Asianet Suvarna News Asianet Suvarna News

ಚುನಾವಣೆ ಸಂದರ್ಭದ ದ್ವೇಷಕ್ಕೆ ಮಾರಣಾಂತಿಕ ಹಲ್ಲೆ: ಶಾಸಕ ಬಾಲಕೃಷ್ಣ ಬೆಂಬಲಿಗರ ವಿರುದ್ಧ ಗೂಂಡಾಗಿರಿ ಆರೋಪ

ಜೆಡಿಎಸ್ ಕಾರ್ಯಕರ್ತರ ಮೇಲೆ ಶಾಸಕ ಹೆಚ್.ಸಿ.ಬಾಲಕೃಷ್ಣ ಬೆಂಬಲಿಗರು ಗೂಂಡಾಗಿರಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಡದಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಮಾಗಡಿ ನಿವಾಸಿ ಅಚ್ಯುತ್ ಮತ್ತು ಹನುಮಂತರಾಜು ಎಂಬವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

Deadly attack on election time hate MLA HC Balakrishnas supporters accused of hooliganism gvd
Author
First Published May 26, 2023, 8:29 AM IST

ಮಾಗಡಿ (ಮೇ.26): ಜೆಡಿಎಸ್ ಕಾರ್ಯಕರ್ತರ ಮೇಲೆ ಶಾಸಕ ಹೆಚ್.ಸಿ.ಬಾಲಕೃಷ್ಣ ಬೆಂಬಲಿಗರು ಗೂಂಡಾಗಿರಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಡದಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಮಾಗಡಿ ನಿವಾಸಿ ಅಚ್ಯುತ್ ಮತ್ತು ಹನುಮಂತರಾಜು ಎಂಬವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಚುನಾವಣೆ ಸಂದರ್ಭದ ದ್ವೇಷಕ್ಕೆ ನಿನ್ನೆ ರಾತ್ರಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಬಿಡದಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಸೇರಿ ಹಲವರ ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ರವಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ನ​ನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ: ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯೂ ಇದೆ, ಆಸೆಯೂ ಇದೆ. ಆದರೆ, ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮವಾಗಿದ್ದು, ಅದಕ್ಕೆ ನಾವೆ​ಲ್ಲರೂ ಬದ್ಧ​ರಾ​ಗಿ​ರು​ತ್ತೇವೆ ಎಂದು ಶಾಸಕ ಎಚ್‌.ಸಿ.​ಬಾ​ಲ​ಕೃಷ್ಣ ಪ್ರತಿ​ಕ್ರಿ​ಯಿ​ಸಿ​ದರು. ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಅವ​ರಿಗೂ ನನಗೆ ಸಚಿವ ಸ್ಥಾನ ಕೊಡಿ​ಸುವ ಇಚ್ಛೆ ಇದೆ. ನಾನು ಕೂಡ ಹಿರಿಯ ಶಾಸ​ಕ​ನಾ​ಗಿ​ರು​ವು​ದ​ರಿಂದ ಸಚಿವ ಸ್ಥಾನ ಕೊಡು​ತ್ತಾ​ರೆಂಬ ವಿ​ಶ್ವಾ​ಸ​ವಿದೆ. ಸಚಿವ ಸ್ಥಾನ ಕೊಟ್ಟರೆ ರಾಜ್ಯ ಸೇವೆ, ಕೊಡ​ದಿ​ದ್ದರೆ ಕ್ಷೇತ್ರ ಸೇವೆ ಮಾಡು​ತ್ತೇನೆ. ಸಚಿವ ಸ್ಥಾನ​ಕ್ಕಾಗಿ ನಾನು ಯಾವುದೇ ಲಾಭಿ ಮಾಡಲ್ಲ. ನನ್ನ ಶಕ್ತಿ ಮೇಲೆ ನಂಬಿಕೆ ಇದ್ದರೆ ಕೊಡಲಿ ಎಂದ​ರು.

ಇಲ್ಲೇ ನಮ್ಮ ಮನೆ ಹತ್ರ ಬಂದು ಮಲಕ್ಕೊಳಕ್ಕೆ ಹೇಳಿ: ಪ್ರತಾಪ್ ಸಿಂಹ ಆರೋಪಕ್ಕೆ ಡಿಕೆಶಿ ವ್ಯಂಗ್ಯ

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾ​ರೆಂಬ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾನು ಅಷ್ಟುದೊಡ್ಡವನಲ್ಲ. ನಮ್ಮ ಹೈಕಮಾಂಡ್‌ ಇದನ್ನೆಲ್ಲ ತೀರ್ಮಾನ ಮಾಡುತ್ತದೆ. ದೆಹಲಿಯ ಕಿಚನ್‌ ಕ್ಯಾಬಿನೆಚ್‌ನಲ್ಲಿ ಈ ಬಗ್ಗೆ ನಿರ್ಧಾರ ಆಗುತ್ತದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಪ್ರಣಾಳಿಕೆ ಹೊರಡಿಸುತ್ತವೆ. ಹಾಗೆ ನಾವು ಪ್ರಣಾಳಿಕೆ ಕೊಟ್ಟಿದ್ದೇವೆ ಅದನ್ನು ಈಡೇರಿಸುತ್ತೇವೆ. ನಾವು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುತ್ತೇವೆ. ಮಾಜಿ ಶಾಸಕರು ಈಗಲೇ ಬಟ್ಟೆಹರಿದುಕೊಳ್ಳುವುದು ಬೇಡ. ಸೋಲಿನ ಹತಾಶೆಯಲ್ಲಿ ಮಾಜಿ ಶಾಸಕರು ಏನೇನೋ ಆರೋಪ ಮಾಡುತ್ತಿ​ದ್ದಾರೆ. 

ಕಾಂಗ್ರೆಸ್‌ ಗ್ಯಾರಂಟಿ ಫೈಟ್‌: ಸರ್ಕಾರ-ಪ್ರತಿಪಕ್ಷಗಳ ನಡುವೆ ಕದನ ಆರಂಭ

ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಶಾಸಕ ಮಂಜು​ನಾಥ್‌ ಅವರ ಗಿಫ್ಟ್‌ ಕಾರ್ಡ್‌ ಹಂಚಿಕೆ ಆರೋ​ಪಕ್ಕೆ ತಿರು​ಗೇಟು ನೀಡಿ​ದ​ರು. ಕರೆಂಟ್‌ ಬಿಲ್‌ ಕಟ್ಟ​ಬೇಡಿ ಎಂಬ ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ ಅವರ ಹೇಳಿಕೆಗೆ ಪ್ರತಿ​ಕ್ರಿ​ಯಿ​ಸಿದ ಬಾಲ​ಕೃಷ್ಣ, ರಾಜ್ಯ​ದಲ್ಲಿ ಸುಭದ್ರ ಸರ್ಕಾರ ರಚನೆ ಆಗಿದೆ. ನಮ್ಮಲ್ಲಿ ಪ್ರಬಲ ನಾಯಕತ್ವ ಇದೆ. ಕೊಟ್ಟಿರುವ ಎಲ್ಲಾ ಆಶ್ವಾಸನೆಗಳನ್ನು ಈಡೇ​ರಿ​ಸು​ತ್ತೇವೆ. ಕುಮಾರಸ್ವಾಮಿ ಮತ್ತು ವಿಪಕ್ಷಗಳು ಸೋಲಿನ ಹತಾಶೆಯಿಂದ ಅಪಪ್ರಚಾರ ಮಾಡು​ತ್ತಿದ್ದಾರೆ ಎಂದು ಟೀಕಿ​ಸಿ​ದರು.

Follow Us:
Download App:
  • android
  • ios