Rajinikanth Daughter Divorce: ಐಶ್ವರ್ಯಾ ಮಾತ್ರವಲ್ಲ, ರಜನಿಕಾಂತ್ ಕಿರಿಯ ಮಗಳು ಕೂಡ ಡಿವೋರ್ಸಿ!
ಈ ದಿನಗಳಲ್ಲಿ ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರ ಮಗಳು ಐಶ್ವರ್ಯಾ (Aishwaryaa) ಚರ್ಚೆಯಲ್ಲಿದ್ದಾರೆ. ಐಶ್ವರ್ಯಾ ಮತ್ತು ನಟ ಧನುಷ್ (Dhanush) ತಮ್ಮ ಮದುವೆಯನ್ನು ಮುರಿದುಕೊಂಡಿರುವುದಾಗಿ ಆನೌನ್ಸ್ ಮಾಡಿದ್ದಾರೆ. ಐಶ್ವರ್ಯಾ ಮಾತ್ರವಲ್ಲ ರಜನಿಕಾಂತ್ ಕಿರಿಯ ಮಗಳ ಸೌಂದರ್ಯ (Soundarya) ಕೂಡ ಮಾಜಿ ಪತಿ ಅಶ್ವಿನ್ ರಾಮ್‌ಕುಮಾರ್ ಅವರಿಂದ ದೂರವಾದರು ಮತ್ತು ನಂತರ 2019 ರಲ್ಲಿ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾದರು.
ಎರಡು ದಿನಗಳ ಹಿಂದೆ ರಾತ್ರಿ, ನಟ ಧನುಷ್ ಮತ್ತು ಅವರ ಪತ್ನಿ ಐಶ್ವರ್ಯಾ ರಜನಿಕಾಂತ್ ತಮ್ಮ ಪ್ರತ್ಯೇಕತೆಯ ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಡೊಡ್ಡ ಆಘಾತ ನೀಡಿದರು. ಅವರಿಬ್ಬರೂ ಕಾಲಿವುಡ್‌ನ ಅತ್ಯಂತ ಜನಪ್ರಿಯ ಮತ್ತು ಪ್ರೀತಿಪಾತ್ರ ಜೋಡಿಗಳಾಗಿದ್ದರು. ಧನುಷ್ ಮತ್ತು ಐಶ್ವರ್ಯ ಮದುವೆಯಾಗಿ 18 ವರ್ಷಗಳಾಗಿದ್ದು, ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಈ ಸುದ್ದಿಯು ದೇಶಾದ್ಯಂತ ಅಭಿಮಾನಿಗಳಿಗೆ ಶಾಕ್ ನೀಡಿದೆ. ಕೆಲವು ಅಭಿಮಾನಿಗಳು ಧನುಷ್ ಮತ್ತು ಐಶ್ವರ್ಯಾರ ಫೋಟೋ ಮತ್ತು ಹಳೆಯ ವೀಡಿಯೊಗಳನ್ನು Twitter ಮತ್ತು Instagram ನಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಕೆಲವರು ಅವರ ನಿರ್ಧಾರವನ್ನು ಬೆಂಬಲಿಸಿದರು ಮತ್ತು ಕೆಲವರು ಅದನ್ನು ಟೀಕಿಸಿದರು.
ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ಅವರು ತಮ್ಮ ತಂದೆಯ ಜೊತೆ ಇರುವ ತಮ್ಮ ಮತ್ತು ಸಹೋದರಿ ಐಶ್ವರ್ಯಾ ಅವರ ಬಾಲ್ಯದ ದಿನಗಳ ಫೋಟೊವನ್ನು ಸೋಶಿಯಲ್ ಮೀಡಿಯಾದ ಡಿಸ್ಪ್ಲೇ ಫೋಟೋವಾಗಿ ಬದಲಾಯಿಸುವ ಮೂಲಕ ಐಶ್ವರ್ಯಾರಿಗೆ ಬೆಂಬಲವನ್ನು ತೋರಿಸಿದರು.
ಸೌತ್ ಚಿತ್ರರಂಗದಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ರಜನಿಕಾಂತ್ ಅವರ ಕಿರಿಯ ಮಗಳು ಸೌಂದರ್ಯ ಕೊಚ್ಚಡೈಯಾನ್ ಮತ್ತು ವೆಲೈಯಿಲ್ಲ ಪಟ್ಟಧಾರಿ ಸಿನಿಮಾಗಳನ್ನು ಸುಹ ನಿರ್ದೇಶಿಸಿದ್ದಾರೆ. ಸೌಂದರ್ಯ ಅವರು ಈ ಹಿಂದೆ ವಿಚ್ಛೇದನ ಪಡೆದಿದ್ದರು. ಸೌಂದರ್ಯ ಅವರು 2010 ರಲ್ಲಿ ಚೆನ್ನೈ ಮೂಲದ ಕೈಗಾರಿಕೋದ್ಯಮಿ ಅಶ್ವಿನ್ ರಾಮ್‌ಕುಮಾರ್ ಅವರನ್ನು ಮೊದಲು ಮದುವೆಯಾಗಿದ್ದರು.
ಸೌಂದರ್ಯ ಮತ್ತು ಅಶ್ವಿನ್ ರಾಮ್‌ಕುಮಾರ್ ಇಬ್ಬರು ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳ ಕಾರಣದಿಂದ ದೂರವಾಗಲು ನಿರ್ಧರಿಸಿದರು. ಅವರ 7 ವರ್ಷಗಳ ದಾಂಪತ್ಯವನ್ನು 2017 ರಲ್ಲಿ ಕೊನೆಗೊಳಿಸಿದರು. ಸೌಂದರ್ಯ ಮತ್ತು ಅಶ್ವಿನ್ ದಂಪತಿಗಳಿಗೆ ವೇದ್ ಎಂಬ 6 ವರ್ಷದ ಮಗನಿದ್ದಾನೆ.
ಸೌಂದರ್ಯ ಓಚರ್ ಪಿಕ್ಚರ್ ಪ್ರೊಡಕ್ಷನ್ಸ್ ಸಂಸ್ಥಾಪಕರಾಗಿದ್ದಾರೆ. ಭಾರತದ ಮೊದಲ ಮೋಷನ್ ಕ್ಯಾಪ್ಚರ್ 3D ತಮಿಳು ಚಲನಚಿತ್ರ ಕೊಚಡೈಯಾನ್‌ನಲ್ಲಿ ತನ್ನ ತಂದೆಯನ್ನು ನಿರ್ದೇಶಿಸಿದ್ದಾರೆ. ನಂತರ ಅವರು ಕೈಗಾರಿಕೋದ್ಯಮಿ ಮತ್ತು ನಟ ವಿಶಾಗನ್ ವನಂಗಮುಡಿ ಅವರನ್ನು ವಿವಾಹವಾದರು.
ಪ್ರಸ್ತುತಕ್ಕೆ ಬಂದರೆ, ಸುದ್ದಿ ಹೊರಬಂದ ನಂತರ, ಅನೇಕ ರಜನಿಕಾಂತ್ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪ್ರೀತಿ ಮತ್ತು ಬೆಂಬಲವನ್ನು ತೋರಿಸಲು ರಜನಿಕಾಂತ್‌ಗೆ ಟ್ವೀಟ್ ಮಾಡಲು ಪ್ರಾರಂಭಿಸಿದರು. ಪೊಂಗಲ್ ಸಂದರ್ಭದಲ್ಲಿ ತಮ್ಮ ಚೆನ್ನೈನ ಮನೆಯ ಹೊರಗೆ ಅಭಿಮಾನಿಗಳು ಮತ್ತು ಮಾಧ್ಯಮಗಳೊಂದಿಗೆ ಸೂಪರ್‌ಸ್ಟಾರ್ ಭೇಟಿಯಾದ ಎರಡು ದಿನಗಳ ನಂತರ ಅವರ ಹಿರಿಯ ಮಗಳು ಐಶ್ವರ್ಯಾ ವಿಚ್ಛೇದನದ ಸುದ್ದಿ ಬಂದಿದೆ.
ಪೊಂಗಲ್ ಹಬ್ಬದಂದು ರಜನಿಕಾಂತ್ ಅವರ ಫ್ಯಾನ್ಸ್ ಭೇಟಿ ಮಾಡಿರುವ ಪೋಸ್ಟ್‌ಗಳನ್ನು ನೆಟಿಜನ್ ಹಂಚಿಕೊಂಡಿದ್ದಾರೆ. ಅವರ ಮಗಳು ಮತ್ತು ಅಳಿಯ ಧನುಷ್ ಕೌಟುಂಬಿಕ ಬಿಕ್ಕಟ್ಟಿ ಎದುರುಸುತ್ತಿರುವ ಸಮಯದ್ಲಲೂ ರಜನಿಕಾಂತ್ ಅವರು ಸ್ಟ್ರಾಂಗ್ ಆಗಿರುವುದಕ್ಕಾಗಿ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ.