Asianet Suvarna News Asianet Suvarna News

Divorce: 21 ವರ್ಷದಿಂದ ಪ್ರತ್ಯೇಕವಾಗಿಯೇ ಇದ್ದ ದಂಪತಿಗೆ ಸಿಕ್ತು ವಿಚ್ಛೇದನ..!

*  ಮದುವೆಯಾಗಿ 2 ತಿಂಗಳಿಗೆ ಬೇರೆಯಾಗಿದ್ದ ಚಿಕ್ಕಮಗಳೂರಿನ ಜೋಡಿ
*  ಹೈಕೋರ್ಟ್‌ ತೀರ್ಪು
*  ವಿಚ್ಛೇದನ ಬೇಡ, ಜೀವನಾಂಶ ಕೊಡಿ ಎಂದಿದ್ದ ಪತ್ನಿ
 

Divorced for Couple Who Have Been Separated for 21 Years in Karnataka grg
Author
Bengaluru, First Published Jan 20, 2022, 5:45 AM IST

ಬೆಂಗಳೂರು(ಜ.20):  ಮದುವೆಯಾದ ಎರಡೇ ತಿಂಗಳಲ್ಲಿ ಬೇರ್ಪಟ್ಟು ಸುದೀರ್ಘ 21 ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಪತಿ-ಪತ್ನಿಗೆ ವಿಚ್ಛೇದನ(Divorce) ಮಂಜೂರಾತಿ ಮಾಡಿ ಹೈಕೋರ್ಟ್‌(High Court of Karnataka) ಆದೇಶಿಸಿದೆ. ಪ್ರಕರಣದಲ್ಲಿ ಪತಿ ಪತ್ನಿಯು 21 ವರ್ಷದಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದು, ಅವರ ವೈವಾಹಿಕ ಸಂಬಂಧ(Marital Relationship) ಸಂಪೂರ್ಣವಾಗಿ ಮುರಿದು ಬಿದ್ದಿದೆ. ಇಂತಹ ಸಂಬಂಧವನ್ನು ಒಗ್ಗೂಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ದಂಪತಿಗೆ(Couple) ವಿಚ್ಛೇದನ ಮಂಜೂರು ಮಾಡಿ ಆದೇಶಿಸಿದೆ.

ವಿಚ್ಛೇದನ ಕೋರಿ ತರಿಕೆರೆಯ ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

Rajinikanth Daughter Divorce: ಐಶ್ವರ್ಯಾ ಮಾತ್ರವಲ್ಲ, ರಜನಿಕಾಂತ್ ಕಿರಿಯ ಮಗಳು ಕೂಡ ಡಿವೋರ್ಸಿ!

ಪ್ರಕರಣದ ವಿವರ:

ಮಲ್ಲಿಕಾರ್ಜುನ ಅವರು ಚಿಕ್ಕಮಗಳೂರಿನ ಕಡೂರಿನಲ್ಲಿ 1999ರ ಜೂನ್‌ 24ರಂದು ವಿವಾಹವಾಗಿದ್ದರು(Marriage). ಅದಾದ ಎರಡು ತಿಂಗಳಲ್ಲಿ ಪತ್ನಿ ತವರು ಮನೆ ಸೇರಿದ್ದರು. ಪೋಷಕರು ಹಲವು ರಾಜಿ ಸಂಧಾನ ಸಭೆ ನಡೆಸಿದ್ದರೂ ಪತ್ನಿ, ಪತಿಯ ಮನೆಗೆ ಬಂದಿರಲಿಲ್ಲ. ಇದರಿಂದ ಮಲ್ಲಿಕಾರ್ಜುನ ಅವರು 2003ರಲ್ಲಿ ವಿವಾಹ ವಿಚ್ಛೇದನ ಕೋರಿ ತರೀಕೆರೆ ಕೌಟುಂಬಿಕ ನ್ಯಾಯಾಲಯದಲ್ಲಿ(Family Court) ಅರ್ಜಿ ಸಲ್ಲಿಸಿದ್ದರು. ಇಬ್ಬರ ವಾದ ಆಲಿಸಿದ್ದ ನ್ಯಾಯಾಲಯವು ಪತಿಯ ಅರ್ಜಿ ವಜಾಗೊಳಿಸಿ 2012ರಲ್ಲಿ ಆದೇಶಿಸಿತ್ತು. ಇದರಿಂದ ಪತಿ ವಿಚ್ಛೇದನಕ್ಕಾಗಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಈ ಪ್ರಕರಣದ(Case) ವಿಚಾರಣೆ ನಡೆಸಿದ ಹೈಕೋರ್ಟ್‌, ದಂಪತಿಗೆ ಪ್ರಸ್ತುತ 56 ವರ್ಷ ವಯಸ್ಸು ಆಗಿದೆ. ಪತಿ-ಪತ್ನಿ 21 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸವಿದ್ದಾರೆ. ಈ ಅವಧಿಯಲ್ಲಿ ಅವರು ಒಂದಾಗಲಿಲ್ಲ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಸಹ ವೈವಾಹಿಕ ಹಕ್ಕುಗಳ ಪುನರ್‌ ಸ್ಥಾಪನೆಗೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಾಸಿಕ ಸಾವಿರ ರು. ಜೀವನಾಂಶವು ಇದೀಗ 20 ಸಾವಿರ ರು.ಗೆ ಏರಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಪತಿ ಎರಡನೇ ಮದುವೆಯಾಗಿದ್ದಾರೆ. ಎರಡನೇ ಪತ್ನಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಚ್ಛೇದನ ನೀಡದಿದ್ದರೆ ಅರ್ಜಿದಾರರು ಮತ್ತು ಪ್ರತಿವಾದಿ ಪತ್ನಿ ಮತ್ತಷ್ಟು ವರ್ಷ ನೆಮ್ಮದಿಯಿಲ್ಲದೆ ಬದುಕುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಆದ್ದರಿಂದ ವಿಚ್ಛೇದನಕ್ಕೆ ಅರ್ಹ ಪ್ರಕರಣ ಇದಾಗಿದೆ ಎಂದು ತೀರ್ಮಾನಿಸಿದ ಹೈಕೋರ್ಟ್‌, ವಿಚ್ಛೇದನ ನೀಡಿ ಆದೇಶಿಸಿದೆ. ಇದೇ ವೇಳೆ ವಿಚ್ಛೇದಿತ ಪತ್ನಿಗೆ ನಾಲ್ಕು ತಿಂಗಳಲ್ಲಿ 30 ಲಕ್ಷ ರು.ವನ್ನು ಜೀವನಾಂಶವಾಗಿ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿತು.

South Celebrity Divorce: ಸೌತ್‌ ಸೆಲೆಬ್ರಿಟಿಗಳ ಶಾಕಿಂಗ್‌ ಡಿವೋರ್ಸ್‌!

ಕೋರ್ಟ್‌ ಹೇಳಿದ್ದೇನು?

ಪತಿ-ಪತ್ನಿ 21 ವರ್ಷಗಳಿಂದಲೂ ಪ್ರತ್ಯೇಕ ವಾಸವಿದ್ದಾರೆ. ವಿಚ್ಛೇದನ ಬೇಡ ಎನ್ನುತ್ತಿರುವ ಪತ್ನಿ ಸಹ ವೈವಾಹಿಕ ಹಕ್ಕುಗಳ ಪುನರ್‌ ಸ್ಥಾಪನೆಗೆ ಅರ್ಜಿ ಸಲ್ಲಿಸಿಲ್ಲ. ಬದಲಿಗೆ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪತಿ 2ನೇ ಮದುವೆಯಾಗಿದ್ದಾರೆ. ಎರಡನೆ ಪತ್ನಿಗೆ ಇಬ್ಬರು ಮಕ್ಕಳು ಜನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿಚ್ಛೇದನ ನೀಡದಿದ್ದರೆ ಅರ್ಜಿದಾರರು ಮತ್ತು ಪ್ರತಿವಾದಿ ಪತ್ನಿ ಮತ್ತಷ್ಟು ವರ್ಷ ನೆಮ್ಮದಿಯಿಲ್ಲದೆ ಬದುಕುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ.

11 ವರ್ಷವಾದ್ರೂ ಗಂಡನ ಜೊತೆ ಸೇರಲು ಈ ಮಹಿಳೆಗೆ ಸಿಗ್ಲಿಲ್ಲ ಮುಹೂರ್ತ!

ಶುಭ ಮುಹೂರ್ತದ ಹೆಸರಿನಲ್ಲಿ ಮಹಿಳೆ ಸುಮಾರು 11 ವರ್ಷಗಳ ಕಾಲ ಪತಿಯನ್ನು ತನ್ನಿಂದ ದೂರವಿಟ್ಟಿದ್ದಾಳೆ. ಇಷ್ಟು ದಿನ ದೂರವಿಟ್ಟಿದ್ದನ್ನು ಕೋರ್ಟ್ ಪರಿತ್ಯಾಗವೆಂದು ಪರಿಗಣಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಪತಿಗೆ ಬಿಡುಗಡೆ ಭಾಗ್ಯ ನೀಡಿದೆ. ಇಂತಹ ಅಚ್ಚರಿಯ ಘಟನೆ ನಡೆದಿರುವುದು ಛತ್ತೀಸ್ಗಢದಲ್ಲಿ
 

Follow Us:
Download App:
  • android
  • ios