ನಕಲಿ ಸಿಮ್ ಜಾಲಕ್ಕೆ ನೀವೂ ಸಿಲುಕಿರಬಹುದು; ಪತ್ತೆ ಹಚ್ಚಲು ಇಲ್ಲಿದೆ ಸಂಪೂರ್ಣ ಮಾಹಿತಿ

ದಿನೇದಿನೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂತಹ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನೆವರಿ ಪ್ರಾರಂಭದೊಂದಿಗೆ ಸಿಮ್ ಖರೀದಿಸುವ ನಿಯಮಗಳು ಬದಲಾಗಿದ್ದು, ಮೊದಲಿಗಿಂತಲೂ ಕಠಿಣವಾಗಿರಲಿವೆ. Cyber ​​fraudsters may have used a fake SIM in your name too; Check it out

Cyber fraudsters may have used a fake sim in your name too check it out now at bengaluru rav

ಬೆಂಗಳೂರು (ಜ.5): ದಿನೇದಿನೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂತಹ ವಂಚನೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನೆವರಿ ಪ್ರಾರಂಭದೊಂದಿಗೆ ಸಿಮ್ ಖರೀದಿಸುವ ನಿಯಮಗಳು ಬದಲಾಗಿದ್ದು, ಮೊದಲಿಗಿಂತಲೂ ಕಠಿಣವಾಗಿರಲಿವೆ.

ನಕಲಿ ಸಿಮ್‌ಗಳನ್ನ ಬಳಸಿಕೊಂಡು ಸೈಬರ್ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ. ಜನರ ಹೆಸರಲ್ಲಿ ನಕಲಿ ಸಿಮ್ ಖರೀದಿಸುವ ವಂಚಕರು ಅಪರಾಧಕೃತ್ಯಗಳಲ್ಲಿ ಬಳಸುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆ ನಕಲಿ ಸಿಮ್‌ ಕಾರ್ಡ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

ಒಂದೇ ರೀತಿ ಪಾಸ್‌ವರ್ಡ್‌ ಬಳಸಿದರೆ ವಂಚನೆ ಫಿಕ್ಸ್‌; ಹುಟ್ಟಿದ ದಿನಾಂಕ, ಹೆಸರು ಬಳಸುವಾಗ ಎಚ್ಚರ!

ದೇಶದಲ್ಲಿ ನಕಲಿ ಸಿಮ್ ದಂಧೆ:

ದೇಶದಲ್ಲಿ ನಕಲಿ ಸಿಮ್‌ ಕಾರ್ಡ್‌ ದಂಧೆಯೇ ನಡೆಯುತ್ತಿದ್ದು, ಹಣ ಕೊಟ್ಟು ಯಾರದ್ದೋ ಹೆಸರಿನಲ್ಲಿ ಸಿಮ್ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.ಅಪರಾಧ ಕೃತ್ಯಗಳಲ್ಲಿ ಸಕ್ರಿಯಾಗಿರುವ ಇಂಥ 55 ಲಕ್ಷಕ್ಕೂ ಅಧಿಕ ಅಕ್ರಮ ಸಿಮ್‌ಗಳ ಸಂಪರ್ಕ ಕಡಿತ ಮಾಡಲಾಗಿದೆ. ಜನರ ಐಡಿ ಆಧಾರ ಬಳಸಿಕೊಂಡು ನಕಲಿ ಸಿಮ್ ಪಡೆದು ಸೈಬರ್ ಕ್ರೈಂ, ಆರ್ಥಿಕ ಅಪರಾಧ, ಭಯೋತ್ಪಾದನ ಕೃತ್ಯಕ್ಕೆ ಬಳಕೆ  ಮಾಡಲಾಗುತ್ತಿದೆ. ಡಿಜಿಟಲ್ ಅಕ್ರಮಕ್ಕೆ 2.78 ಲಕ್ಷ ಸಿಮ್ ಬಳಕೆಯಾಗಿರುವುದು ದೃಢಪಟ್ಟಿದೆ. ಆಧಾರ್ ಕಾರ್ಡ್, ವೋಟರ್ ಐಡಿ, ಪಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ನಕಲಿ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು.

ಹೊಸ ವಿಧೇಯಕದಿಂದ ಕಡಿವಾಣ ನಿರೀಕ್ಷೆ:

ನಕಲಿ ಸಿಮ್‌ಗಳ ದಂಧೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೆಲವು  ಬ್ಯಾಂಕಿಂಗ್ ವ್ಯವಹಾರದಂತಹ ಹಣಕಾಸಿನ ವಿಚಾರದಲ್ಲಿ ಭಾರೀ ವಂಚನೆಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿನ್ನೆಲೆ ಸಾರ್ವಜನಿಕರು ದಾಖಲೆ ನೀಡಲು ಹಿಂಜರಿಯುವಂತಾಗಿದೆ. ಜ.1ರಿಂದ ಜಾರಿಯಾದ ಹೊಸ ವಿಧೇಯಕದಿಂದ ನಕಲಿ ಸಿಮ್‌ಗಳ ಹಾವಳಿಗೆ ಕಡಿವಾಣ ಹಾಕುವ ನಿರೀಕ್ಷೆಯಿದೆ. 

 ಅಪರಾಧ ಕೃತ್ಯಗಳಿಗೆ ಫೇಕ್ ಸಿಮ್ ಕಾರ್ಡ್‌ಗಳನ್ನೇ ಬಳಕೆ ಮಾಡಿರುವ ಹಲವು ಪ್ರಕರಣಗಳ ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿವೆ ಎಂದು ಕೇಂದ್ರ ದೂರ ಸಂಪರ್ಕ ಇಲಾಖೆ ನೀಡಿರುವ ಮಾಹಿತಿ ನೀಡಿದೆ. ಇದರ ಪ್ರಕಾರ ದೇಶಾದ್ಯಂತ ಪೋರ್ಜರಿ ದಾಖಲೆ ಕೊಟ್ಟು ಖರೀದಿಸಿದ್ದ ಬರೋಬ್ಬರಿ 55.52 ಲಕ್ಷ ಸಿಮ್ ಕಾರ್ಡ್‌ಗಳ ಸಂಪರ್ಕ ಕಡಿತಗೊಳಿಸಲಾಗಿದೆ.  ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ (ಎನ್‌ಸಿಸಿಆರ್‌ಪಿ) ತನಿಖಾ ಸಂಸ್ಥೆಗಳು ನೀಡಿರುವ ವರದಿ. ಆ ವರದಿ ಆಧರಿಸಿ ಸೈಬರ್ ಕ್ರೈಂ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ಬಳಕೆಯಾಗಿರುವ 2.78 ಲಕ್ಷ ಸಿಮ್ ಕಾರ್ಡ್‌ಗಳ ಸಂಪರ್ಕವನ್ನು ರದ್ದುಗೊಳಿಸಲಾಗಿದೆ. 

2023ರಲ್ಲಿ ನಡೆದ ವಿಶೇಷ ಕಾರ್ಯಾಚರಣೆ :

ಕರ್ನಾಟಕದಲ್ಲಿ ವಿವಿಧ ಟೆಲಿಕಾಂ ಕಂಪನಿಗಳ  25 ಸಾವಿರಕ್ಕೂ ಅಧಿಕ ಸಿಮ್ ಕಾರ್ಡ್‌ಗಳು ನಕಲಿ ದಾಖಲೆ ಸಲ್ಲಿಸಿ ಖರೀದಿಸಿರುವುದು ದೃಢಪಟ್ಟಿತ್ತು. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಹೀಗಾಗಿ ಸಿಮ್ ಕಾರ್ಡ್ ದಂಧೆಯ ಬಗ್ಗೆ ಸಾರ್ವಜನಿಕರು ಕೂಡ ಎಚ್ಚರಿಕೆ ವಹಿಸಬೇಕು ಎಂದು ಸೈಬರ್ ಪೊಲೀಸರು ಸಲಹೆ ನೀಡಿದ್ದಾರೆ.  ನಕಲಿ ದಾಖಲಾತಿಗಳನ್ನು ಸಲ್ಲಿಸಿ ನಿಮ್ಮ ಹೆಸರಿನಲ್ಲಿ ಯಾರಾದರು ಸಿಮ್ ಖರೀದಿಸಿದ್ದಾರೆಯೇ ಎಂದು ಪರಿಶೀಲಿಸಿಕೊಳ್ಳಲು ಸೂಚಿಸಿದ್ದಾರೆ. ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್‌ಸ್ಯೂಮರ್ ಪ್ರೊಟೆಕ್ಷನ್  ವೆಬ್‌ಸೈಟ್ ಮೂಲಕ ಸಿಮ್ ಕಾರ್ಡ್ ಪರಿಶೀಲನೆ ಮಾಡಿಕೊಳ್ಳಬಹುದು. ಎಲ್ಲರೂ ಪರಿಶೀಲಿಸಿಕೊಳ್ಳಲು ಪೊಲೀಸರು ಸೂಚಿಸಿದ್ದಾರೆ. 

 

ನಕಲಿ ದಾಖಲೆ ಬಳಸಿ 29000 ಸಿಮ್‌ಕಾರ್ಡ್‌ ವಿತರಣೆ: 18 ಜನರ ತಂಡದ ಬಂಧನ

ಸಿಮ್ ಕಾರ್ಡ್ ಪರಿಶೀಲನೆ ಹೇಗೆ?

  • ಕೇಂದ್ರ ಸರ್ಕಾರದ ಅಧಿಕೃತ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಆ್ಯಂಡ್ ಕನ್‌ಸ್ಯೂಮರ್ ಪ್ರೊಟೆಕ್ಷನ್ ವೆಬ್‌ಸೈಟ್‌ಗೆ ಹೋಗಿ. 
  • ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಅಲ್ಲಿರುವ ಕ್ಯಾಪ್ಚಾ ನಮೂದಿಸಿ, ಒಕೆ ಕೊಟ್ಟರೆ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ. 
  • ಒಟಿಪಿ ನಮೂದಿಸಿದ ಕೂಡಲೇ ಲಾಗಿನ್ ಆಗುತ್ತದೆ. 
  • ನಿಮ್ಮ ಹೆಸರಿನ ದಾಖಲೆಯಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬುದು ಸಂಖ್ಯೆ ಸಹಿತ ಕಾಣಿಸುತ್ತದೆ. 
  • ಸಂಖ್ಯೆಗಳ ಎದುರಿಗೆ ನಾಟ್ ಮೈ ನಂಬರ್, ನಾಟ್ ರಿಕ್ವರ್ಡ್‌, ರಿಕ್ವರ್ಡ್‌ ಎಂದು 3 ಆಯ್ಕೆಗಳು ಬರುತ್ತವೆ. 
  • ನೀವು ಖರೀದಿಸದ ನಂಬರ್ ಬಂದರೆ ನಾಟ್ ಮೈ ನಂಬರ್ ಅಥವಾ ನಾಟ್ ರಿಕ್ವರ್ಡ್‌ ಆಯ್ಕೆ ಮಾಡಿ ರಿಪೋರ್ಟ್ ಮಾಡಬಹುದು. 

ಹೊಸ ನಿಯಮವೇನು?

  • 2024 ಜ.1ರಿಂದ ದೂರಸಂಪರ್ಕ ವಿಧೇಯಕ -2023 ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿ ನಿಯಮ ಬಿಗಿ ಮಾಡಲಾಗಿದೆ. 
  •  ಸಿಮ್ ಕಾರ್ಡ್ ಡೀಲರ್‌ಗಳು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್‌ಗೆ ಒಳಗಾಗುವುದು ಕಡ್ಡಾಯವಾಗಿದೆ. 
  • ನೋಂದಣಿ ಮಾಡಿಸದೆ ಸಿಮ್ ಕಾರ್ಡ್ ಮಾರಾಟ ಮಾಡುವಂತಿಲ್ಲ. ಅಕ್ರಮವಾಗಿ ಮಾರಾಟ ಮಾಡಿದರೆ ಡೀಲರ್‌ಗಳೇ ಹೊಣೆಗಾರರು. 
  • ನಿಯಮ ಪಾಲಿಸದ ಡೀಲರ್‌ಗಳಿಗೆ 10 ಲಕ್ಷ ರೂ. ದಂಡ ವಿಧಿಸಲು ಅವಕಾಶ ಇದೆ. 

ಅಕ್ರಮ ನಡೆಯುವುದು ಹೇಗೆ?

ನಂಬರ್-1

- ಈ ಹಿಂದೆ ಮೊಬೈಲ್ ಶೋರೂಂಗೆ ಹೋಗಿ ಅವರು ಕೊಡುವ ಫಾರಂ ಭರ್ತಿ ಮಾಡಿ ಸಹಿ ಹಾಕಿದರೆ ಸಿಮ್ ಕಾರ್ಡ್ ಕೊಡುತ್ತಿದ್ದರು. ಇದೇ ಮಾಹಿತಿ ಇಟ್ಟುಕೊಂಡು ಡೀಲರ್, ಬೇರೆಯವರಿಗೆ ಸಿಮ್ ಮಾರುತ್ತಿದ್ದ. ಗ್ರಾಹಕರಿಗೆ ಉಚಿತವಾಗಿ ಸಿಮ್ ಕೊಟ್ಟರೂ ಮಾರಾಟ ಮಾಡುವ ಡೀಲರ್‌ಗೆ ಒಂದು ಸಿಮ್‌ಗೆ ಕಂಪನಿ 25 ರಿಂದ 30 ರೂ. ಕೊಡುತ್ತಿತ್ತು. ಹೀಗಾಗಿಯೇ ಡೀಲರ್ ಅಡ್ಡದಾರಿ ಹಿಡಿಯುತ್ತಿದ್ದ. ದಿನಕ್ಕೆ 100 ಸಿಮ್ ಮಾರುತ್ತಿದ್ದ. 25 ರೂ. ಅಂದುಕೊಂಡರೂ ಆತನಿಗೆ 25000 ರೂ. ಬರುತ್ತಿತ್ತು. ಇದರಲ್ಲಿ ಕೆಲವು ಸಿಮ್‌ಗಳನ್ನು ನಾಶ ಮಾಡುತ್ತಿದ್ದ. ಮತ್ತೆ ಕೆಲವನ್ನು ದಾಖಲೆ ಇಲ್ಲದವರಿಗೆ ಹಣ ಪಡೆದು ಮಾರುತ್ತಿದ್ದ. 

ನಂಬರ್-2

- ಈಗ ಸಿಮ್ ಕಾರ್ಡ್ ಬೇಕೆಂದರೆ ಫೋಟೋ ಹಾಗೂ ಆಧಾರ್ ನಂಬರ್ ಕೊಡಬೇಕು. ಶಾಪ್‌ಗೆ ಹೋದರೆ ಡೀಲರ್ ತಾನೇ ಫೋಟೋ ತೆಗೆದುಕೊಂಡು ಅಪ್‌ಲೋಡ್ ಮಾಡಿ ಸಿಮ್ ಕೊಡುತ್ತಾನೆ. ಆದರೆ, ನಮ್ಮದೇ ಫೋಟೋ ಹಾಗೂ ಆಧಾರ್ ನಂಬರ್ ಇಟ್ಟುಕೊಂಡು ಬೇರೆಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಮಾರಾಟ ಮಾಡುತ್ತಿದ್ದಾರೆ. ಇಂತಹ ಅಕ್ರಮ ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ಬೆಳಕಿಗೆ ಬಂದಿದ್ದು, ಎಫ್ಐಆರ್‌ಗಳು ದಾಖಲಾಗಿವೆ. 

ತೆಗೆದುಕೊಂಡ ಕ್ರಮಗಳೇನು..?

1. ದೇಶಾದ್ಯಂತ ನಕಲಿ ದಾಖಲೆ ಸಲ್ಲಿಸಿ ಖರೀದಿಸಿದ್ದ 55.52 ಲಕ್ಷ ಸಿಮ್ ಕಾರ್ಡ್ ರದ್ದು
2. ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿ ವರದಿ ಮಾಡಿದ ಸಿಮ್‌ಗಳ ಸಂಖ್ಯೆ 13.42 ಲಕ್ಷ
3. 70,313 ಡೀಲ್‌ರ್ಸ್‌ (ಪಾಯಿಂಟ್ ಆ್ ಸೇಲ್ಸ್) ಕಪ್ಪುಪಟ್ಟಿಗೆ, 365 ಡೀಲರ್ಸ್‌ ವಿರುದ್ಧ ಎಫ್ ಐಆರ್. 
4. ಸೈಬರ್ ಅಪರಾಧದಲ್ಲಿ ಭಾಗಿಯಾದ ಸಂಬಂಧ 1.32 ಲಕ್ಷ ಸಿಮ್ ಬ್ಲಾಕ್.
5. ಕನೆಕ್ಷನ್ ಕಟ್ ಮಾಡಿದ ಸಿಮ್ ಜೋಡಣೆಯಾಗಿರುವ 9.83 ಲಕ್ಷ ಬ್ಯಾಂಕ್ ಖಾತೆ ಫ್ರೀಜ್.

Latest Videos
Follow Us:
Download App:
  • android
  • ios