ಮೃತನ ಹೆಸರಲ್ಲಿ ಮುಡಾ ಜಾಗ ಡಿನೋಟಿಫೈ: ಎಚ್ ಡಿ.ಕುಮಾರಸ್ವಾಮಿ

ಮುಡಾ ಹಗರಣವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಜಮೀನು ಡಿ-ನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಯಾವುದೇ ಬೆಳವಣಿಗೆಯೇ ನಡೆದಿಲ್ಲ. ಮೈಸೂರಿನ ಮುಡಾ ಹಗರಣ ಸಂಬಂಧ  ದಾಖಲೆಗಳನ್ನು ಪ್ರದರ್ಶಿಸಿ ಆರೋಪಿಸಿದ ಕುಮಾರಸ್ವಾಮಿ
 

de notification muda land in the name of the deceased in mysuru says union minister hd kumaraswamy grg

ಬೆಂಗಳೂರು(ಜು.14):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತಾಗಿದ್ದು, ಮೃತ ಪಟ್ಟವರ ಹೆಸರಲ್ಲಿ ಜಮೀನು ಡಿ-ನೋಟಿಫಿಕೇಷನ್ ಆಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್ ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಗರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅವರು ಪ್ರದರ್ಶಿಸಿದರು. ಈ ವೇಳೆ ಮಾತನಾಡಿ, ಮುಡಾ ಹಗರಣವನ್ನು ನ್ಯಾಯಾಲಯದ ಮುಂದೆ ಕೊಂಡೊಯ್ಯುವ ಮೂಲಕ ತಾರ್ಕಿಕ ಅಂತ್ಯ ಕಾಣಿಸಬೇಕಿದೆ. ಜಮೀನು ಡಿ-ನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಯಾವುದೇ ಬೆಳವಣಿಗೆಯೇ ನಡೆದಿಲ್ಲ. ಮೈಸೂರಿನ ಮುಡಾ ಹಗರಣ ಸಂಬಂಧ ಕುಮಾರಸ್ವಾಮಿ ದಾಖಲೆಗಳನ್ನು ಪ್ರದರ್ಶಿಸಿ ಆರೋಪಿಸಿದರು.

ಮುಡಾ, ವಾಲ್ಮೀಕಿ ನಿಗಮ ಹಗರಣವನ್ನು ಸಿಬಿಐ ತನಿಖೆ ನೀಡಿದರೆ ಸತ್ಯಾಂಶ ಹೊರಬರಲಿದೆ: ಸಂಸದ ಯದುವೀರ್ ಒಡೆಯರ್

ಕೆಸರೆ ಬಳಿಯ ಜಮೀನಿಗೆ ಮುಡಾ ಫಿಕೇಷನ್ ಮಾಡಿ ಖರೀದಿಸಿರುವ ಹಿನ್ನೆಲೆ ನ್ನೆಲೆ ಭೂಸ್ವಾಧೀನ ಮಾಡಿ ಪರಿಹಾರ ನೀಡಿದೆ. ಯಲ್ಲಿ ಇದು ಕಾನೂನು ಬಾಹಿರವಾಗಿದೆ ಮುಡಾಗೆ ಸೇರಿದ ಜಮೀನನ್ನು ಡಿನೋಟಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸಲಾಗುತ್ತದೆ. ಆದರೆ, ಆ ಜಾಗ ವನ್ನು ಭೂ ಪರಿವರ್ತನೆ ಮಾಡಲಾಗಿತ್ತು. ಜಮೀನಿನ ಹಿನ್ನೆಲೆಯನ್ನು ಯಾರೂ ಪರಿ ಶೀಲಿಸಿಲ್ಲ. ಭೂಮಿ ಬದಲಾವಣೆಯಾ ದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು? ಜಮೀನಿನ ಮೂಲದಾರರು ಲಿಂಗ ಅಲಿಯಾಸ್ ಜವರ ಎಂದಿದ್ದು, ಜಮೀ ನನ್ನು 1992ರಲ್ಲಿ ಮುಡಾ ತನ್ನ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿ ಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾಧೀನದ ನೋಟಿಫಿಕೇಷನ್ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬಂದು ಡಿ-ನೋಟಿಫಿಕೇಷನ್ ಮಾಡಲಾ ಗಿದೆ. ಈ ಜಮೀನು ಡಿ-ನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿಯಾಗಿದ್ದರು ಹೇಳಿದರು.

Latest Videos
Follow Us:
Download App:
  • android
  • ios