ಧಾರವಾಡ, (ನ.22): ಮರಾಠ ಪ್ರಾಧಿಕಾರ ರಚನೆಗೆ ಕನ್ನಡ ಪ ಹೋರಾಟಗಾರ ವಾಟಾಳ್ ನಾಗರಾಜ್ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಮರಾಠ ಮುಖಂಡ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಧಾರವಾಡ ಮರಾಠ ವಿದ್ಯಾಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜು ಕದಂ ಎನ್ನುವಾತ ಮತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನೀವು ಫೋಸ್ಟರ್ ಸುಟ್ಟರೆ. ನಾವು ನಿಮ್ಮನ್ನೆ ಬೆಂಕಿ ಹಚ್ಚುತ್ತೇವೆ. ನಾವು ತಾಳ್ಮೆಯಿಂದ ಇದ್ದೇವೆ. ನಮ್ಮನ್ನು ಕೆಣಕಬೇಡಿ. ತಾಳ್ಮೆ ಬಿಟ್ಟು ನಾವು ಉಗ್ರ ಹೋರಾಟಕ್ಕೆ ನಾವು ಇಳಿಯುತ್ತೇವೆ ಎಂದು ಧಾರವಾಡ ಮರಾಠ ವಿದ್ಯಾಪ್ರಸಾರಕ ಮಂಡಳಿ ಮಾಜಿ ಅಧ್ಯಕ್ಷ ಮಂಜು ಕದಂ ವಾಟಾಳ್ ನಾಗಾರಾಜ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. 

ಬಿಜೆಪಿ ಶಾಸಕನ ನೇತೃತ್ವದಲ್ಲಿ ಸಂಭ್ರಮಾಚರಣೆ, ಮತ್ತೊಂದು ಬೇಡಿಕೆ ಇಟ್ಟ ಮರಾಠಿಗರು..!

ವಾಟಾಳ್ ನಾಗರಾಜ್ ಅವರ ಹೋರಾಟಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ, ಇನ್ನು ನಾವು ಜಾತೀಯತೆ, ಪಕ್ಷ ಮರೆತು ಹೋರಾಟಕ್ಕೆ ಇಳಿಯುತ್ತೇವೆ. ನಮ್ಮ ಬಗ್ಗೆ ವಾಟಾಳ್ ನಾಗರಾಜ್ ಬಾಯಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ. ಅವಹೇಳನಕಾರಿಯಾಗಿ ಮಾತನಾಡುವುದು. ಡಿಸೆಂಬರ್ 5 ಕ್ಕೆ ಪ್ರತಿಭಟನೆ ಮಾಡಿದರೆ ನಾವು ಎಲ್ಲಾ ಮರಾಠ ಜನರು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದಿದ್ದಾರೆ.

ನೀವು ಹೇಗೆ ಕರ್ನಾಟಕ ಬಂದ್ ಮಾಡ್ತಿರಿ ನೋಡ್ತಿವಿ.ಬಂದ್ ಹಿಂದೆ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ರಸ್ತೆಗಿಳಿಯುತ್ತೇವೆ. ನಮ್ಮನ್ನು ನೀವು ಕೆಣಕಬೇಡಿ, ನಮ್ಮನ್ನ ಕೆಣಕಿದರೆ ನಿಮಗೆ ಅವಮಾನ ಆಗುತ್ತೆ. ನಮ್ಮ ಜಾತಿಗೆ ಅವಮಾನ ಮಾಡಿದರೆ ನಾವು ಹೋರಾಟ ಮಾಡುತ್ತೇವೆ. ನಾವು ಎಲ್ಲದಕ್ಕೂ ಸಿದ್ದರಾಗಿದ್ದೇವೆ ಎಂದು ವಿಡಿಯೋನಲ್ಲಿ  ಖಡಕ್ ವಾರ್ನಿಂಗ್ ನೀಡಿದ್ದಾನೆ. 

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದು ಕಾದು ನೋಡಬೇಕಿದೆ.