ದೈವ ನರ್ತನ ವೇಳೆ ಕುಸಿದು ಬಿದ್ದು ದೈವನರ್ತಕ ಸಾವು: ಕಡಬದಲ್ಲೊಂದು ಹೃದಯ ವಿದ್ರಾವಕ ಘಟನೆ
ದೈವ ನರ್ತನ ಮಾಡುತ್ತಿದ್ದಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ಸುಳ್ಯ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವನರ್ತಕರೊಬ್ಬರು ಈ ರೀತಿ ಸಾವಿಗೀಡಾಗಿದ ಪ್ರಕರಣ ಅತ್ಯಪರೂಪ ಎಂದೇ ಹೇಳಲಾಗುತ್ತದೆ.
ಸುಳ್ಯ (ಮಾ.31): ದೈವ ನರ್ತನ ಮಾಡುತ್ತಿದ್ದಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ಸುಳ್ಯ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ದೈವನರ್ತಕರೊಬ್ಬರು ಈ ರೀತಿ ಸಾವಿಗೀಡಾಗಿದ ಪ್ರಕರಣ ಅತ್ಯಪರೂಪ ಎಂದೇ ಹೇಳಲಾಗುತ್ತದೆ. ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿಯವರು ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿ ದೈವಾರಾಧಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಗುರುವಾರ ಮುಂಜಾನೆ ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ನೇಮೊತ್ಸವ ನಡೆಯುತ್ತಿತ್ತು. ಶಿರಾಡಿ ದೈವ ಕಟ್ಟಿದ್ದ ಕಾಂತು ಅಜಿಲ ಅವರು ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು ಬಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಪುತ್ತೂರಿಗೆ ಕರೆದುಕೊಂಡು ಹೋಗಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು. ಕಾಂತು ಅವರು ಎಡಮಂಗಲ ಪರಿಸರದಲ್ಲಿ ಮತ್ತು ಇತರ ಕಡೆಗಳಲ್ಲೂ ದೊಡ್ಡ ದೊಡ್ಡ ಭೂತ ಕೋಲಗಳಲ್ಲಿ ದೈವಗಳ ನರ್ತನ ಸೇವೆ ಮಾಡುತ್ತಿದ್ದರು.
ಸಾಮಾಜಿಕ ಜಾಲತಾಣದ ಹಿಂದಿನ ಶಕ್ತಿಯೇ ಸ್ತ್ರೀ: ಸಂಸದ ತೇಜಸ್ವಿ ಸೂರ್ಯ
ಕೆಂಭಾವಿ ಯುವಕ ಟಿಪ್ಪು ಸಾವಿನ ಸುತ್ತ ಅನುಮಾನದ ಹುತ್ತ?: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಬಳಿ ಮಾ.11 ರಂದು ಅನುಮಾನಾಸ್ಪದವಾಗಿ ಮೃತಪಟ್ಟಯುವಕನೊಬ್ಬನ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಖಾಕಿಪಡೆಯೇ ಇದನ್ನು ಮುಚ್ಚಿ ಹಾಕುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮೇಲ್ನೋಟಕ್ಕೆ, ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದ ಯುವಕನ ಮೃತದೇಹ ಹಾಗೂ ಶವದ ಸಮೀಪದಲ್ಲೇ ಅಡಗಿಸಿಟ್ಟಿದ್ದ ನಾಲ್ಕೈದು ಚೀಲಗಳಲ್ಲಿದ್ದ ಶ್ರೀಗಂಧದ ತುಂಡುಗಳ ಪತ್ತೆ ಪ್ರಕರಣವನ್ನು ಪೊಲೀಸರೇ ಮರೆ ಮಾಚಿದರೆ ಎಂಬ ದಟ್ಟವಾದ ಅನುಮಾನದ ಪ್ರಶ್ನೆಗಳಿಗೆ ಕಾರಣವಾಗಿದೆ.
ಮಾ.11 ರಂದು ನಗನೂರಿನ ಗದ್ದೆಯೊಂದರಲ್ಲಿ ಪತ್ತೆಯಾದ 25 ವರ್ಷದ ಹದನೂರಿನ ಟಿಪ್ಪು ಸುಲ್ತಾನ್ ಶವದ ಸುತ್ತ ಅನುಮಾನದ ಹುತ್ತಗಳು ಮೂಡಿವೆ. ಇದೊಂದು ವ್ಯವಸ್ಥಿತ ಕೊಲೆಯ ಸಂಚು ಎಂಬ ಮಾತುಗಳಿದ್ದಾಗ್ಯೂ, ತನಿಖೆ ನಡೆಸಬೇಕಾದ ಪೊಲೀಸರೇ ದಾರಿ ತಪ್ಪಿಸುತ್ತಿರುವಂತಿದೆ ಎಂಬ ಆರೋಪಗಳಿವೆ. ಅಚ್ಚರಿ ಎಂದರೆ, ಶವ ಸಿಕ್ಕ ಜಾಗೆಯಲ್ಲಿ ಆಗ ಕಂಡು ಬಂದಿದ್ದ ಶ್ರೀಗಂಧದ ತುಂಡುಗಳ ಬಗ್ಗೆ ಇಡೀ ದೂರಿನಲ್ಲಿ ಅಥವಾ ಮಹಜರು ವರದಿಯಲ್ಲಿ ಚಕಾರವೇ ಇಲ್ಲದಿರುವುದು ಶಂಕೆ ಮೂಡಿಸಿದೆ ಎನ್ನಲಾಗುತ್ತಿದೆ.
ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಟಿಪ್ಪು ವನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ನೇತೃತ್ವದಲ್ಲಿ ಮಾ.27 ರಂದು ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಿ, ತನಿಖೆ ಮುಚ್ಚಿ ಹಾಕಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಮೃತ ಯುವಕನ ತಂದೆ ಖಾದರ್‌ಬಾಷಾ ಈ ಕುರಿತು ದೂರು ನೀಡಿದ್ದಾರೆ. ಜಮೀನು ವ್ಯಾಜ್ಯ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಗನನ್ನು ಕೊಲೆ ಮಾಡಲಾಗಿದೆ ಎಂದು ಬಾಷಾ ದೂರಿದ್ದರು. ಈ ಕುರಿತು, ಕೆಂಭಾವಿಯ ಪೊಲೀಸ್ ಠಾಣೆಯಲ್ಲಿ ಈ ‘ಅನುಮಾನಾಸ್ಪದ ಸಾವು’ ಬಗ್ಗೆ ದೂರೊಂದನ್ನು ಸಿಆರ್ಪಿಸಿ 174ಸಿ ಅಡಿ (0004/2023) ದಾಖಲಿಸಲಾಗಿದೆ.