ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡೇ ಮಾಡ್ತೇನೆ: ಡಿಸಿಎಂ ಡಿಕೆ ಶಿವಕುಮಾರ್

ಜಿಟಿ ಜಿಟಿ ಮಳೆಯಿಂದಾಗಿ ಬೆಚ್ಚಗೆ ಮನೆಯಲ್ಲಿದ್ದ ಭ್ರಷ್ಟ್ರ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳ್ಳಗೆ ಬಿಸಿ ಮುಟ್ಟಿಸಿದ್ದು, ಬೆಂಗಳೂರಿನಲ್ಲಿ ಪಕ್ಕದ ಮನೆಗೆ ಚಿನ್ನಾಭರಣ ಎಸೆದ ಬ್ಯಾಗ್‌ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ, ಮತ್ತೊಬ್ಬ ಅಧಿಕಾರಿ ಬಳಿ ಬಂದೂಕು ಪತ್ತೆಯಾಗಿದೆ.

Ramnagarvanna will be renamed as Bangalore South says DCM DK Shivakumar rav

ಚನ್ನಪಟ್ಟಣ (ಜು.20): ನಾವೆಲ್ಲ ಮೂಲ ಬೆಂಗಳೂರು ಜಿಲ್ಲೆಯವರು, ನಮ್ಮ ಊರಿನ ಹೆಸರನ್ನು ನಾವು ಕಳೆದುಕೊಳ್ಳಬಾರದು. ದೇವೇಗೌಡರನ್ನು ಹೊಳೆನರಸೀಪುರ ಅಥವಾ ಹಾಸನದ ದೇವೇಗೌಡರು ಎನ್ನುತ್ತಾರೆ. ಅಂತೆಯೇ ನಮ್ಮನ್ನು ನಮ್ಮ ಊರಿನಿಂದ ಗುರುತಿಸುತ್ತಾರೆ. ಅದನ್ನು ಕಳೆದುಕೊಳ್ಳಬಾರದು. ರಾಮನಗರದ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮಾಡಲು ಸಿಎಂಗೆ ಮನವಿ ಸಲ್ಲಿಸಿದ್ದು, ಇದನ್ನು ಮಾಡೇ ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಸಮ್ಮೇಳನ, ಸರ್ಕಾರಿ ನೌಕರರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ೭ನೇ ವೇತನ ಜಾರಿ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಕಾಲದ 21 ಹಗರಣಗಳ ತನಿಖೆ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು

ನಾನು ನಮ್ಮ ಜಿಲ್ಲೆಯ ಗೌರವ ಕಾಪಾಡಲು ಪ್ರಯತ್ನಿಸುತ್ತಿದೇನೆ. ನಾನು ಜಿಲ್ಲಾ ಪರಿಷತ್ ಮೆಂಬರ್ ಆಗಿದ್ದು, ಬೆಂಗಳೂರು ನಗರ, ಗ್ರಾಮಾಂತರ ಎಲ್ಲ ಬೆಂಗಳೂರು ಜಿಲ್ಲೆಗೆ ಸೇರಿದ್ದು, ಈ ಕಡೆ ನಂದಿಬೆಟ್ಟದವರೆಗೆ, ಹೊಸಕೋಟೆ ಮಾಗಡಿವರೆಗೆ ನಾವೆಲ್ಲ ಬೆಂಗಳೂರು ಜಿಲ್ಲೆಗೆ ಸೇರಿದವರು. ನಮ್ಮನ್ನು ಗುರುತಿಸುವುದೇ ನಮ್ಮ ಊರಿನಿಂದ ಅದನ್ನು ಕಳೆದುಕೊಳ್ಳಲು ಆಗುವುದೇ ಎಂದು ಪ್ರಶ್ನಿಸಿದರು.

ರಿಯಲ್ ಎಸ್ಟೇಟ್ ಎಂದು ಟೀಕಸ್ತಾರೆ: ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ(Bengaluru south) ಮಾಡ ಹೊರಟಿರುವುದನ್ನು ಕೆಲವರು ಟೀಕಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡಲು ಹೊರಟಿದ್ದಾರೆ ಎನ್ನುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಡುವ ಅವಶ್ಯಕತೆ ನನಗಿಲ್ಲ. ನಾನು ಸುಮಾರು ಆಸ್ತಿಯನ್ನು ಶಿಕ್ಷಣ ಸಂಸ್ಥೆ, ಸರ್ಕಾರಕ್ಕೆ ಕೊಟ್ಟಿದ್ದೇನೆ. ನಾನು ಬಡವನಲ್ಲ, ಹಾಗಂತ ಜಾಸ್ತಿ ಆಸ್ತಿ ಖರೀದಿ ಮಾಡಿದವನಲ್ಲ ಎಂದರು.

ನಾವು ಯಾರು ಏನನ್ನು ಹೊತ್ತುಕೊಂಡು ಹೋಗುವುದಿಲ್ಲ. ನನ್ನನ್ನು ಬೆಳೆಸಿರುವ, ನಾನು ಓಡಾಡಿರುವ ನಾನು ಸಾಯುವ ಭೂಮಿ ಇದು. ಮನುಷ್ಯನ ಹುಟ್ಟು ಆಕಸ್ಪಿಕ, ಸಾವು ಖಚಿತ ಹುಟ್ಟು ಸಾವಿನ ನಡುವೆ ಏನು ಮಾಡುತ್ತೇವೆ ಎಂಬುದು ಮುಖ್ಯ. ಅಧಿಕಾರ ಇದ್ದಾಗ ನಮ್ಮ ಜನರಿಗೆ ಅವರ ಆಸ್ತಿ ಮೌಲ್ಯಗಳಿಗೆ ಶಕ್ತಿ ನೀಡುವ ಕೆಲಸ ಮಾಡಬೇಕು. ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಯಿಸುವುದನ್ನು ಬಿಜೆಪಿ-ಜೆಡಿಎಸ್‌ ಎಷ್ಟೋ ಮಂದಿ ಸ್ವಾಗತಿಸಿದ್ದಾರೆ. ಇದು ಬೆಂಗಳೂರು ದಕ್ಷಿಣ, ನಾವು ಬೆಂಗಳೂರು ಜಿಲ್ಲೆಯವರು ನಾವು ನಮ್ಮ ಸ್ವಾಭಿಮಾನ ಮಾರಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಈ ಹಿಂದೆ ವಿದೇಶದಿಂದ ಮೊದಲು ಭಾರತಕ್ಕೆ ಬಂದರೆ ದೆಹಲಿಗೆ ಬಂದು, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್‌ಗೆ ಹೋಗುತ್ತಿದ್ದರು. ಆದರೆ, ಈಗ ಮೊದಲು ಬೆಂಗಳೂರಿಗೆ ಬಂದು ಆನಂತರ ದೆಹಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಒಮ್ಮೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ದೇವನಹಳ್ಳಿಯಲ್ಲಿ ಏರ್‌ಪೋರ್ಟ್‌ ವಿಚಾರದಲ್ಲಿ ನಾನೇ ಕೆಲಸ ಮಾಡಿದೆ. ಜನರ ಮನವೊಲಿಸಿದೆ. ಇಂದು ಅಲ್ಲಿ ಜಮೀನು ಬೆಲೆ ಕೋಟ್ಯಂತರ ಆಗಿದೆ. ನಮಗಿರುವ ಹೆಸರನ್ನು ನಾವು ಏಕೆ ಕಳೆದುಕೊಳ್ಳಬೇಕು. ನಿಮ್ಮ ಸ್ವಾಭಿಮಾನ, ನಿಮ್ಮ ಭೂಮಿ, ನೀವು ಕೆಲಸ ಮಾಡುವ ಜಾಗ ಬೆಂಗಳೂರು ರೂಪದಲ್ಲಿ ಇರಬೇಕು. ಜಿಲ್ಲೆಯ ಹೆಸರು ಬದಲಾವಣೆ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇನೆ. ರಾಮನಗರ ಹೆಡ್ ಕ್ವಾರ್ಟ್ಸ್ ಆಗೇ ಇರಲಿದೆ. ಇದನ್ನು ನಾನು ಮಾಡೇ ಮಾಡ್ತೇನೆ ಎಂದು ಘೋಷಿಸಿದರು.

ಹಗರಣಗಳ ನಡುವೆ ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷ ಶಾಸಕರ ಅಸಮಾಧಾನದ ಬಿಸಿ!

ಮುಂದೆ ಯಾಮಾರುವುದಿಲ್ಲ: ರಾಜ್ಯದ ಜನ ನಮಗೆ ೧೩೬ ಸ್ಥಾನಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಜನರ ವಿಶ್ವಾಸ ಉಳಿಸಿಕೊಂಡಿದ್ದೇವೆ. ಇಲ್ಲಿನ ವಿಚಾರದಲ್ಲಿ ನಾನು ಯಾಮಾರಿದೆ. ಮುಂದೆ ಯಾಮಾರಲ್ಲ. ಚನ್ನಪಟ್ಟಣಕ್ಕೆ ಹೊಸ ರೂಪ ನೀಡಬೇಕಿದೆ. ಜನಸ್ಪಂದನಾ ಕಾರ್ಯಕ್ರಮದಲ್ಲಿ ೧೫ ಸಾವಿರ ಜನ ನಿವೇಶನ, ಮನೆಗೆ ಅರ್ಜಿ ಸಲ್ಲಿಸಿದ್ದಾರೆ. ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಈಗಾಗಲೇ ೫೦ ಎಕರೆ ಜಾಗ ಗುರುತಿಸಲಾಗಿದೆ. ಹಳ್ಳಿಗಳಲ್ಲಿ ಜಾಗ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ಜನಸ್ಪಂದನಾ ಸಭೆಯಲ್ಲಿ ಸುಮಾರು ೨೨ ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರಿ ನೌಕರರು ಜನರಿಗೆ ಎಷ್ಟು ಸಹಾಯ ಮಾಡಲು ಸಾಧ್ಯವೋ ಅಷ್ಟು ಸಹಾಯ ಮಾಡಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್, ಸಿಇಒ ದಿಗ್ವಿಜಯ ಭೋಡ್ಕೆ, ಎಸ್ಪಿ ಕಾರ್ತಿಕ್ ರೆಡ್ಡಿ, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಇತರರಿದ್ದರು.

Latest Videos
Follow Us:
Download App:
  • android
  • ios