ಬೆಂಗಳೂರಿಗರಿಗೆ ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್, ಕಾಳೇನ ಅಗ್ರಹಾರ ದಿಂದ ತಾವರೆಕೆರೆ ನಡುವಿನ ಗುಲಾಬಿ ಬಣ್ಣದ ಮೆಟ್ರೋ ಮಾರ್ಗದಲ್ಲಿ ಟ್ರಯಲ್ ಆರಂಭಗೊಡಿದೆ. ಮೊದಲ ಹಂತದ ಮಾರ್ಗದಲ್ಲಿ ಶೀಘ್ರದಲ್ಲೇ ಮೆಟ್ರೋ ಸೇವೆ ಆರಂಭಗೊಳ್ಳಲಿದೆ.
ಬೆಂಗಳೂರು (ಜ.10) ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಮೆಟ್ರೋ ಸಾರಿಗೆ ಅತ್ಯಂತ ಉಪಯುಕ್ತವಾಗಿದೆ. ಮೆಟ್ರೋ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಜೊತೆಗೆ ಬೆಂಗಳೂರಿನ ಎಲ್ಲಾ ದಿಕ್ಕುಗಳಿಗೆ ಮೆಟ್ರೋ ಸೇವೆ ಒದಗಿಸುವ ಪ್ರಯತ್ನ ನಡೆಯುತ್ತಿದೆ.ಇದರ ಭಾಗವಾಗಿ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಗುಡ್ ನ್ಯೂಸ್ ನೀಡಿದೆ. ಕಾಳೇನ ಅಗ್ರಹಗಾರದಿಂದ ತಾವರೆಕೆರೆ ಮಾರ್ಗದ ಪಿಂಕ್ ಲೈನ್ ಮೆಟ್ರೋ ಲೈನ್‌ನಲ್ಲಿ ಟ್ರಯಲ್ ಆರಂಭಗೊಂಡಿದೆ. ಭಾರಿ ಟ್ರಾಫಿಕ್ ಸಮಸ್ಯೆಯಿದ ಬಳಲುತ್ತಿದ್ದ ಈ ಭಾಗದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.
ಒಟ್ಟು 21.26 ಕಿಲೋಮೀಟರ್ ಗುಲಾಬಿ ಮಾರ್ಗ
ಮೆಟ್ರೋದ ಪಿಂಕ್ ಲೈನ್ ಮಾರ್ಗ ಒಟ್ಟು 21.26 ಕಿಲೋಮೀಟರ್ ಉದ್ದವಿದೆ. ಹಂತ ಹಂತವಾಗಿ ಈ ಮಾರ್ಗ ಉದ್ಘಾಟನೆಗೊಳ್ಳಲಿದೆ. ಮೊದಲ ಹಂತದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ಮಾರ್ಗದಲ್ಲಿ ಸೇವೆ ಆರಂಭಗೊಳ್ಳಲಿದೆ. ಇದೀಗ ಪಿಂಕ್ ಲೈನ್‌ನ ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ಟ್ರಯಲ್ ಆರಂಭಗೊಂಡಿದೆ. ಈ 7.5 ಕಿಲೋಮೀಟರ್ ಮಾರ್ಗದಲ್ಲಿ 9 ಮೆಟ್ರೋ ನಿಲ್ದಾಣಗಳಿವೆ.
ಭರದಿಂದ ಸಾಗಿದೆ ಅಂಡರ್‌ಗ್ರೌಂಡ್ ಕಾಮಗಾರಿ
ಕಾಳೇನ ಅಗ್ರಹಾರದಿಂದ ತಾವರಕೆರೆ ಮಾರ್ಗದಲ್ಲಿನ ಮೊದಲ ಹಂತದ ಮೆಟ್ರೋ ಪಿಂಕ್ ಲೈನ್‌ನಲ್ಲಿ ಟ್ರಯಲ್ ನಡೆಯುತ್ತಿದೆ. ಈ ಮೊದಲ ಹಂತ ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಉಳಿದ 13.76 ಕಿಲೋಮೀಟರ್ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದು ಅಂಡರ್‌ಗ್ರೌಂಡ್ ಕಾಮಗಾರಿಯಾಗಿದೆ. 13.76 ಕಿಲೋಮೀಟರ್ ಸುರಂಗದ ಮೂಲಕ ಮೆಟ್ರೋ ಸಂಚಾರ ನಡೆಸಲಿದೆ. ವಿಶೇಷ ಅಂದರೆ ಈ ವರ್ಷವೇ ಗುಲಾಬಿ ಬಣ್ಣದ ಮೆಟ್ರೋ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.
ಕಾಳೇನ ಅಗ್ರಹಾರದಿಂದ ನಾಗವಾರ ವರೆಗಿನ ಪಿಂಕ್ ಲೈನ್‌ನಲ್ಲಿ ಮೊದಲ ಹಂತದಲ್ಲಿ ತಾವರೆಕೆರೆ ವರೆಗೆ ಸೇವೆ ನೀಡಲಿದೆ. ಒಟ್ಟು 16 ರೈಲುಗಳು ಈ ಮಾರ್ಗದಲ್ಲಿ ಸೇವೆ ನೀಡಲಿದೆ. ಜೊತೆಗೆ 7 ರೈಲು ಹೆಚ್ಚುರಿಯಾಗಿ ಸೇರ್ಪಡಿಸಲು ನಿರ್ಧರಿಸಲಾಗಿದೆ. ಹೀಗಾಗಿ ಒಟ್ಟು 23 ರೈಲುಗಳು ಪಿಂಕ್ ಲೈನ್‌ನಲ್ಲಿ ಸೇವೆ ನೀಡಲಿದೆ.
ಇತ್ತೀಚಗೆಷ್ಟೇ ಗುಲಾಬಿ ಮಾರ್ಗದ ಮೆಟ್ರೋ ರೈಲನ್ನು ಕೊತನೂರು ಮೆಟ್ರೋ ಡಿಪೋಗೆ ಹಸ್ತಾಂತರ ಮಾಡಲಾಗಿತ್ತು. M.G ರೋಡ್, ಶಿವಾಜಿನಗರ ಮತ್ತು ಟ್ಯಾನರಿ ರಸ್ತೆ, ವೆಂಕಟೇಶಪುರ ಮೂಲಕ ಹಾದು ಹೋಗುವ ಮೆಟ್ರೋ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲಿದೆ. ಪ್ರಮುಖ ಸ್ಥಳಗಳ ಮೂಲಕ ಮೆಟ್ರೋ ಹಾದು ಹೋಗಲಿರು ಕಾರಣ ಬಹುತೇಕರು ಇನ್ನು ಮೆಟ್ರೋ ಆಶ್ರಯಿಸಲಿದ್ದಾರೆ.


