ಪಾವತಿಯಾಗದ ಕಾಮಗಾರಿ ಬಿಲ್; ಯಂತ್ರ ಮಾರುವ ಸ್ಥಿತಿಯಲ್ಲಿ ಉತ್ತರ ಕರ್ನಾಟಕ ಗುತ್ತಿಗೆದಾರರು!
ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು 19,000 ಸಾವಿರ ಕೋಟಿ ಬಾಕಿಯಿದೆ. ಬಾಕಿ ಪಾವತಿ ವಿಳಂಬದಿಂದಾಗಿ ಉತ್ತರ ಕರ್ನಾಟಕ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೀಘ್ರ ಬಾಕಿ ಬಿಲ್ ಪಾವತಿ ಮಾಡುವಂತೆ ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶುಭಾಷ್ ಪಾಟಿಲ ಆಗ್ರಹಿಸಿದ್ದಾರೆ.
ವರದಿ : ಪರಮೇಶ ಅಂಗಡಿ
ಧಾರವಾಡ (ಜೂ.8) : ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು 19,000 ಸಾವಿರ ಕೋಟಿ ಬಾಕಿಯಿದೆ. ಅದರಲ್ಲಿ ಲೋಕೋಪಯೋಗಿ ಇಲಾಖೆಯ ಸುಮಾರು 4,000 ಸಾವಿರ ಕೋಟಿ,ಬೃಹತ್ ನೀರಾವರಿ ಇಲಾಖೆಯ ಸುಮಾರು 8000 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯ ಸುಮಾರು 2000 ಸಾವಿರ ಕೋಟಿ ಮತ್ತು ಇತರೆ ಎಲ್ಲಾ ಇಲಾಖೆ ಸೇರಿ ಸುಮಾರು 5000 ಕೋಟಿ ಹಣ ಬಾಕಿ ಇರುತ್ತದೆ. ಇದರಿಂದಾಗಿ ಗುತ್ತಿಗೆದಾರರು ಆರ್ಥಿಕವಾಗಿ ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬ್ಯಾಂಕಿನ ಸಾಲದ ಬಡ್ಡಿಯನ್ನು ತುಂಬಲಾಗದ್ದಕ್ಕೆ ಗುತ್ತಿಗೆದಾರರ ಯಂತ್ರೋಪಕರಣಗಳನ್ನು ಮತ್ತು ಆಸ್ತಿಯನ್ನು ಬ್ಯಾಂಕಿನ ಅಧಿಕಾರಿಗಳು ಮುಟ್ಟುಗೋಲು ಹಾಕಿಕೋಳ್ಳುತ್ತಿದ್ದಾರೆ. ಸಮಾಜದಲ್ಲಿ ಅವಮಾನವಾಗುತ್ತಿರುವುದರಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ.
ಈಗಾಗಲೇ KRIDL (Land army) ಈ ಇಲಾಖೆಯಿಂದ ಉಪ ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸಿದ ದಾವಣಗೆರೆಯ ಸಂತೇಬೆನ್ನೂರಿನ ಗುತ್ತಿಗೆದಾರ ಶ್ರೀ ಪಿ. ಗೌಡರ ರವರು ತಾವು ನಿರ್ವಹಿಸಿದ ಕಾಮಗಾರಿಯ ಸುಮಾರು 80 ಲಕ್ಷ ಹಣವು KRIDL ನಿಂದ ಬಿಲ್ ಪಾವತಿಯಾಗದೇ ಮತ್ತು ಅಧಿಕಾರಿಗಳ ಕಿರುಕುಳ ತಾಳಲಾರದೇ ಮನನೊಂದು ಮೇ 26, 2024 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಅವರು ನಿರ್ವಹಿಸಿದ ಕಾಮಗಾರಿಯ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಗುತ್ತಿಗೆದಾರರ ಕ್ಷೇಮನಿಧಿ ಕಮೀಟಿಯಿಂದ ದೊರೆಯುವ ಹಣವಲ್ಲದೇ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಬೇಕು ಎಂದು ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶುಭಾಷ್ ಪಾಟಿಲ ಆಗ್ರಹಿಸಿದ್ದಾರೆ.
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ವಿಳಂಬ: ಸರ್ಕಾರವೇ ಜನರ ಶತ್ರು: ಹೈಕೋರ್ಟ್ ಕಟು ನುಡಿ
ಇದಲ್ಲದೇ ಅಧಿಕಾರಿಗಳು ಗುತ್ತಿಗೆದಾರರ ಹಣವನ್ನು ಹಿರಿತನದ ಆಧಾರದಲ್ಲಿ ಪಾವತಿಸದೇ ಯಾರು ಹಣ(ಲಂಚ) ನೀಡುತ್ತಾರೆ ಅಂತಹ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಆದ್ದರಿಂದ ಈ ಎಲ್ಲ ವಿಷಯಗಳ ಬಗ್ಗೆ ತಾವು ಗಮನ ಹರಿಸಿ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಈ ಕೂಡಲೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಗುತ್ತಿಗೆದಾರರ ಕ್ಷೇಮನಿಧಿ ಕಮೀಟಿಯಲ್ಲಿ ದಕ್ಷಿಣ ಕರ್ನಾಟಕದ ಪ್ರತಿನಿಧಿಗಳು ಮಾತ್ರವಿದ್ದು, ಉತ್ತರ ಕರ್ನಾಟಕದ ಸಿವಿಲ್ ಗುತ್ತಿಗೆದಾರರ ಸಂಘದ ಪಧಾಧಿಕಾರಿಗಳನ್ನು ಅದರಲ್ಲಿ ಸೇರಿಸಬೇಕೆಂದು ನಾವು ಸುಮಾರು 4 ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ ಆದರೆ ಇಲ್ಲಿಯವರೆಗೆ ನಮ್ಮನ್ನು ಗುತ್ತಿಗೆದಾರರ ಕ್ಷೇಮನಿಧಿ ಕಮೀಟಿಯಲ್ಲಿ ಸೇರಿಸಲಾಗಿಲ್ಲ.ಕಳೆದ ವರ್ಷ ಉತ್ತರ ಕರ್ನಾಟಕದ ಸುಮಾರು 7 ಜನ ಗುತ್ತಿಗೆದಾರರು ಮೃತಪಟ್ಟಿದ್ದು ಅವರಿಗೆ ಗುತ್ತಿಗೆದಾರರ ಕ್ಷೇಮನಿಧಿಯಿಂದ ದೊರೆಯುವ ಪರಿಹಾರ ಧನವನ್ನು ಕೊಡಬೇಕೆಂದು ನಮ್ಮ ಸಂಘದಿಂದ ಗುತ್ತಿಗೆದಾರರ ಕ್ಷೇಮನಿಧಿ ಕಮೀಟಿಯ ಅಧ್ಯಕ್ಷರಾದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿರುತ್ತೇವೆ ಆದರೆ ಅವರಿಗೆ
ಇನ್ನುವರೆಗೂ ಗುತ್ತಿಗೆದಾರರ ಕ್ಷೇಮನಿಧಿಯಿಂದ ಪರಿಹಾರ ಧನ ಪಾವತಿಯಾಗಿಲ್ಲ ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕ್ಷೇಮನಿಧಿಯ ಪರಿಹಾರ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದರು..
ಹೀಗೆ ಸರ್ಕಾರಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಸರ್ಕಾರದ ಎಲ್ಲ ತೆರಿಗೆಗಳನ್ನುಭರಿಸಿದರೂ ಸಹ ಗುತ್ತಿಗೆದಾರರಿಗೆ ಸುಖಾಸುಮ್ಮನೆ ಮಾನಸಿಕವಾಗಿ ಹಿಂಸೆ ನೀಡುವುದನ್ನು ಇನ್ನೂಮೇಲಾದರೂ ನಿಲ್ಲಿಸಬೇಕು. ಇಲ್ಲವಾದರೇ ನಮ್ಮ ಸಂಘದಿಂದ ಈ ಬಗ್ಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.
ಕೆಲ ಗುತ್ತಿಗೆದಾರರ ಲೈಸನ್ಸ್‌ಗಳು ಅನಧಿಕೃತವಾಗಿವೆ ಎಂದು ಈ ಮೊದಲು ತಿಳಿದು ಬಂದಿತ್ತು ಈಬಗ್ಗೆ ನಾವು ನಮ್ಮ ಸಂಘದಿಂದ ದಿನಾಂಕ 17-12-2020, 15-03-2021, 10.08.2023 ರಂದು ಮತ್ತು 14.12.2023 ರಂದು ಪತ್ರ ಬರೆದು ಸಂಪೂರ್ಣ ವಿವರವನ್ನು ನಮ್ಮ ಸಂಘಕ್ಕೆ ನೀಡಬೇಕೆಂದು ಮುಖ್ಯ ಅಭಿಯಂತರರು ಉತ್ತರ ವಲಯ (ಸಂಪರ್ಕ ಮತ್ತು ಕಟ್ಟಡ) ಮತ್ತು ಸಂಬಂಧಪಟ್ಟ ಸಚಿವರನ್ನು ವಿನಂತಿಸಿಕೊಂಡಿದ್ದೆವು. ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಅಲ್ಲದೇ ಅಕ್ರಮ ಲೈಸನ್ಸ್‌ದಾರರು ಯಾರು ಎಂಬ ಬಗ್ಗೆ ಸಂಘಕ್ಕೆ ಮಾಹಿತಿ ನೀಡಿರುವುದಿಲ್ಲ ಇದರಿಂದ ಗುತ್ತಿಗೆದಾರರಿಗೆ ತುಂಬಾ ಅನ್ಯಾಯವಾಗಿದೆ ಇದೊಂದು ದೊಡ್ಡ ಹಗರಣವಾಗಿದ್ದು ಇದನ್ನು ಮುಚ್ಚುವ ಪ್ರಯತ್ನ ನಡೆದಿರುವುದು ತಿಳಿದು ಬಂದಿದೆ.ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮ ಸಂಘಕ್ಕೆ ಮಾಹಿತಿ ನೀಡಬೇಕು.
ಸರ್ಕಾರದ ಭ್ರಷ್ಟಾಚಾರ ಬಗ್ಗೆ ಮಾಹಿತಿ ಇಲ್ಲ: ಕೆಂಪಣ್ಣ ಉಲ್ಟಾ
ಮೊದಲು ಮಾಹಿತಿ ಹಕ್ಕು ನಿಯಮದಡಿ ಕಾಮಗಾರಿ ಬಗ್ಗೆ ಮಾಹಿತಿ ಕೇಳುತ್ತಾರೆ ನಂತರ ಈ ಕಾಮಗಾರಿ ಕಳಪೆಯಾಗಿದೆ ಎಂದು ತಕರಾರು ಮಾಡುತ್ತಾರೆ ಗುತ್ತಿಗೆದಾರರು ಕಾಮಗಾರಿಯನ್ನು
ಸರಿಯಾಗಿ ನಿರ್ವಹಿಸಿದರೂ ಕೂಡ ಬಿಲ್ಲುಗಳನ್ನು ತಡೆ ಹಿಡಿದಲ್ಲಿ ಕಾಮಗಾರಿಗೆ ಹೂಡಿರುವ ಹಣವು ವಿಳಂಬವಾಗಿ ತೊಂದರೆ ಅನುಭವಿಸುವುದನ್ನು ತಪ್ಪಿಸಿಕೊಳ್ಳಲು ಮಾಹಿತಿ ಹಕ್ಕು ಕಾರ್ಯಕರ್ತರಿಗೆಅಲ್ಪ-ಸ್ವಲ್ಪ ಹಣವನ್ನು ಕೊಡಲು ಗುತ್ತಿಗೆದಾರರು ಒಪ್ಪಿಕೊಳ್ಳುವರು. ಆದ್ದರಿಂದ ಪದೇಪದೇ ಈ ರೀತಿ ದೂರು ನೀಡುವುದು ನಂತರ ಗುತ್ತಿಗೆದಾರರಿಂದ ಲಂಚ ಪಡೆದು ದೂರನ್ನು ವಾಪಸ್ ಪಡೆಯುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೇಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಅಲ್ಲದೇ ದೂರುಗಳು ಬಂದಾಗ ಗುತ್ತಿಗೆದಾರರ ಕಾಮಗಾರಿಗಳ ಪರಿಶೀಲನೇ ಸಲುವಾಗಿ ಗುತ್ತಿಗೆದಾರರ ಬಿಲ್ಲುಗಳನ್ನು ತಡೆಹಿಡಿಯಬಾರದು ಏಕೆಂದರೆ ಸರ್ಕಾರಿ ಗುತ್ತಿಗೆದಾರರ ಭದ್ರತಾ ಠೇವಣಿ ಇಲಾಖೆಗಳಲ್ಲಿರುತ್ತದೆ ಅಲ್ಲದೇ ಇಲಾಖೆಯ ಲೈಸನ್ಸ್, ಸರಕು ಮತ್ತು ಸೇವಾ ತೆರಿಗೆ (G.S.T)ನೋಂದಣಿ, ಆದಾಯ ತೆರಿಗೆ ಇಲಾಖೆಯಲ್ಲಿ ನೋಂದಣಿ ಮುಂತಾದ ನೋಂದಣಿಗಳಿರುತ್ತವೆ. ಅಲ್ಲದೇ ಅವರ ಸಾಕಷ್ಟು ಬಿಲ್ಲುಗಳ ಮೊತ್ತ ಸರ್ಕಾರದಲ್ಲಿ ಜಮಾ ಇರುತ್ತದೆ ಗುತ್ತಿಗೆ ಕಾಮಗಾರಿಯನ್ನು ಪರಿಶೀಲಿಸಿದ ನಂತರ ಅದು ಸರಿಯಾಗಿಲ್ಲ ಎಂದು ಕಂಡು ಬಂದಲ್ಲಿ ಸರ್ಕಾರದಲ್ಲಿ ಜಮಾ ಇರುವ ಅವರ ಹಣವನ್ನ ಹಾಕಿಕ್ಕೊಳ್ಳಬಹುದು, ಅಂತಹ ಗುತ್ತಿಗೆದಾರರನ್ನ ಕಪ್ಪು ಪಟ್ಟಿಯಲ್ಲಿ ಸೇರಿಸಬಹುದು ಜೂನ್ 30 2024 ರೊಳಗೆ ಗುತ್ತಿಗೆದಾರರು ಬಾಕಿ ಬಿಲ್ ಗಳನ್ನ ನೀಡಬೇಕು ಇಲ್ಲದಿದ್ದರೆ ಸಂಘದಿಂದ ಮುಷ್ಕರ ಹಮ್ಮಿಕ್ಕೊಳ್ಳಲಾಗುವುದು ಎಂದು ಗುತ್ತಿಗೆದಾರರು ಸರಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು...