Asianet Suvarna News Asianet Suvarna News

ಒಂದೇ ರೀತಿ ಪಾಸ್‌ವರ್ಡ್‌ ಬಳಸಿದರೆ ವಂಚನೆ ಫಿಕ್ಸ್‌; ಹುಟ್ಟಿದ ದಿನಾಂಕ, ಹೆಸರು ಬಳಸುವಾಗ ಎಚ್ಚರ!

ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್‌ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಫೇಸ್‌ಬುಕ್‌, ಎಕ್ಸ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್‌ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ.

Fraud fix if same password is used; Be careful while using date of birth, name rav
Author
First Published Jan 5, 2024, 6:07 AM IST

ಬೆಂಗಳೂರು (ಜ.5) : ಆನ್‌ಲೈನ್ ವ್ಯವಹಾರದಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಸದಂತೆ ಸಿಐಡಿ ಸೈಬರ್‌ ವಿಭಾಗದ ಪೊಲೀಸರು ಮನವಿ ಮಾಡಿದ್ದಾರೆ. ಫೇಸ್‌ಬುಕ್‌, ಎಕ್ಸ್‌ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಇತರೆ ಆನ್‌ಲೈನ್‌ ಖಾತೆಗಳಲ್ಲಿ ಒಂದೇ ರೀತಿಯ ಪಾಸ್‌ವರ್ಡ್ ಬಳಕೆಯಿಂದ ಸೈಂಬರ್ ವಂಚನೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಹುಟ್ಟುಹಬ್ಬದ ದಿನಾಂಕ, ಹೆಸರು ಹಾಗೂ ಸಾಮಾನ್ಯ ಪದಗಳನ್ನು ಪಾಸ್‌ವರ್ಡ್‌ಗೆ ಬಳಸುವಾಗ ಯೋಚಿಸುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. 

 

2023ರಲ್ಲಿ ಭಾರತೀಯರ ನೆಚ್ಚಿನ ಪಾಸ್‌ವರ್ಡ್‌ ಯಾವ್ದು ನೋಡಿ: ನೀವೂ ಇದನ್ನೇ ಬಳಸ್ತಿದ್ರೆ ಮೊದ್ಲು ಚೇಂಜ್ ಮಾಡಿ!

ನಿಯಮಿತವಾಗಿ ಬಳಸುವ ಪಾಸ್‌ ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸಿ. ಸೈಬರ್‌ ವಂಚನೆಗಳಿಗೆ ಒಂದೇ ರೀತಿಯ ಪಾಸ್‌ ವರ್ಡ್‌ ಬಳಕೆ ಸಹ ಪ್ರಮುಖ ಕಾರಣವಾಗಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ವಿಶ್ವದಲ್ಲಿ ಟಾಪ್‌ಟೆನ್‌ ಸಾಮಾನ್ಯ ಪಾಸ್‌ವರ್ಡ್‌ ಹೀಗಿವೆ.

ಪಾಸ್‌ವರ್ಡ್‌ ಬಳಸುವವರ ಸಂಖ್ಯೆ (ಸೆಕೆಂಡ್‌ಗಳ ಲೆಕ್ಕ)

123456 45,24,867

admin 40,08,850

123456789 13,71,152

123456789 12,13,047

1234 9,69,811

12345 7,28,414

password 7,10,321

123 5,28,086

ao123456 3,19,725

1234567890 3,02,709

Follow Us:
Download App:
  • android
  • ios