Asianet Suvarna News Asianet Suvarna News

ಹುಬ್ಬಳ್ಳಿಯಿಂದ ಪಂಡರಾಪುರಕ್ಕೆ ನೇರ ರೈಲು: ಸಚಿವ ಜೋಶಿ

ಮೈಸೂರು- ಸೋಲಾಪುರ ರೈಲು ನಂ. 16535/36 ಪಂಢರಪುರ ವರೆಗೆ ವಿಸ್ತರಿಸುವ ಬಗ್ಗೆ ಬಹಳ ದಿನಗಳಿಂದ ಇದ್ದ ಹುಬ್ಬಳ್ಳಿ- ಬಾಗಲಕೋಟೆ ಹಾಗೂ ವಿಜಯಪುರದ ಜನರ ಬೇಡಿಕೆ ಈಗ ಕೈಗೂಡಿದೆ. ಹೀಗಾಗಿ, ಈಗ ಹುಬ್ಬಳ್ಳಿ ಗದಗ ಹಾಗೂ ಬಾಗಲಕೋಟೆ ಭಾಗದ ಜನರಿಗೆ ನೇರ ಪಂಢರಾಪುರದ ವಿಠೋಬ ದರ್ಶನದ ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.

Direct train from Hubli to Pandarapura says Union minister Joshi rav
Author
First Published Aug 17, 2023, 12:10 PM IST

ಹುಬ್ಬಳ್ಳಿ (ಆ.17) :  ಮೈಸೂರು- ಸೋಲಾಪುರ ರೈಲು ನಂ. 16535/36 ಪಂಢರಪುರ ವರೆಗೆ ವಿಸ್ತರಿಸುವ ಬಗ್ಗೆ ಬಹಳ ದಿನಗಳಿಂದ ಇದ್ದ ಹುಬ್ಬಳ್ಳಿ- ಬಾಗಲಕೋಟೆ ಹಾಗೂ ವಿಜಯಪುರದ ಜನರ ಬೇಡಿಕೆ ಈಗ ಕೈಗೂಡಿದೆ. ಹೀಗಾಗಿ, ಈಗ ಹುಬ್ಬಳ್ಳಿ ಗದಗ ಹಾಗೂ ಬಾಗಲಕೋಟೆ ಭಾಗದ ಜನರಿಗೆ ನೇರ ಪಂಢರಾಪುರದ ವಿಠೋಬ ದರ್ಶನದ ಅವಕಾಶ ದೊರೆತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad joshi) ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ಮೈಸೂರಿನಿಂದ ಹುಬ್ಬಳ್ಳಿ(Mysuru-hubballi) ಮಾರ್ಗವಾಗಿ ಗದಗ, ಬಾಗಲಕೋಟೆ, ವಿಜಯಪುರದಿಂದ ಸೊಲಾಪುರಕ್ಕೆ ಓಡಾಡುತ್ತಿದ್ದ, ಗೋಲಗುಂಬಜ್‌ ಎಕ್ಸ್‌ಪ್ರೆಸ್‌ ರೈಲ(Golagumbaj Express train)ನ್ನು ಪಂಢರಪುರಕ್ಕೆ ವಿಸ್ತರಿಸಲು ಈ ಭಾಗದ ಜನರು ಇಟ್ಟಿದ್ದ ಬೇಡಿಕೆಯಂತೆ ಸಚಿವರು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿ ನಿರಂತರ ಪ್ರಯತ್ನದ ಫಲವಾಗಿ ಆ. 14 ರಂದು ನೈರುತ್ಯ ರೈಲ್ವೆಯ ಪ್ರಸ್ತಾವನೆಯಂತೆ ಈ ವಿಸ್ತರಣೆಗೆ ಒಪ್ಪಿಗೆ ನೀಡಿದೆ.

ಪಂಢರಾಪುರಕ್ಕೆ 600 ಕಾರುಗಳ ಸೇನೆಯ ಜತೆ ಹೋದ ಕೆಸಿಆರ್‌: ಚಂದ್ರಶೇಖರ್ ರಾವ್‌ ವಿರುದ್ಧ ಬಿಜೆಪಿ, ಶಿವಸೇನೆ, ಎನ್‌ಸಿಪಿ ಆಕ್ರೋಶ

ಅದರಂತೆ ಪ್ರತಿದಿನ ಮೈಸೂರಿನಿಂದ ಮಧ್ಯಾಹ್ನ 3-45ಕ್ಕೆ ಹೊರಟು ಪಂಢರಪುರವನ್ನು ಮರುದಿನ ಮಧ್ಯಾಹ್ನ 12-25ಕ್ಕೆ ತಲುಪಿ, ಪುನಃ ಪಂಢರಪುರದಿಂದ ಮಧ್ಯಾಹ್ನ 1 ಗಂಟೆಗೆ ಹೊರಟು ಮೈಸೂರನ್ನು ಮರುದಿನ 10-30ಕ್ಕೆ ತಲುಪುವುದು. ವಿಸ್ತರಣೆ ಆರಂಭದ ದಿನಾಂಕ ಶೀಘ್ರದಲ್ಲೇ ಪ್ರಕಟಣೆಯಾಗಲಿದೆ. ಈ ರೈಲಿನ ವಿಸ್ತರಣೆಗೆ ಒಪ್ಪಿಗೆ ನೀಡಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸುವುದಾಗಿ ಜೋಶಿ ತಿಳಿಸಿದ್ದಾರೆ.

Follow Us:
Download App:
  • android
  • ios