣ ನೇತ್ರಾಲಯದಿಂದಲೂ 24 ಗಂಟೆಯೂ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದೆ. ನಾರಾಯಾಣ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ನವೆಂಬರ್ 12, 13 ಮತ್ತು 14ರಂದು ದಿನದ 24 ಗಂಟೆಗಳ ಕಾಲ ತುರ್ತು ಕಣ್ಣಿನ ಆರೈಕೆ ಮಾಡಲು ವ್ಯವಸ್ಥೆ ಮಾಡಿಕೊಂಡಿದೆ. ಜೊತೆಗೆ, ಕಣ್ಣಿನ ಚಿಕಿತ್ಸೆಗಾಗಿ ನಾರಾಯಣ ನೇತ್ರಾಲಯದಿಂದ ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ರಾಜಾಜಿನಗರ ನಾರಾಯಣ ನೇತ್ರಾಲಯ ಸಹಾಯವಾಣಿ: 080-66121641/1643 ಮತ್ತು 9902546046. ಹಾಗೂ ಬೊಮ್ಮಸಂದ್ರದ ಎನ್‌ಹೆಚ್ ಹೆಲ್ತ್‌ ಸಿಟಿಯಲ್ಲಿರುವ ನಾರಾಯಣ ನೇತ್ರಾಲಯದ ಸಹಾಯವಾಣಿ : 080-66660655 ಅಥವಾ 9902821128 ಆರಂಭಿಸಲಾಗಿದೆ.

  • ಪಟಾಕಿ ಸಿಡಿಸಲು ಈ ಸಲಹೆಗಳನ್ನು ಪಾಲಿಸಿ
  • ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್​ಐ ಗುರುತಿನ ಹಸಿರು ಪಟಾಕಿ ಖರೀದಿಸಿ
  • ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ
  • ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ
  • ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ
  • ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
  • ಮೈದಾನ, ಖಾಲಿ ಜಾಗಗಳಲ್ಲಷ್ಟೆ ಪಟಾಕಿ ಹಚ್ಚಿ
  • ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ
  • ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ
  • ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ
  • ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ
  • ಗಾಜು, ಡಬ್ಬ ಇತರೆ ಪಾತ್ರೆಗಳನ್ನು ಇರಿಸಿ ಪಟಾಕಿ ಮತ್ತು ರಾಕೆಟ್ ಹಚ್ಚುವ ಸಾಹಸ ಮಾಡಬೇಡಿ.