PSI Recruitment Scam: ಕಿಂಗ್‌ಪಿನ್‌ ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಬೇಲ್‌

ಪೊಲೀಸ್‌ ಇಲಾಖೆಯಲ್ಲಿನ 545 ಪಿಎಸ್‌ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ವೇಳೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ಅಕ್ರಮದ ಕಿಂಗ್‌ಪಿನ್‌, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ 26 ಮಂದಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ.

divya hagaragi along with other 25 accused in psi recruitment scam get bail from court gvd

ಕಲಬುರಗಿ (ಜ.06): ಪೊಲೀಸ್‌ ಇಲಾಖೆಯಲ್ಲಿನ 545 ಪಿಎಸ್‌ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ವೇಳೆ ಅಕ್ರಮದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ಅಕ್ರಮದ ಕಿಂಗ್‌ಪಿನ್‌, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ 26 ಮಂದಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಗುರುವಾರ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ.ಪಾಟೀಲ ಅವರು ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ. 

ದಿವ್ಯಾ ಹಾಗರಗಿ, ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌, ಬ್ಲೂಟೂತ್‌ ಡಿವೈಸ್‌ನ ಎಕ್ಸಪರ್ಟ್‌ ಮಂಜುನಾಥ ಮೇಳಕುಂದಿ, ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌ ಚೀಲಾ, ಡಿವೈಎಸ್‌ಪಿ ವಿಜಯಕುಮಾರ್‌ ಸಾಲಿ ಜಾಮೀನು ಪಡೆದ ಆರೋಪಿಗಳಲ್ಲಿ ಸೇರಿದ್ದಾರೆ. ಕಳೆದ 7 ತಿಂಗಳಿಂದ ಇವರೆಲ್ಲರೂ ಜೈಲಲ್ಲಿದ್ದರು. ಈ ಹಿಂದೆ 2-3 ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಅವು ತಿರಸ್ಕೃತಗೊಂಡಿದ್ದವು. ಇದರೊಂದಿಗೆ ಪಿಎಸ್‌ಐ ಹಗರಣದ ಆರೋಪ ಹೊತ್ತು ಜೈಲು ಪಾಲಾಗಿರುವವರ ಪೈಕಿ ಈವರೆಗೆ 35 ಮಂದಿಗೆ ಜಾಮೀನು ಸಿಕ್ಕಂತಾಗಿದೆ.

PSI Recruitment : ಪರೀಕ್ಷೆ ಅಕ್ರಮದಲ್ಲಿ ಜೈಲು ಸೇರಿದ್ದ 26 ಆರೋಪಿಗಳಿಗೆ ಜಾಮೀನು

ಹಗರಣದ ಕಿಂಗ್‌ಪಿನ್‌ ದಿವ್ಯಾ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ವಿಶ್ವರೂಪ ಹೊರಬಿದ್ದಿದ್ದೆ ದಿವ್ಯಾ ಒಡೆತನದ ಶಿಕ್ಷಣ ಸಂಸ್ಥೆಯ ಜ್ಞಾನಜ್ಯೋತಿ ಹೈಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ. ಈ ಪರೀಕ್ಷಾ ಕೇಂದ್ರದಲ್ಲಿಯೇ ಅಕ್ರಮದ ಶೇ.70ರಷ್ಟುಡೀಲ್‌ಗಳು ನಡೆದಿರೋದು ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಹಗರಣ ಬೆಳಕಿಗೆ ಬಂದ ನಂತರ ಸುಮಾರು 18 ದಿನಗಳವರೆಗೆ ಮರೆಸಿಕೊಂಡಿದ್ದ ದಿವ್ಯಾರನ್ನು ಏಪ್ರಿಲ್‌ನಲ್ಲಿ ಪುಣೆಯಲ್ಲಿ ಬಂಧಿಸಲಾಗಿತ್ತು. ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌, ಅಕ್ರಮ ಸುರಳಿತವಾಗಿ ನಡೆದಕೊಂಡು ಹೋಗಲು ಎಲ್ಲ ರೀತಿಯ ಸಹಕಾರ ನೀಡಿದ್ದ ಆರೋಪದಲ್ಲಿ ಬಂಧಿತರಾಗಿದ್ದರು. 

PSI Recruitment Scam: ಅಮೃತ್‌ಪೌಲ್‌ ಜಾಮೀನು ಅರ್ಜಿ ವಜಾ, ಜೈಲಿನಲ್ಲಿ ರಾಜ್ಯಾತಿಥ್ಯ ಆರೋಪ!

ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌ ಮಂಜುನಾಥ ಮೇಳಕುಂದಾ, ಬ್ಲೂಟೂತ್‌ ಉಪಕರಣ ಬಳಸಿ ಡೀಲ್‌ ಆದ ಅಭ್ಯರ್ಥಿಗಳಿಗೆ ಉತ್ತರ ಕಳುಹಿಸುವಲ್ಲಿ ಪಳಗಿದ್ದ. ಈತ ಕೂಡಾ ಹಗರಣದ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದನಾದರೂ, ನಂತರ ತಾನೇ ಆಟೋದಲ್ಲಿ ಬಂದು ಶರಣಾಗಿದ್ದ. ಇನ್ನು, ಡಿವೈಎಸ್ಪಿ ಸಾಲಿ, ಹಗರಣ ನಡೆದ ಸಂಗತಿ ಗೊತ್ತಾದಾಗ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ತಾನೇ ಫೀಲ್ಡಿಗಿಳಿದು ಹಗರಣದ ರೂವಾರಿ ಆರ್‌ಡಿ ಪಾಟೀಲ್‌ ಅಣತಿಯಂತೆ ದಿವ್ಯಾ ಹಾಗರಗಿ ತಂಡವನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ರು.ಹಣ ಪಡೆದಿದ್ದ. ಈ ಆರೋಪದಡಿ ಆತನನ್ನು ಜೈಲಿಗಟ್ಟಲಾಗಿತ್ತು.

Latest Videos
Follow Us:
Download App:
  • android
  • ios