ಕ್ರಿಸ್ಟಲ್ ಉಪ್ಪು ಪತ್ತೆ ಪ್ರಕರಣ; ಹಿಂಡಲಗಾ ಕಾರಾಗೃಹದ ಮೂವರು ಕೈದಿಗಳ ವಿರುದ್ಧ ಕೇಸು
ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಧಲ್ಲಿ ನಿಷೇಧಿತ ಮೊಬೈಲ್ ಮತ್ತು ಕ್ರಿಸ್ಟಲ್ ಉಪ್ಪು ಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಹಿಂಡಲಗಾ ಕೇಂದ್ರ ಕಾರಾಗೃಹದ ಅಧಿಕಾರಿಗಳು ಬಂಧಿಯಾಗಿರುವ ಮೂವರ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ (ಆ.28) : ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹಧಲ್ಲಿ ನಿಷೇಧಿತ ಮೊಬೈಲ್ ಮತ್ತು ಕ್ರಿಸ್ಟಲ್ ಉಪ್ಪು ಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ಹಿಂಡಲಗಾ ಕೇಂದ್ರ ಕಾರಾಗೃಹದ ಅಧಿಕಾರಿಗಳು ಬಂಧಿಯಾಗಿರುವ ಮೂವರ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆ.28 ರಂದು ಹೆಣಕ್ಕೆ ಬಳಸುವ ಉಪ್ಪು ಕೈದಿಗಳ ಆಹಾರಕ್ಕೆ ಬಳಕೆ ? ಎಂಬ ಶಿರ್ಷಿಕೆ ಅಡಿ ಆ.28ರ ಸಂಚಿಕೆಯಲ್ಲಿ ಕನ್ನಡಪ್ರಭ ವಿಸ್ತೃತ ವರದಿಯನ್ನು ಪ್ರಕಟಿಸಿ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕುರಿತು ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತ ಕಾರಾಗೃದ ಅಧಿಕಾರಿಗಳು ಕಾರಾಗೃಹದಲ್ಲಿ ನಿಷೇಧಿಸಲಾದ ಮೊಬೈಲ್ ಹಾಗೂ ಕ್ರಿಸ್ಟಲ್ ಉಪ್ಪು ಪತ್ತೆಯಾಗಿರುವ ಕುರಿತು ತನಿಖೆಗೆ ಮುಂದಾಗಿದ್ದಾರೆ. ಅಲ್ಲದೇ ಈ ಪ್ರಕರಣದ ಕುರಿತು ಈಗಾಗಲೇ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ವಿ.ಕೃಷ್ಣಮೂರ್ತಿ ಅವರು ಮೂವರ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹೆಣಕ್ಕೆ ಬಳಸುವ ಉಪ್ಪು ಕೈದಿಗಳ ಆಹಾರಕ್ಕೆ?: ವಿಡಿಯೋ ವೈರಲ್
ತುಮಕೂರು ಜಿಲ್ಲೆಯ ಕುಣಿಗಲ… ತಾಲೂಕಿನ ಕಲ್ಲುಪಾಳ್ಯಯ ಸಾಯಿಕುಮಾರ ಅಲಿಯಾಸ… ಸುರೇಶ ಅಲಿಯಾಸ್ ಕುಣಿಗಲ್ ಸುರಿ ತಂದೆ ನಾಂಗಲಿಂಗಯ್ಯಾ, ವಿಜಯಪುರದ ನೆಹರು ನಗರದ ಅಬುಬಕರ ಹಸನಸಾಬ ಕಾಠೆ ಹಾಗೂ ಚಿಕ್ಕೋಡಿ ತಾಲೂಕಿ ಕೆರೂರುದ ರಾಹುಲ… ಸಯ್ಯಾಜಿ ಘಾಟಗೆ ಎಂಬ ಮೂವರು ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ?:
ವಿವಿಧ ಪ್ರಕರಣಗಳಡಿ ಅಪರಾಧವೆಸಗಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಜತೆಗೂಡಿ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳನ್ನು ಹೊಂದುವುದು ಅಪರಾಧವೆಂದು ಗೊತ್ತಿದ್ದರೂ ಕೇಂದ್ರ ಕಾರಾಗೃಹದ ಅಂದೇರಿ ವಿಭಾಗದ ಹಿಂಭಾಗದ ಕೊಠಡಿಗಳಲ್ಲಿ ಆರೋಪಿ ಅಬೂಬಕರ ಕಾರೆ ಎಂಬಾತನು ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.
ರಾಹುಲ… ಸಯ್ಯಾಜಿ ಘಾಟಗೆ ಎಂಬಾತನು ಕುಳಿತಿರುವ ವಿಡಿಯೋವನ್ನು ತಮ್ಮ ಮೊಬೈಲ್‌ಗಳಲ್ಲಿ ಮಾಡಿಕೊಂಡಿದ್ದಾರೆ. ವಿಚಾರಣಾಧೀನ ಕೈದಿ ಸಾಯಿಕುಮಾರ ಅಲಿಯಾಸ್ ಸುರೇಶ ಅಲಿಯಾಸ್ ಕುಣಿಗಲ… ಸೂರಿ ಎಂಬಾತನನ್ನು ಬಂಧಿಸಿಡಲಾಗಿದ್ದು ಅವನು ತನ್ನ ಕೊಠಡಿಯಲ್ಲಿ ಮೊಬೈಲ್‌ನ್ನು ಪ್ರದರ್ಶಿಸುತ್ತಿರುವ ವಿಡಿಯೋ ಮಾಡಿದ್ದು ಆತನು ಎರಡು ಉಪ್ಪಿನ ಪಾಕಿಟುಗಳನ್ನು ವಿಡಿಯೋ ಮಾಡಿ ಕೇಂದ್ರ ಕಾರಾಗೃಹದಲ್ಲಿ ಕಳಪೆ ಮಟ್ಟದ ಆಹಾರ ಸರಬರಾಜು ಮಾಡುತ್ತಿದ್ದಾರೆ. ಅಲ್ಲದೆ ಕಾರಾಗೃಹದ ಅಧಿಕಾರಿಗಳ ಬಗ್ಗೆ ಅನಪೇಕ್ಷಿತ ಮಾತುಗಳನ್ನು ಆಡಿ ಅದನ್ನು ವಿಡಿಯೋ ಮಾಡಿಕೊಂಡು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಕೇಂದ್ರ ಕಾರಾಗೃಹದಲ್ಲಿ ಮೊಬೈಲ… ನಂತಹ ಎಲೆಕ್ಟ್ರಿಕಲ… ಸಾಧನಗಳ ಉಪಯೋಗಕ್ಕೆ ನಿಷೇಧ ಇದ್ದರೂ ಇವರೆಲ್ಲರೂ ಎಲೆಕ್ಟ್ರಿಕಲ… ಸಾಧನವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಗಾವಿ: ಜೈಲಧಿಕಾರಿಗಳಿಂದಲೇ ನನ್ನ ಮಗನ ಹತ್ಯೆಗೆ ಯತ್ನ, ಕೈದಿ ತಾಯಿ ಆರೋಪ