ನಕಲಿ ದಾಖಲೆ ಬಳಸಿ 29000 ಸಿಮ್‌ಕಾರ್ಡ್‌ ವಿತರಣೆ: 18 ಜನರ ತಂಡದ ಬಂಧನ

ಸಾಮಾನ್ಯ ಜನರ ದಾಖಲೆಗಳನ್ನು ನಕಲು ಮಾಡಿ 29552 ಸಿಮ್‌ಕಾರ್ಡ್‌ ಖರೀದಿಸಿ ಅದನ್ನು ದುಷ್ಕೃತ್ಯ ಎಸಗುವವರಿಗೆ ವಿತರಿಸುತ್ತಿದ್ದ ಜಾಲವೊಂದು ಗುಜರಾತ್‌ನಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ 18 ಜನರನ್ನು ಬಂಧಿಸಲಾಗಿದೆ.

29000 SIM cards Distributed using fake documents team of 18 arrested in Gujarat akb

ಅಹಮದಾಬಾದ್‌: ಸಾಮಾನ್ಯ ಜನರ ದಾಖಲೆಗಳನ್ನು ನಕಲು ಮಾಡಿ 29552 ಸಿಮ್‌ಕಾರ್ಡ್‌ ಖರೀದಿಸಿ ಅದನ್ನು ದುಷ್ಕೃತ್ಯ ಎಸಗುವವರಿಗೆ ವಿತರಿಸುತ್ತಿದ್ದ ಜಾಲವೊಂದು ಗುಜರಾತ್‌ನಲ್ಲಿ ಪತ್ತೆಯಾಗಿದೆ. ಘಟನೆ ಸಂಬಂಧ 18 ಜನರನ್ನು ಬಂಧಿಸಲಾಗಿದೆ. ದೂರಸಂಪರ್ಕ ಸಚಿವಾಲಯ, ಸ್ಥಳೀಯ ಪೊಲೀಸರು, ಸಿಐಡಿ ಮತ್ತು ಭಯೋತ್ಪಾದನಾ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈ ಜಾಲವನ್ನು ಬಯಲಿಗೆಳೆದಿವೆ. ಪ್ರಕರಣ ಸಂಬಂಧ ಇನ್ನೂ ಹಲವಾರು ಆರೋಪಿಗಳು ನಾಪತ್ತೆಯಾಗಿದ್ದು ಅವರಿಗೆ ಬಲೆ ಬೀಸಲಿದೆ.

ಅಕ್ರಮ ಹೇಗೆ?: ವಂಚಕರ ತಂಡ ಸಿಮ್‌ಕಾರ್ಡ್‌ ಖರೀದಿಗಾಗಿ ಜನಸಾಮಾನ್ಯರು ನೀಡುತ್ತಿದ್ದ ದಾಖಲೆ (Documents), ಫೋಟೋಗಳನ್ನು ನಕಲು ಮಾಡಿಕೊಳ್ಳುತ್ತಿತ್ತು. ಇದರಲ್ಲಿ ವಂಚಕರ ತಂಡದ ಜೊತೆಗೆ ಸಿಮ್‌ ಕಾರ್ಡ್‌ (Sim card) ಮಾರಾಟ ಮಾಡುವ ಅಂಗಡಿ ಮಾಲೀಕರು ಕೂಡಾ ಭಾಗಿಯಾಗಿದ್ದರು. ಹೀಗೆ 486 ಜನರ ಫೋಟೋ ಬಳಸಿ ಅದಕ್ಕೆ ಇತರೆ ನಕಲಿ ದಾಖಲೆಗಳನ್ನು ಸೇರಿಸಿ ರಾಜ್ಯಾದ್ಯಂತ 29552 ಕಾರ್ಡ್‌ ವಿತರಿಸಲಾಗಿತ್ತು. ಇಂಥ ಕಾರ್ಡ್‌ಗಳನ್ನು ಜೂಜು, ಸೈಬರ್‌ ಅಪರಾಧ, ಬೆದರಿಕೆ ಹೀಗೆ ನಾನಾ ಕಾರಣಕ್ಕೆ ಬಳಕೆ ಮಾಡಲಾಗುತ್ತಿತ್ತು.

ಮಂಗಳೂರು ಬಾಂಬ್‌ ಸ್ಫೋಟ ಪ್ರಕರಣ: ಕೊಯಮತ್ತೂರಲ್ಲಿ ನಕಲಿ ಸಿಮ್‌ ಕಾರ್ಡ್‌ ಖರೀದಿ ಮಾಡಿದ್ನಾ ಉಗ್ರ?

ಪತ್ತೆ ಹೇಗೆ?:
ದೂರಸಂಪರ್ಕ ಸಚಿವಾಲಯವು ಕೃತಕ ಬುದ್ಧಿಮತ್ತೆ (Artificial intelligence) ವ್ಯವಸ್ಥೆ ಬಳಿ ಒಂದೇ ದಾಖಲೆ ಮತ್ತು ಫೋಟೋಗಳು ಹಲವು ಬಾರಿ ಬಳಕೆಯಾಗಿದೆಯೇ ಎಂಬುದನ್ನು ಪತ್ತೆ ಮಾಡುವ ಕೆಲಸ ಮಾಡಿತ್ತು. ಇದರಲ್ಲಿ ವಂಚಕರ ದುಷ್ಕೃತ್ಯ ಬೆಳಕಿಗೆ ಬಂದಿದೆ.

Fake Sim Card Racket: ಕರ್ನಾಟದಲ್ಲಿ ಸದ್ದು ಮಾಡುತ್ತಿದೆ ನಕಲಿ ಸಿಮ್‌ ಕಾರ್ಡ್‌ ಮಾಫಿಯಾ!

Latest Videos
Follow Us:
Download App:
  • android
  • ios