ಬಿಜೆಪಿ ಶಾಸಕನ ನೇತೃತ್ವದಲ್ಲಿ ಸಂಭ್ರಮಾಚರಣೆ, ಮತ್ತೊಂದು ಬೇಡಿಕೆ ಇಟ್ಟ ಮರಾಠಿಗರು..!
ಬೆಳಗಾವಿಯಲ್ಲಿ ಮರಾಠ ಸಮುದಾಯದ ಮುಖಂಡರಿಂದ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ರಾಜ್ಯ ಸರ್ಕಾರದ ಮುಂದೆ ಮತ್ತೊಂದು ಡಿಮ್ಯಾಂಡ್ ಇಟ್ಟಿದ್ದಾರೆ.
ಬೆಳಗಾವಿ, (ನ.16): ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಇನ್ನೆರಡು ಬೈ ಎಲೆಕ್ಷನ್ ಎದುರಾಗುತ್ತಿದ್ದ ಇದಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಮೊದಲ ಬಾಗವಾಗಿ ಬಸವಕಲ್ಯಾಣ ಉಪ ಚುನಾವಣೆ ಹಿನ್ನೆಲೆಯಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಅದಕ್ಕೆ ಇಡೀ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಜಾತಿ ಆಧಾರಿತ ಪ್ರಾಧಿಕಾರ ಅಥವಾ ಭಾಷಾ ಅಲ್ಪಸಂಖ್ಯಾತರಿಗೆ ಪ್ರಾಧಿಕಾರ ರಚನೆ ಮಾಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿದೆ.
ಮತ್ತೊಂದೆಡೆ ಬಯಸದೇ ಬಂದ ಭಾಗ್ಯದಿಂದ ಬೆಳಗಾವಿಯಲ್ಲಿ ಮರಾಠ ಸಮುದಾಯದ ಮುಖಂಡರಿಂದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಮರಾಠ ಅಭಿವೃದ್ಧಿ ಮಂಡಳಿ ಮಾಡಿ ಸಂಕಷ್ಟಕ್ಕೆ ಸಿಲುಕಿದ ಬಿಎಸ್‌ವೈ
ಹೌದು...ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ನೇತೃತ್ವದಲ್ಲಿ ನಗರದ ಸಂಭಾಜಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಸಂಭ್ರಮಾಚರಣೆ ಮಾಡಲಾಗಿದೆ.
ಇನ್ನು ಇದೇ ವೇಳೆ ಬೆಳಗಾವಿಯಲ್ಲೇ ಮರಾಠ ಅಭಿವೃದ್ಧಿ ಪ್ರಾಧಿಕಾರ ಕಚೇರಿ ಸ್ಥಾಪನೆಗೆ ಆಗ್ರಹಿಸಿದರು. ಬಹುದಿನಗಳ ಬೇಡಿಕೆ ಈಡೇರಿದೆ ಎಂದ ಬಿಜೆಪು ಶಾಸಕ ಅನಿಲ್ ಬೆನಕೆ, ಮರಾಠ ಸಮುದಾಯಕ್ಕೆ ಸಿಎಂ ಬಿಎಸ್‌ವೈ ದೀಪಾವಳಿ ಉಡುಗೊರೆ ನೀಡಿದ್ದಾರೆ.
ಇದರಿಂದ ಮರಾಠ ಸಮುದಾಯಕ್ಕೆ ಹರ್ಷವಾಗಿದೆ ಎಂದರು.