ಯಾದಗಿರಿ ಜಿಲ್ಲೆಯ ಗುರಮಿಠಕಲ್ ಪಟ್ಟಣದಲ್ಲಿ ರಸ್ತೆ ಬದಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಾಮಾಜಿಕ ಕಳಂಕಕ್ಕೆ ಅಂಜಿ ಮಗುವನ್ನು ಎಸೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ರಸ್ತೆ ಬದಿ ನವಜಾತ ಶಿಶುವಿನ ಶವ ಪತ್ತೆ
ಯಾದಗಿರಿ: ಬೆಳ್ಳಂಬೆಳಗ್ಗೆ ರಸ್ತೆ ಬದಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಗುರಮಿಠಲ್ ಪಟ್ಟಣದ ಉಪ್ಪರಗಡ್ಡಾ ಬಡಾವಣೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನವಜಾತ ಶಿಶು ಶವ ಕಂಡು ಆತಂಕಗೊಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಹುಟ್ಟಿದ ಕೂಡಲೇ ಮಗುವನ್ನು ತಂದು ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಅಪರಿಚಿತರು ಬೇರೆ ಎಲ್ಲಿಂದಲೂ ಬಂದು ತಡರಾತ್ರಿ ಮಗುವನ್ನು ಇಲ್ಲಿ ಬಿಸಾಕಿ ಹೋಗಿರುವ ಅನುಮಾನ ವ್ಯಕ್ತವಾಗಿದೆ.
ರಾತ್ರಿ ತಿಪ್ಪೆಯಲ್ಲಿ ಎಸೆದು ಹೋಗಿರುವ ಶಂಕೆ
ರಾತ್ರಿ ತಿಪ್ಪೆಯಲ್ಲಿ ಒದ್ದಾಡಿ ಮಗು ಸಾವನಪ್ಪಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುಮಿಠಕಲ್ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಇಂತಹ ಎರಡನೇ ಪ್ರಕರಣ ಇದಾಗಿದೆ. ಬಹುಶಃ ಅನೈತಿಕ ಸಂಬಂಧದ ಹಿನ್ನೆಲೆ ಮಗು ಜನಿಸಿರಬಹುದು. ಹೀಗಾಗಿ ಸಾಮಾಜಿಕ ಕಳಂಕಕ್ಕೆ ಅಂಜಿ ಮಗುವನ್ನು ಎಸೆದು ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕ 10 ರೂ ಇಳಿಸಿದ ಕೇಂದ್ರ ಸರ್ಕಾರ: ಬೆಲೆ ಏರಿಕೆ ಭೀತಿಯಲ್ಲಿದ್ದ ಜನರಿಗೆ ನಿರಾಳ
ಮೃತಪಟ್ಟ ಮಗು ಗಂಡು ಮಗುವಾಗಿದೆ. ಅನೈತಿಕ ಸಂಬಂಧ ಅಥವಾ ಅಪ್ರಾಪ್ತ ಬಾಲಕಿ ಗರ್ಭಧಾರಣೆಯಿಂದ ಕೃತ್ಯ ನಡೆದಿರಬಹುದು ಎನ್ನಲಾಗುತ್ತಿದೆ. ಹೀಗಾಗಿ ಗರ್ಭಪಾತ ಮಾಡಿ ಮಗುವನ್ನು ಎಸೆದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆ ರವಾನಿಸಲಾಗಿದೆ.
ಒಟ್ಟಿನಲ್ಲಿ ಮಗು ಬೇಕು ಎಂದವರಿಗೆ ಎಷ್ಟು ಔಷಧಿ ಮಾಡಿದರೂ ಈ ಕಾಲದಲ್ಲಿ ಮಕ್ಕಳಾಗುತ್ತಿಲ್ಲ, ಆದರೆ ಮಗು ಬೇಡ ಎಂದವರಿಗೆ ಭಗವಂತ ಕರೆದು ಕರೆದು ಕೊಡುತ್ತಾನೆ. ಇತ್ತ ಹೀಗೆ ಸುಲಭವಾಗಿ ಮಕ್ಕಳಾಗುವವರು ಹೀಗೆ ಮಕ್ಕಳ ಮೌಲ್ಯ ತಿಳಿಯದೇ ಅನಾಚಾರ ಮಾಡ್ತಿದ್ದಾರೆ.
ಇದನ್ನೂ ಓದಿ: ನಿರ್ಮಾಣವಾದರೂ ಉದ್ಘಾಟನೆಯಾಗದ ಲಿಫ್ಟ್ : ಫ್ಲಾಟ್ ಫಾರ್ಮಿಂದ ಹೊರಗೆ ಬರಲು ಪಡಬಾರದ ಕಷ್ಟಪಟ್ಟ ಕಾಲಿಲ್ಲದ ಯುವಕ


