Night Curfew: ರಾಜ್ಯ ಸರ್ಕಾರದ ಕ್ರಮಕ್ಕೆ ಸಿಟಿ ರವಿ ಅಸಮಾಧಾನ
* ರಾಜ್ಯದಲ್ಲಿ ಡಿ.28ರಿಂದ 10ದಿನಗಳ ಕಾಲ ನೈಟ್ ಕರ್ಫ್ಯೂ
* ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಸಿಟಿ ರವಿ ಅಸಮಾಧಾನ
* ಸರ್ಕಾರದ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಟಿ ರವಿ
ಚಿಕ್ಕಮಗಳೂರು, (ಡಿ.27): ಕೊರೋನಾ (Coroanvrius) ರೂಪಾಂತರಿ ಒಮಿಕ್ರಾನ್ (Omicron) ವೈರಸ್ ಭೀತಿ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಡಿ.28ರಿಂದ 10ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ(CT Ravi) ಅವರು ನೈಟ್ ಕರ್ಫ್ಯೂ (Night Curfew) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Omicron Threat: ಕಠಿಣ ಕ್ರಮ ಅನಿವಾರ್ಯ, ನೈಟ್ ಕರ್ಫ್ಯೂ ಮರುಪರಿಶೀಲಿಸಲ್ಲ: ಬೊಮ್ಮಾಯಿ
ಚಿಕ್ಕಮಗಳೂರಿನಲ್ಲಿ ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ಸರ್ಕಾರದ ನೈಟ್ ಕರ್ಫ್ಯೂ ಆದೇಶದ ಬಗ್ಗೆ ವ್ಯಾಖ್ಯಾನಿಸಲಾಗಲ್ಲ. ಸರಿ, ತಪ್ಪು ಎಂದು ನಾನು ವ್ಯಾಖ್ಯಾನ ಮಾಡುವುದಕ್ಕೆ ಆಗಲ್ಲ. ಒಮಿಕ್ರಾನ್ಗೆ ಭಯಪಡಬೇಕಿಲ್ಲವೆಂದು ವಿಜ್ಞಾನಿಗಳೇ ಹೇಳಿದ್ದಾರೆ. ಮೂಗು ಇರುವವರಿಗೆ ನೆಗಡಿ ತಪ್ಪಿದ್ದಲ್ಲ. ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು. ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ, ಆದರೆ ಎಚ್ಚರವಹಿಸಬೇಕು ಎಂದು ಸರ್ಕಾರದ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ನಾಳೆಯಿಂದ (ಡಿಸೆಂಬರ್ 28) ನೈಟ್ ಕರ್ಫ್ಯೂ ಜಾರಿಯಾಗಲಿದೆ. ಸುಮಾರು 10 ದಿನಗಳ ಕಾಲ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಇರಲಿದೆ. ಸರ್ಕಾರದ ಈ ನಿರ್ಣಯಕ್ಕೆ ರಾಜ್ಯದಾದ್ಯಂತ ಬೇಸರ ವ್ಯಕ್ತವಾಗಿದೆ. ಇನ್ನು ಬಿಜೆಪಿ ನಾಯಕ ಸಿಟಿ ರವಿ ಕೂಡಾ, ರಾಜ್ಯ ಸರ್ಕಾರ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು. ಅನಗತ್ಯ ಭಯ ಹುಟ್ಟಿಸುವ ಕೆಲಸ ಯಾರೂ ಮಾಡಬಾರದು ಎಂದಿದ್ದಾರೆ.
ಇನ್ನು ಈ ಬಗ್ಗೆ ಸಚಿವ ಸುನೀಲ್ ಕುಮಾರ್ ಪ್ರತಿಕ್ರಿಯಿಸಿದ್ದು, ಜನರ ಹಿತದೃಷ್ಟಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಅನಗತ್ಯ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕಸ ಎಸೆಯುತ್ತಿದ್ದ ಯುವಕನಿಗೆ ಸಿಟಿ ರವಿ ತರಾಟೆ
ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ಚರಂಡಿಗೆ ಕಸ ಎಸೆಯುತ್ತಿದ್ದ ಯುವಕನಿಗೆ ಬಿಜೆಪಿ ನಾಯಕ ಸಿ.ಟಿ. ರವಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನಿಮ್ಮ ಮನೆ ಬಳಿ ಬರುವ ಕಸದ ಗಾಡಿಗೆ ಹಾಕಬೇಕು ಎಂಬಂತೆ ಸಿ.ಟಿ. ರವಿ ಸೂಚನೆ ನೀಡಿದ್ದಾರೆ. ಕಸ ಎಸೆದ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಸವನ್ನು ಮನೆ ಬಳಿ ಬರುವ ಕಸದ ಗಾಡಿಗೆ ಹಾಕಬೇಕು ಎಂದು ಬೈಕ್ನಲ್ಲಿ ಬಂದು ಕಸ ಎಸೆದ ಯುವಕನಿಗೆ ಪಾಠ ಮಾಡಿದ್ದಾರೆ.