ರಾಜ್ಯಪಾಲರ ಪತ್ರಗಳಿಗೆ ಸಂಪುಟದಿಂದಲೇ ಉತ್ತರ: ಸರ್ಕಾರದ ನಿರ್ಧಾರ
ರಾಜ್ಯಪಾಲರು ಸರ್ಕಾರಕ್ಕೆ ಬರೆದ 25 ಪತ್ರಗಳಿಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಉತ್ತರಿಸಲು ನಿರ್ಧರಿಸಲಾಗಿದೆ. ಈ ಮೂಲಕ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮುಂದುವರೆದಿದೆ.
ಬೆಂಗಳೂರು (ಅ.10): ರಾಜ್ಯಪಾಲರಿಂದ ಈವರೆಗೆ ಸರ್ಕಾರದ ಅಂಗವಾಗಿರುವ ಸಿಎಂ, ಸಚಿವರ ಮೇಲೆ ಆರೋಪದ ಬಗ್ಗೆ ಒಟ್ಟು 25 ಪತ್ರಗಳನ್ನು ಬರೆದಿದ್ದಾರೆ. ಇದಕ್ಕೆಲ್ಲವೂ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಪತರ ವ್ಯವಹಾರದ ಮೂಲಕವೇ ಉತ್ತರ ಕೊಡಲು ತೀರ್ಮಾನಿಸಲಾಗಿದೆ.
ಹೌದು, ರಾಜ್ಯದಲ್ಲಿ ರಾಜಭವನ ವರ್ಸಸ್ ರಾಜ್ಯ ಸರ್ಕಾರದ ಫೈಟ್ ಮುಂದುವರಿಯಲಿದೆ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ರಾಜ್ಯಪಾಲರ ಪತ್ರ ವ್ಯವಹಾರದ ಕುರಿತು ಚರ್ಚೆ ಮಾಡಲಾಗುತ್ತಿದ್ದು, ರಾಜ್ಯಪಾಲರಿಗೆ ಕ್ಯಾಬಿನೆಟ್ ಮೂಲಕವೇ ಎಲ್ಲಾ ಪತ್ರಗಳಿಗೂ ಉತ್ತರ ನೀಡಬೇಕು ಎಂದು ಸರ್ಕಾರದಿಂದ ನಿರ್ಧರಿಸಲಾಗಿದೆ. ಕಳೆದ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಸರ್ಕಾರದಿಂದ ನಿರ್ಧಾರ ಕೈಗೊಳ್ಳಲಾಗಿತ್ತು. ಅದಾದ ಬಳಿಕ ಒಟ್ಟು 25 ಪತ್ರಗಳಿಗೆ ಉತ್ತರ ನೀಡುವುದು ಬಾಕಿಯಿದೆ. ಈವರೆಗೆ ರಾಜ್ಯಪಾಲರಿಂದ ಸರ್ಕಾರಕ್ಕೆ ಬಂದಿರುವ 25 ಪತ್ರಗಳಿಗೆ ಇನ್ನೂ ಉತ್ತರ ನೀಡುವುದು ಬಾಕಿಯಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಆರ್‌ಎಸ್‌ಎಸ್ ಮಾತು ಕೇಳದ ನರೇಂದ್ರ ಮೊದಿ ಪಿಎಂ ಸ್ಥಾನದಿಂದ ವಜಾ ಆಗ್ತಾರೆ: ಸಚಿವ ಸಂತೋಷ್ ಲಾಡ್
ರಾಜ್ಯಪಾಲರಿಂದ ಬಂದ ಎಲ್ಲ ಪತ್ರಗಳ ಬಗ್ಗೆ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆ ಮಾಡಲಾಗುತ್ತದೆ. ಇದಾದ ಬಳಿಕ ಯಾವ ಪತ್ರಗಳಿಗೆ ಉತ್ತರ ನೀಡಬೇಕು, ಯಾವುದಕ್ಕೆ ಉತ್ತರ ನೀಡಬಾರದು ಎಂದು ಎಲ್ಲ ಸಚಿವ ಸಂಪುಟದಲ್ಲಿಯೇ ತೀರ್ಮಾನಿಸಲಾಗುವುದು. ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಹಿಂದೆ ರಾಜ್ಯಪಾಲರಿಗೆ ಉತ್ತರ ನೀಡುತ್ತಿದ್ದರು. ಆದರೆ, ಇದೀಗ ಕಳೆದ ಬಾರಿಯ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದಂತೆ ಸರ್ಕಾರದ ತೀರ್ಮಾನದ ಬಳಿಕ ರಾಜ್ಯಾಪಾಲರ ಯಾವುದೇ ಪತ್ರಕ್ಕೂ ಚೀಫ್ ಸೆಕ್ರೆಟರಿ ಅವರಿಂದ ಉತ್ತರ ನೀಡಲಾಗಿಲ್ಲ. ಹೀಗಾಗಿ, ರಾಜ್ಯಪಾಲರು ತಮ್ಮ ಕೆಲವು ಪತ್ರಗಳಿಗೆ ಮತ್ತೊಮ್ಮೆ ನೆನಪೋಲೆ ಕಳುಹಿಸಿದ್ದಾರೆ.