ದೇಶದಲ್ಲಿ ದೌರ್ಜನ್ಯ ನಡೆಯುತ್ತಿರುವಾಗ ಮೋದಿ ವಿಶ್ವನಾಯಕನಾಗಲು ಸಾಧ್ಯವಿಲ್ಲ: ಕಾಂಗ್ರೆಸ್ ವಾಗ್ದಾಳಿ
ದೇಶದಲ್ಲಿ ದೌರ್ಜನ್ಯ ನಡೆಯುತ್ತಿರುವಾಗ ಮೋದಿ ವಿಶ್ವನಾಯಕನಾಗಲು ಸಾಧ್ಯವಿಲ್ಲ. ಬಿಜೆಪಿ ಮನುಷ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಎಂದು ಮಣಿಪುರ ಜಿಲ್ಲಾ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ವಾಗ್ದಾಳಿ ನಡೆಸಿದರು.
ಉಡುಪಿ (ಜು.29) : ದೇಶದಲ್ಲಿ ದೌರ್ಜನ್ಯ ನಡೆಯುತ್ತಿರುವಾಗ ಮೋದಿ ವಿಶ್ವನಾಯಕನಾಗಲು ಸಾಧ್ಯವಿಲ್ಲ. ಬಿಜೆಪಿ ಮನುಷ್ಯ ವಿರೋಧಿ ನೀತಿ ಅನುಸರಿಸುತ್ತಿದೆ. ಎಂದು ಮಣಿಪುರ ಜಿಲ್ಲಾ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮರೋಳಿ ವಾಗ್ದಾಳಿ ನಡೆಸಿದರು.
ಮಣಿಪುರ ಘಟನೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ರಾಜಧರ್ಮ ಪಾಲಿಸು ಎಂಬ ವಾಜಪೇಯಿ ಗುಣ ಮೋದಿಗೆ ಅಧಿಕಾರದ ಕೊನೆಯ ಹಂತದಲ್ಲಾದರು ಬರಲಿ. ಮೈಥೇಯಿ -ಕುಕಿ- ನಾಗಾ ಸಮುದಾಯದಲ್ಲಿ ಎಷ್ಟು ಸಂಖ್ಯೆ ಇದೆ ಗೊತ್ತಿಲ್ಲ. ಆದರೆ ಚುನಾವಣೆ ಉದ್ದೇಶದಿಂದ ಬಿಜೆಪಿ ಸರಕಾರ ಮೈಥೇಯಿ ಪರವಾಗಿ ನಿಂತಿದೆ. ಅಷ್ಟೇ ಅಲ್ಲದೆ ಅದು ಮನುಷ್ಯ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
Udupi Files: ಉಡುಪಿ ಪೊಲೀಸರ ನಿರ್ಲಕ್ಷ್ಯದಿಂದ ಘಟನೆ ದೊಡ್ಡದಾಯ್ತ?
ಇದೇ ವೇಳೆ ಉಡುಪಿ ಘಟನೆ ಪ್ರಸ್ತಾಪಿಸಿದ ಮರೋಳಿ, ಯಶ್‌ಪಾಲ್ ಎಂಬ ಆನ್‌ಫಾಡ್ ವ್ಯಕ್ತಿ ಉಡುಪಿಗೆ ಒಳ್ಳೆಯ ಶಾಸಕನಾಗಲು ಸಾಧ್ಯವಿಲ್ಲ. ಉಡುಪಿಯ ಕಾಲೇಜು ವೀಡಿಯೋ ಘಟನೆ ಸಂಬಂಧ ನಿಖರವಾಗಿ ತನಿಖೆ ನಡೆಯುತ್ತಿದೆ ಆದರೆ ತನಿಖೆ ನಡುವೆ ಶಾಸಕ ಯಶ್ ಪಾಲ್ ಜಡ್ಜ್ ಮೆಂಟೇ ಕೊಟ್ಟುಬಿಟ್ಟಿದ್ದಾರೆ. ಪೊಲೀಸರನ್ನು ಮೀರಿ ನೀವು ಜಡ್ಜ್ ಮೆಂಟ್ ಕೊಡಬೇಡಿ. ಉಡುಪಿ ಘಟನೆಯಲ್ಲಿ ರಾಜಕೀಯ ಮಾಡುವುದು ನಿಲ್ಲಿಸಿ ನೈತಿಕತೆ, ತಾಕತ್ ಧಂ ಇದ್ರೆ ಮಣಿಪುರ ದೌರ್ಜನ್ಯವನ್ನು ನಿಲ್ಲಿಸಲು ಪ್ರಧಾನಿಗೆ ಹೇಳಲಿ ಎಂದು ಸವಾಲು ಹಾಕಿದರು.
ಉಡುಪಿ ಕಾಲೇಜು ವಿಡಿಯೋ ವಿವಾದ ವಿರುದ್ಧ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಂಧನ