ರಾಜ್ಯದ ಬಳಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ: ಅನ್ನಭಾಗ್ಯ ಯೋಜನೆ ಜಾರಿ ಕಷ್ಟಕಷ್ಟ
ಅನ್ನಭಾಗ್ಯ ಯೋಜನೆ ಜಾರಿಗೆ ತಯಾರಿದ್ದೇವೆ. ಹಣದ ಕೊರತೆಯೂ ಇಲ್ಲ. ಆದರೆ, ರಾಜ್ಯದಲ್ಲಿ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜೂ.19): ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸದಂತೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡ ಷಡ್ಯಂತ್ರ ನಡೆಸಿದೆ. ಅಕ್ಕಿ ಕೊಡಲು ನಾವು ತಯಾರಿದ್ದೇವೆ. ಹಣದ ಕೊರತೆಯೂ ಇಲ್ಲ. ಆದರೆ, ರಾಜ್ಯದಲ್ಲಿ ಈಗ ಸ್ವಲ್ಪವೂ ಅಕ್ಕಿ ದಾಸ್ತಾನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್ನ ಭಾಗ್ಯ ಯೋಜನೆ ಜಾರಿಗೊಳಿಸಲು ಅಕ್ಕಿ ಸಿಗ್ತಿಲ್ಲ. ತೆಲಂಗಾಣ ದಲ್ಲಿ ಅಕ್ಕಿ ಸಿಗ್ತಿಲ್ಲ, ಪಂಜಾಬ್ ನಲ್ಲೂ ಅಕ್ಕಿ ಸಿಗ್ತಿಲ್ಲ. ಛತ್ತೀಸ್‌ಘಡದ ಮುಖ್ಯಮಂತ್ರಿ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕರ್ನಾಟಕಕ್ಕೆ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (FCI) ನವರು ಅಕ್ಕಿ ಕೊಡ್ತೀವಿ ಅಂದು ಈಗ ಕೊಡಲ್ಲವೆಂದು ಹೇಳಿದ್ದಾರೆ. ಬಿಜೆಪಿಯವರಯ ಬಹಳ ಮಾತನಾಡ್ತಾರೆ. ಇದು ರಾಜಕಾರಣ ಅಲ್ವಾ. ಎಲ್ಲವೂ ಕೇಂದ್ರ ಸರ್ಕಾರದ್ದು ದೊಡ್ಡ ಷಡ್ಯಂತ್ರ ಮಾಡುತ್ತಿದೆ. ಅಕ್ಕಿ ಕೊಡಲು ನಾವು ತಯಾರಿದ್ದೇವೆ. ಆದರೆ, ರಾಜ್ಯದಲ್ಲಿ ಈಗ ಸ್ವಲ್ಪವೂ ಅಕ್ಕಿ ದಸ್ತಾನಿಲ್ಲ. ಆದರೆ, ನಮ್ಮ ಬಳಿ ಹಣದ ಕೊರತೆಯೂ ಇಲ್ಲ. ಹೊರಗಿನಿಂದ ತರಿಸಿಕೊಂಡು ಕೊಡಬೇಕು ಎಂದರು.
ಅನ್ನಭಾಗ್ಯ ಯೋಜನೆಗೆ ಮತ್ತೆ ಹಿನ್ನಡೆ: ಅಕ್ಕಿ ಸರಬರಾಜು ಸಾಧ್ಯವಿಲ್ಲವೆಂದ ತೆಲಂಗಾಣ ಸರ್ಕಾರ
ಬಿಜೆಪಿ ಎಷ್ಟೇ ರಾಜಕಾರಣ ಮಾಡಿದ್ರೂ ಅಕ್ಕಿ ಕೊಟ್ಟೇ ಕೊಡ್ತೀವಿ: ರಾಜ್ಯದ ಜನತೆಗೆ ಭರವಸೆ ಕೊಟ್ಟಂತೆ ಹೆಚ್ಚುವರಿ ತಲಾ 5 ಕೆ.ಜಿ. ಅಕ್ಕಿಯನ್ನು ಕೊಡಲು ವರ್ಷಕ್ಕೆ 10,098 ಕೋಟಿ ರೂ. ಆಗುತ್ತದೆ. ಕೇಂದ್ರ ಅಕ್ಕಿ ಇಟ್ಟುಕೊಂಡು ಕೊಡ್ತಿಲ್ಲ. ಕೆಲವರು ರಾಗಿ ಜೋಳ ಕೊಡಿ ಎಂದು ಸಲಹೆ ನೀಡುತ್ತಿದ್ದಾರೆ. ಜೋಳವನ್ನು ಎರಡು ಕಿಲೋ ಮಾತ್ರ ಕೊಡಬಹುದು. ಆದರೆ, ಐದು ಕೆಜಿ ಕೊಡೋದಕ್ಕೆ ಆಗಲ್ಲ. ಅದು ಕೂಡ 6 ತಿಂಗಳ ಜೋಳ ಕೊಡಬಹುದು ಅಷ್ಟೇ. ಬಿಜೆಪಿಗೆ ಮಾನ ಮಾರ್ಯದಿ ಇದ್ಯಾ? ಬಡವರ ವಿರೋಧಿ ಇವರು. ದುಡ್ಡು ಕೊಡ್ತೀವಿ ಅಕ್ಕಿ ಕೊಡಿ ಎಂದರೂ ಕೊಡುವುದಿಲ್ಲ ಅಂದ್ರೆ ಹೇಗೆ? ಕೇಂದ್ರ ಸರ್ಕಾರ ಅಕ್ಕಿ ಬೇಳಿತಾರಾ? ಅವರೇನಾದ್ರು ಜಮೀನ್ ಇಟ್ಟುಕೊಂಡಿದ್ದಾರಾ? ಅವರು ರಾಜ್ಯಗಳಿಂದ ಖರೀದಿ ಮಾಡೋದು. ಅಕ್ಕಿ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಎಷ್ಟೇ ರಾಜಕಾರಣ ಮಾಡಿದ್ರು ಸಹ ನಾವು ಅಕ್ಕಿಯನ್ನ ಕೊಟ್ಟೇ ಕೊಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದ ರೈತರಿಂದಲೂ ಅಕ್ಕಿ ಖರೀದಿ: ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಸಿಸಿಎಫ್) ಮತ್ತು ಕೇಂದ್ರಿಯ ಬಂಡಾರ್, ನಪಾಡ್ ಏಜೆನ್ಸಿಗಳಿಂದ ಕೊಟೇಷನ್ ಕರೆಯುತ್ತಿದ್ದೇವೆ. ಎಷ್ಟು ಕೊಡೋದಕ್ಕೆ ಆಗುತ್ತೆ ರೇಟ್ ಎಷ್ಟು ಆಗುತ್ತೆ ಎಲ್ಲಾ ನೋಡ್ತಿದ್ದೇವೆ. ಪ್ರತಿ ಕೆ.ಜಿ. ಅಕ್ಕಿಗೆ 36 ರೂ. 40 ಪೈಸೆ ಕೊಟ್ಟು ಖರೀದಿ ಮಾಡ್ತಿದ್ದೇವೆ. ನಮ್ಮ ರಾಜ್ಯದಲ್ಲಿಯೂ ಅಕ್ಕಿ ಖರೀದಿ ಮಾಡ್ತೀವಿ. ಇದಕ್ಕಾಗಿ ಟೆಂಡರ್ ಸಹ ಕರೀತೀವಿ. ಮತ್ತೊಮ್ಮೆ ಪಂಜಾಬ್ ಸರ್ಕಾರದ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಿಂದ ಕೇವಲ 6 ಗಂಟೆಗಳಲ್ಲಿ ಧಾರವಾಡ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ರಾಜ್ಯಕ್ಕೆ ಅಕ್ಕಿ ಕೊಡಿಸಿದ ಆಮ್‌ಆದ್ಮಿ ಪಕ್ಷ: ರಾಜ್ಯದ ಅಕ್ಕಿ ಕೊರತೆಯನ್ನು ನೀಗಿಸಲು ಪಂಜಾಬ್ ಸರ್ಕಾರ ಮುಂದೆ ಬಂದಿದೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಕೊರತೆಯಾಗುವ ಅಕ್ಕಿಯನ್ನು ನೀಡಲು ಸಿದ್ಧ ಅಂತ ಪಂಜಾಬ್ ಸರ್ಕಾರ ಭರವಸೆ ಕೊಟ್ಟಿದೆ. ಪರಸ್ಪರ ಸಹಕಾರ ತತ್ವದಡಿ ಅಕ್ಕಿ ಪೂರೈಕೆ ಮಾಡುವುದಾಗಿ ಮುಂದೆ ಬಂದಿದೆ. ಸೂಕ್ತ ಆಡಳಿತಾತ್ಮಕ ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ರಾಜ್ಯದ ಆಮ್ ಆದ್ಮಿ ಪಕ್ಷದ ನಾಯಕರ ಮನವಿಗೆ ಸ್ಪಂದಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಕರ್ನಾಟಕದ ಬಡವರ ಯೋಜನೆಗೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ಪಂಜಾಬ್ ಸರ್ಕಾರದ ತಿರ್ಮಾನ ಕುರಿತು ರಾಜ್ಯದ ಆಮ್ ಆದ್ಮಿ ಪಾರ್ಟಿ ಮಾಹಿತಿ ನೀಡಿದೆ.