ದೇವರ ಕೃಪೆಯಿಂದ ರಾಜ್ಯದಲ್ಲಿ ಮಳೆ ಆಗ್ತಿದೆ: ಡಿಕೆ ಶಿವಕುಮಾರ
ದೇವರ ಕೃಪೆಯಿಂದ ರಾಜ್ಯದೆಲ್ಲೆಡೆ ಮಳೆ ಚೆನ್ನಾಗಿ ಆಗುತ್ತಿದೆ. ಎರಡು ಮೂರು ದಿನದಲ್ಲಿ ಕೆಆರ್‌ಎಸ್ ಜಲಾಶಯ ತುಂಬಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಬೆಂಗಳೂರು (ಜು.20): ದೇವರ ಕೃಪೆಯಿಂದ ರಾಜ್ಯದೆಲ್ಲೆಡೆ ಮಳೆ ಚೆನ್ನಾಗಿ ಆಗುತ್ತಿದೆ. ಎರಡು ಮೂರು ದಿನದಲ್ಲಿ ಕೆಆರ್‌ಎಸ್ ಜಲಾಶಯ ತುಂಬಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳನಾಡಿಗೆ ನೀರು ಬಿಡುವಂತೆ ಕೋರ್ಟ್ ಆದೇಶ ನೀಡಿತ್ತು. ಅದನ್ನ ಪಾಲನೆ ಮಾಡುವ ಸೂಚನೆಗಳು ತಮಗೆಲ್ಲ ಕಾಣ್ತಾ ಇದೆ. ಮುಂಜಾಗ್ರತೆಯಾಗಿ ಕೆಲವು ಕಡೆ ನೀರು ಬಿಡಬೇಕಾಗುತ್ತದೆ. ಹೆಚ್ಚು ಕಡಿಮೆ ಆಗಬಾರದು ಅಂತಾ ಪಕ್ಷಿಧಾಮ ಕಡೆ ದೋಣಿ ಎಲ್ಲವನ್ನೂ ನಿಲ್ಲಿಸಿದ್ದೀವಿ. ಎಲ್ಲೆಡೆ ಭಾರಿ ಮಳೆಯಾಗ್ತಿದೆ ಈ ಹಿನ್ನೆಲೆ ನದಿ ಪಕ್ಕದ ಮನೆಗಳಿಗೆ ಎಚ್ಚರಿಕೆ ನೀಡಿದ್ದೇವೆ ಎಂದರು.
ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡೇ ಮಾಡ್ತೇನೆ: ಡಿಸಿಎಂ ಡಿಕೆ ಶಿವಕುಮಾರ್
ನದಿಗಳು ತುಂಬಿ ಹರಿಯಲಿರುವ ಹಿನ್ನೆಲೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ತಿಳಿಸಲಾಗಿದೆ. ರೆಡ್ ಅಲರ್ಟ್ ಘೊಷಣೆ ಮಾಡಿದ್ದೇವೆ. ಕಾರವಾರದಲ್ಲಿ ವಿಪರೀತ ಮಳೆ ಆಗುತ್ತಿದೆ. ಇದರಿಂದ ದಿನನಿತ್ಯದ ಕೆಲಸಕ್ಕೆ ಬಹಳ ತೊಂದರೆಯಾಗ್ತಿದೆ. ಕೇರಳ ಮೂಲದ ಚಾಲನ ವಾಹನ ಸಮೇತ ಸಿಲುಕಿಕೊಂಡಿದ್ದಾನೆ. ಈಗಾಗಲೇ 85-90 ಗಂಟೆ ಕಳೆದು ಹೋಗಿದೆ ನಮಗೆ ಟ್ರೇಸ್ ಮಾಡೋಕೆ ಆಗಲಿಲ್ಲ. ಬಹಳ ಪ್ರಯತ್ನ ನಡೆಸುತ್ತಿದ್ದೇವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳದಲ್ಲೇ ಇದ್ದಾರೆ. ಅವರವರ ಕೆಲಸಗಳನ್ನು ಚೆನ್ನಾಗಿ ಮಾಡ್ತಿದ್ದಾರೆ ನಮ್ಮ ರೈತರ ಹಿತಕ್ಕೆ ಏನೇನು ಬೇಕೋ ಅದೆಲ್ಲವನ್ನೂ ಮಾಡ್ತೇವೆ ಎಂದರು.
ಕೆರೆಗಳನ್ನ ತುಂಬಿಸೋದಕ್ಕೂ ರೈತರಿಗೆ ಬೇಕಾದ ವ್ಯವಸ್ಥೆ ಮಾಡ್ತೀವಿ. ಇದಕ್ಕಾಗಿ ಕೆಲವು ಕ್ಯಾನಲ್ ಗಳನ್ನ ಓಪನ್ ಮಾಡಿದ್ದೀವಿ. ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ಸ್ವಲ್ಪ ತಾಳ್ಮೆಯಿಂದ ಇರಬೇಕು. ಕೃಷಿ ಇಲಾಖೆ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಎಂದರು. ಇನ್ನು ಅಂಕೋಲಾಕ್ಕೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಭೇಟಿ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಹೋಗಲಿ ಯಾರು ಬೇಡ ಅಂತಾರೆ? ಅವರ ಪಾರ್ಟಿ ಸಂಘಟನೆಗೆ ಬೇಡ ಅನ್ನೋಕೆ ಆಗುತ್ತಾ? ಈಗ ರಾಜಕಾರಣ ಬೇಡ, ಜನರನ್ನ ಉಳಿಸಿಕೊಳ್ಳೋದು ನೋಡೋಣ. ಮಿಲಿಟರಿ ಕರ್ಕೊಂಡು ಇಳಿದಿದ್ರೆ ಫೀಲ್ಡಿಗೆ ಬಂದಿದ್ದಾರೆ ಅಂತ ಹೇಳಬಹುದು. ಸುಮ್ಮನೇ ವಿಜಿಟ್ ಮಾಡಿ ಬಂದ್ರೆ ಏನಾದ್ರೂ ಆಗುತ್ತಾ? ಒಂದೇ ಗಂಟೆಯಲ್ಲಿ ನಮ್ಮ ಕ್ಯಾಬಿನೆಟ್ ಸಚಿವರನ್ನ ಅಲ್ಲಿಗೆ ಓಡಿಸಿದ್ದೇವೆ. ಮಾಂಕಾಳ್ ವೈದ್ಯ, ಕೃಷ್ಣಬೈರೇಗೌಡ ಅಲ್ಲಿಗೆ ಹೋಗಿದ್ರು. ಏನೇನು ಮಾಡಬೇಕೊ ಅದನ್ನ ಮಾಡಿದ್ದಾರೆ, ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏನು ಮಾಡಬೇಕೊ ಅದನ್ನ ಮಾಡುತ್ತೇವೆ ಎಂದರು.
ಬಿಜೆಪಿ ಸರ್ಕಾರದವರು ನನ್ನ ಮೇಲೆ ಕೇಸ್ ಹಾಕಿದ್ದಾರೆ, ಕೊಡಬಾರದ ನೋವು ಕೊಡ್ತಿದ್ದಾರೆ: ಡಿಕೆಶಿ
ನಿಗಮ ಮಂಡಳಿಗಳಲ್ಲಿ ಪಾರದರ್ಶಕತೆ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಡಿಕೆ ಶಿವಕುಮಾರ, ನಮ್ಮ ಅಧ್ಯಕ್ಷರುಗಳಿಗೆ ಈಗಾಗಲೇ ಹೇಳಿದ್ದೀವಿ. ನಮ್ಮ ಅಧಿಕಾರಿಗಳು ಬಹಳ ಖದೀಮರಿದ್ದಾರೆ. ಅಲ್ಲಿದ್ದ ಖದೀಮರು ಇಲ್ಲಿಗೂ ಬಂದು ಸೇರಿಕೊಂಡಿದ್ದಾರೆ. 300-400 ಕೋಟಿ ರೂ. ಅಲ್ಲಿ ತಿಂದ ಅದೇ ಅಧಿಕಾರಿಗಳು ಇಲ್ಲಿದ್ದಾರೆ. ಬಹಳ ಎಚ್ಚರಿಕೆಯಿಂದ ಬರಬೇಕಾಗುತ್ತೆ ಡಿಗ್ರೇಡ್ ಕ್ಲರ್ಕ್ ಗಳನ್ನ ಸೂಪರಿಂಟೆಂಡೆಂಟ್, ಎಂಡಿಗಳನ್ನಾಗಿ ಮಾಡಿಬಿಟ್ಟಿದ್ದಾರೆ. ಅಂತವರನ್ನ ಪರಿಶೀಲನೆ ಮಾಡ್ತಾ ಇದ್ದೀವಿ. ಆರ್ಥಿಕ ಇಲಾಖೆ ಮುಂಜಾಗ್ರತಾವಾಗಿ ಖಜಾನೆಯಲ್ಲಿ ಕಂಟ್ರೋಲ್ ಇಡುವ ವ್ಯವಸ್ಥೆ ಮಾಡ್ತಿದ್ದೀವಿ. ವಾಲ್ಮೀಕಿ ನಿಗಮ ಮಂಡಳಿ ಹಗರಣದಲ್ಲಿ ಸಿಎಂ ಹಾಗೂ ಡಿಸಿಎಂ ಹೆಸರು ಹೇಳುವಂತೆ ಒತ್ತಡ ಎಂಬ ಪ್ರಶ್ನೆಗೆ, ಬೇಡ ಅಂದೋರು ಯಾರು? ನೀವು ಹೇಳಿ, ಅವರು ಹೇಳಿಲಿ ಎಂದು ಹೊರಟ ಡಿಸಿಎಂ ಡಿಕೆ ಶಿವಕುಮಾರ.