ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ಇನ್ನೊಂದು ತಿಂಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳÜದಿದ್ದರೆ ಹೋರಾಟ ನಡೆಸುವುದಾಗಿ ‘ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್’ ಎಚ್ಚರಿಸಿದೆ.
ಬೆಂಗಳೂರು (ಜೂ.14) ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ಇನ್ನೊಂದು ತಿಂಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳÜದಿದ್ದರೆ ಹೋರಾಟ ನಡೆಸುವುದಾಗಿ ‘ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್’ ಎಚ್ಚರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆ ಪ್ರಧಾನ ಕಾರ್ಯದರ್ಶಿ ಜಿ.ಆರ್.ಶಿವಶಂಕರ್, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಕೆಎಸ್‌ಡಿಎಲ್‌ನಲ್ಲಿ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾದ ಅಧಿಕಾರಿಯೊಬ್ಬರಿಗೆ ಮುಂಬಡ್ತಿ ನೀಡಿ ಬೇರೊಂದು ಮಂಡಳಿಗೆ ವರ್ಗಾಯಿಸಲಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೆ ಬಾರದೆ ಈ ಪ್ರಕ್ರಿಯೆ ನಡೆದಿರುವ ಸಾಧ್ಯತೆ ಇದೆ. ಕಾಂಗ್ರೆಸ್ ಮುಖಂಡರು ಅಧಿಕಾರಕ್ಕೆ ಬಂದರೆ ತನಿಖೆ ನಡೆಸುವುದಾಗಿ ಹೇಳಿದ್ದರು. ಆದರೆ ಇದೀಗ ಅಧಿಕಾರಕ್ಕೆ ಬಂದು ತಿಂಗಳಾದರೂ ಕ್ರಮ ವಹಿಸಿಲ್ಲ. ಬದಲಾಗಿ ವ್ಯತಿರಿಕ್ತವಾಗಿ ನಡೆದುಕೊಂಡಿರುವುದು ಆಶ್ಚರ್ಯ ತಂದಿದೆ ಎಂದು ಹೇಳಿದರು.
15 ದಿನಗಳ ಬಳಿಕ ಪರಪ್ಪನ ಜೈಲಿನಿಂದ ಹೊರಕ್ಕೆ, ಮನೆಗೆ ಹೋಗಿ ರಾಜಕೀಯ ಚರ್ಚೆ ಎಂದ ಮಾಡಾಳು ವಿರೂಪಾಕ್ಷಪ್ಪ!
ಮಾಡಾಳು ವಿರುಪಾಕ್ಷಪ್ಪ(Madal virupakshappa) ಅವರು ಕೆಎಸ್‌ಡಿಎಲ್(KSDL president) ಅಧ್ಯಕ್ಷರಾದ ಬಳಿಕ ನಡೆದಿರುವ ಎಲ್ಲ ಕಾಮಗಾರಿ, ಮಾರುಕಟ್ಟೆವ್ಯವಹಾರ, ಕಚ್ಚಾ ಸಾಮಗ್ರಿ ಖರೀದಿ ಬಗ್ಗೆ ಸಮಗ್ರ ವರದಿ ಪಡೆಯಬೇಕು. ಕೆಎಂಎಫ್ ಹಾಗೂ ಕೆಎಸ್‌ಡಿಎಲ್ ನಡುವಣ ಕಾಂಪೌಂಡ್ ವಿಚಾರದ ಒಪ್ಪಂದದಲ್ಲಿ ನಡೆದಿರಬಹುದಾದ ಅವ್ಯವಹಾರದ ಬಗ್ಗೆಯೂ ಉನ್ನತಾಧಿಕಾರಿಗಳಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಚ್ಚಾ ವಸ್ತು ತೆಗೆದುಕೊಳ್ಳುವ ವೇಳೆ ಖರೀದಿ ಮಾರ್ಗಸೂಚಿ ಅನುಸರಿಸಿಲ್ಲ. ನೇರವಾಗಿ ಉತ್ಪಾದಕರಿಂದ ಖರೀದಿಸುವ ಬದಲು ಮಧ್ಯವರ್ತಿಗಳಿಂದ ಗಂಧದ ಎಣ್ಣೆ ಪಡೆಯಲಾಗಿದೆ. ಅದೇ ರೀತಿ ದಾಸ್ತಾನು ಸಂಗ್ರಹ, ಕಚ್ಚಾ ಸಾಮಗ್ರಿಗಳು ಹಾಗೂ ಸುಗಂಧ ದ್ರವ್ಯಗಳ ಗುಣಮಟ್ಟಪರೀಕ್ಷೆಗೆ ಟಾಟಾ ಸಂಶೋಧನಾ ವಿಭಾಗ, ಕನ್ನೂಜ್‌ನ ಫ್ರಾಗ್ರೆನ್ಸ್ ಆ್ಯಂಡ್ ಫ್ಲೇವರ್ ಇಲಾಖೆಯಿಂದ ತಪಾಸಣೆ ಮಾಡಿಸಬೇಕು ಎಂದು ಒತ್ತಾಯಿಸಿದರು.
ಲಂಚ ಪ್ರಕರಣ: ಮಾಡಾಳು ವಿರುಪಾಕ್ಷಪ್ಪಗೆ ಕೊನೆಗೂ ಸಿಕ್ತು ಕಂಡೀಷನಲ್ ಬೇಲ್!
