ಖರ್ಗೆ ಅವಹೇಳನ: ಆರಗ ಜ್ಞಾನೇಂದ್ರ ವಿರುದ್ಧ ಮೈಸೂರಿನಲ್ಲಿ ದೂರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಖಿಲ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದವರು ಮೈಸೂರಿನ ದೇವರಾಜ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

Defamation of kharge complaint in Mysore police station against Araga jnanendra rav

ಮೈಸೂರು (ಆ.7) :  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಖಿಲ ಕರ್ನಾಟಕ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದವರು ಮೈಸೂರಿನ ದೇವರಾಜ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಕಸ್ತೂರಿ ರಂಗನ್‌ ವರದಿ ಜಾರಿ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಆರಗ ಜ್ಞಾನೇಂದ್ರ ಅವರು, ಖರ್ಗೆ(Mallikarjun kharge) ಅವರ ಬಣ್ಣ ಮತ್ತು ಜಾತಿಯ ಬಗ್ಗೆ ಅವಹೇಳನ ಮಾಡಿದ್ದಾರೆ. ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಬೇಕು. ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಸಂಘದ ಅಧ್ಯಕ್ಷ ನರೇಂದ್ರ ಆಗ್ರಹಿಸಿದರು.

ಜ್ಞಾನೇಂದ್ರ ಅವರು ಎಲ್ಲಿಗೆ ಹೋದರೂ ಅವರಿಗೆ ಕಪ್ಪು ಬಾವುಟ ತೋರುವುದು, ಕಪ್ಪು ಬಣ್ಣ ಬಳಿಯುವ ಕೆಲಸವನ್ನು ದಲಿತ ಸಂಘಗಳು, ಕಾಂಗ್ರೆಸ್‌ ಕಾರ್ಯಕರ್ತರು, ಖರ್ಗೆ ಅಭಿಮಾನಿಗಳು ಮಾಡಲಿದ್ದಾರೆ ಎಂದು ಅವರು ಎಚ್ಚರಿಸಿದರು.

 

ಖರ್ಗೆಯನ್ನು ಟೀಕಿಸಿಲ್ಲ, ರಾಜಕೀಯ ಉದ್ದೇಶಕ್ಕೆ ನನ್ನ ಮೇಲೆ ಕೇಸ್: ಆರಗ

ಈ ವೇಳೆ ಗ್ರಾಪಂ ಮಾಜಿ ಸದಸ್ಯ ಹುಯಿಲಾಳು ರಾಮಸ್ವಾಮಿ, ನಾಗವಾಲ ಮಹೇಶ್‌, ಸೀಗಳ್ಳಿ ಕುಮಾರ್‌, ಬಸವನಾಯಕ್‌, ನಾಗರಾಜ್‌, ರಾಘವೇಂದ್ರ, ಬಂಡಿಪಾಳ್ಯ ವಿಜಯಕುಮಾರ್‌, ಹಿನಕಲ್‌ ಮಂಜು, ಪ್ರವೀಣ್‌ ಇದ್ದರು.

Latest Videos
Follow Us:
Download App:
  • android
  • ios