Asianet Suvarna News Asianet Suvarna News

ಮಡಿಕೇರಿ ದಸರಾ: ಮದರಂಗಿ ಹಾಕಿ, ಕಣ್ಕಟ್ಟಿ ಮೇಕಪ್ ಮಾಡಿ ದರ್ಬಾರ್ ಮಾಡಿದ ಮಹಿಳೆಯರು!

ದಸರಾದ ಐದನೇ ದಿನದಲ್ಲಿ ಮಂಜಿನನಗರಿ ಮಡಿಕೇರಿ ಸಂಭ್ರಮಿಸುತ್ತಿದ್ದು, ಮಂಗಳವಾರ ಮಹಿಳೆಯರದ್ದೇ ದರ್ಬಾರ್ ನಡೆಯಿತು.

Dasara celebration by women in Madikeri Kodagu rav
Author
First Published Oct 8, 2024, 7:04 PM IST | Last Updated Oct 8, 2024, 7:04 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು : ದಸರಾದ ಐದನೇ ದಿನದಲ್ಲಿ ಮಂಜಿನನಗರಿ ಮಡಿಕೇರಿ ಸಂಭ್ರಮಿಸುತ್ತಿದ್ದು, ಮಂಗಳವಾರ ಮಹಿಳೆಯರದ್ದೇ ದರ್ಬಾರ್ ನಡೆಯಿತು. ಮಹಿಳಾ ದಸರಾದ ರಸದೌತಣ ಝಲಕ್ ಹೋಗಿತ್ತು ನೋಡಿ. ಕೊಡಗು ಜಿಲ್ಲೆಯಲ್ಲಿ ದಸರಾ ಆಚರಣೆ ಮತ್ತಷ್ಟು ಮೆರಗು ಪಡೆದುಕೊಳ್ಳುತ್ತಿದ್ದು ದಿನಕೊಂದೊಂದು ಕಾರ್ಯಕ್ರಮ ಮಂಜಿನ ನಗರಿಯ ಜನತೆಗೆ ಮನೋರಂಜನೆಯ ರಸದೌತಣವನ್ನೆ ನೀಡುತ್ತಿದೆ. 

ಇಂದು ಮಡಿಕೇರಿಯಲ್ಲಿ ಮಹಿಳಾ ದಸರಾ ಕಳೆಗಟ್ಟಿದ್ದು ಎಲ್ಲಿ ನೋಡಿದ್ರು ಮಹಿಳಾ ಮಣಿಗಳೆ ಕಂಡು ಬಂದ್ರು. ಕಾರ್ಯಕ್ರಮನ್ನ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಅವರ ಪತ್ನಿ ದಿವ್ಯಾ ಮಂತರ್ ಗೌಡ ಉದ್ಘಾಟಿಸಿದರು. ಕೇವಲ ಮನೆ ಕೆಲಸ ಗಂಡ ಮಕ್ಕಳ ಜವಾಬ್ದಾರಿಯನ್ನೇ ನಿಭಾಯಿಸುವುದರಲ್ಲೇ ದಿನ ಕಳೆಯುತ್ತಿದ್ದ ಮಹಿಳೆಯರು ಇಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟಗಳಲ್ಲಿ ಮಿಂದೆದ್ದು ಸಂಭ್ರಮಿಸಿದ್ದಾರೆ ಎಂದು ಆಯೋಜಕಿ ಸವೀತಾ ಹೇಳಿದರು. 

Dasara celebration by women in Madikeri Kodagu rav

ಕೊಡಗು: ರೈತರು, ವ್ಯಾಪಾರಿಗಳಾದ ವಿದ್ಯಾರ್ಥಿಗಳು, ಮಕ್ಕಳ ಸಂತೆಯಲ್ಲಿ ವಸ್ತು ಖರೀದಿಸಿದ ಡಿಸಿ ವೆಂಕಟ ರಾಜ

ಮಹಿಳೆಯರಿಗಾಗಿ, ಮದರಂಗಿ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಸಾಂಪ್ರದಾಯಿಕ ಉಡುಗೆಗಳ ಸ್ಪರ್ಧೆ,  ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಸೀರೆಯ ನಿಖರ ಬೆಲೆ ಹೇಳುವುದು ಅಜ್ಜಿಯ ಜೊತೆ ಮೊಮ್ಮಕ್ಕಳ ನಡಿಗೆ ಫ್ಯಾಷನ್ ಶೋ, ಕೊಡವ ವಾಲಗ ಕುಣಿತ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾವು ಎಂಜಾಯ್ ಮಾಡುವುದರ ಜೊತೆಗೆ ನೆರೆದಿದ್ದ ಜನರನ್ನ ರಂಜಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 30ಕ್ಕೂ ಹೆಚ್ಚು ಮಹಿಳೆಯರು ಬಣ್ಣದ ಸೀರೆಗಳನ್ನುಟ್ಟು ಬಳುಕೋ ಬಳ್ಳಿಗಳಂತೆ ರಾಂಪ್ ಮೇಲೆ ಹೆಜ್ಜೆ ಹಾಕುತ್ತಾ ಸೈ ಎನಿಸಿಕೊಂಡ್ರು. ಇನ್ನೂ ಅಜ್ಜಿಯೊಂದಿಗೆ ಮೊಮ್ಮಕ್ಕಳ ನಡಿಗೆ ಸ್ಪರ್ಧೆ ಕೂಡ ಜರುಗಿದ್ದು  ಮೊಮ್ಮಕ್ಕಳು ಕೂಡ ಹೆಜ್ಹೆ ಹಾಕ್ಕಿದ್ದು  ಅಜ್ಜಿಯರು ಕೂಡ ನಾವು ಯಾರಿಗೂ ಕಮ್ಮಿ ಇಲ್ಲ ಎಂದು ರ್ಯಾಪ್ ವಾಕ್ ಮಾಡಿದ್ದು ನೆರೆದಿದ್ದ ನೂರಾರು ಮಹಿಳೆಯರು ಚಪ್ಪಾಳೆ ಕೇಕೆಗಳ ಮೂಲಕ ಹುರಿದುಂಬಿಸುವಂತೆ ಮಾಡಿತು. 

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ ಆಚರಣೆ

ಬೆಳಗ್ಗೆಯಿಂದ ಸಂಜೆವರೆಗೂ ನಡೆದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ವಯಸ್ಸಿನ ಬೇಧ ಮರೆತು ಎಂಜಾಯ್ ಮಾಡಿದರು. ಕೊನೆಯದಾಗಿ ನಡೆದ ಓಲಗ ಕುಣಿತದಲ್ಲಿ ಎಲ್ಲರೂ ಸಾಮೂಹಿಕವಾಗಿ ಕುಣಿದು ಕುಪ್ಪಳಿಸಿದ ಮಹಿಳೆಯರು ಸಂಭ್ರಮದಿಂದ ದಸರಾದಲ್ಲಿ ಭಾಗಿಯಾದರು. ಇನ್ನೂ ವಿಶೇಷವೆಂದರೆ ಇಂದಿನ ಮಹಿಳಾ ದಸರಾ ಕಾರ್ಯಕ್ರಮಕ್ಕೆ ಮಹಿಳಾ ಪೊಲೀಸರೆ ಬಂದೋ ಬಸ್ತ್ ನೀಡುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಿದ್ದು ವಿಶೇಷವಾಗಿತ್ತು. ಒಟ್ಟಿನಲ್ಲಿ ಮಂಜಿನ ನಗರಿ ಮಡಿಕೇರಿಯಲ್ಲಿ ಇಂದು ಮಹಿಳಾ ದರ್ಬಾರ್ ಜೋರಾಗಿತ್ತು. ಮಹಿಳಾ ದಸರದಲ್ಲಿ ನಾನಾ ಕಾರ್ಯಕ್ರಮಗಳ ಮೂಲಕ ಮಿಂಚಿದ ಮಹಿಳಾ ಮಣಿಗಳು ನಾವೂ ಯಾರಿಗೂ ಕಮ್ಮಿ ಇಲ್ಲಾ ಅಂತ ಸಖ್ಖತ್ ಎಂಜಾಯ್ ಮಾಡಿದ್ರು.

Latest Videos
Follow Us:
Download App:
  • android
  • ios