Asianet Suvarna News Asianet Suvarna News

ಈ ಸಲ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ; ಸಿಎಂ ಸಿದ್ದರಾಮಯ್ಯ ವಿಶ್ವಾಸ

ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ತಾರೆ. ಈ ಸಲ ಕಪ್ ನಮ್ಮದೇ ಎಂದ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾಡಿದ್ದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Cricket world cup 2023  Team India will win the World Cup says cm siddaramaiah at mysuru rav
Author
First Published Nov 17, 2023, 3:52 PM IST

ಮೈಸೂರು (ನ.17): ಭಾರತ ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ತಾರೆ. ಈ ಸಲ ಕಪ್ ನಮ್ಮದೇ ಎಂದ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ನಾಡಿದ್ದು ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ. ನಾನು ರಾತ್ರಿ 9.30 ಮೇಲೆ ಮನೆಗೆ ಹೋಗುವುದು. ಸಮಯ ಸಿಕ್ಕಾಗ ನಾನು ಮನೆಯಲ್ಲಿ ಕ್ರಿಕೆಟ್ ನೋಡುತ್ತೇನೆ. ನ.19 ರಂದು ನಡೆಯಲಿರುವ ಫೈನಲ್ ಪಂದ್ಯವನ್ನ ವೀಕ್ಷಣೆ ಮಾಡುತ್ತೇನೆ. ಭಾರತ ತಂಡದ ಎಲ್ಲಾ ಆಟಗಾರರು ಚೆನ್ನಾಗಿ ಆಟವಾಡ್ತಿದ್ದಾರೆ. ಇದೇ ರೀತಿ ಎಲ್ಲರೂ ಒಗ್ಗೂಡಿ ಹೋರಾಡಿದರೆ ಗೆಲ್ತಾರೆ.ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸ ಇದೆ. ಟೀಂ ಆಗಿ ಆಟವಾಡಿದರೆ ಗೆಲುವು ಸಾಧ್ಯ. ಎಲ್ಲರೂ ಒಗ್ಗೂಡಿ ಉತ್ತಮ ಪ್ರದರ್ಶನ ನೀಡಿದರೆ ಗೆಲುವು ನಿಶ್ಚಿತ ಎಂದರು.

ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ: ಸಿಎಂ ಸಿದ್ದರಾಮಯ್ಯ 

ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು:

ಕುಮಾರಸ್ವಾಮಿ ಯಾವತ್ತಾದರೂ ಸತ್ಯ ಹೇಳಿದ್ದಾರಾ? ಬರೀ ಸುಳ್ಳುವುದೇ ಕೆಲಸ. ಈಗ ನನ್ನ ಮಗ ಯತೀಂದ್ರನ ವಿರುದ್ಧ ಆರೋಪ ಮಾಡಿದ್ದಾರೆ. ಹೊಟ್ಟೆಕಿಚ್ಚು ಹತಾಶೆ, ಅಸೂಯೆಯಿಂದ ಆರೋಪ ಮಾಡಿದ್ದಾರೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಡಾ.ಯತೀಂದ್ರ ಸಿದ್ದರಾಮಯ್ಯರ ವಿರುದ್ಧದ ಹೇಳಿಕೆಗೆ ತಿರುಗೇಟು ನೀಡಿದರು. 

ಹಳೇ ಸರ್ಕಾರದ ಹಗರಣಗಳ ಬಗ್ಗೆ ತನಿಖೆ:

 ಅಗತ್ಯ ಬಿದ್ದರೆ ಕುಮಾರಸ್ವಾಮಿ ವಿರುದ್ಧವೂ ತನಿಖೆ ನಡೆಸಲು ಹಿಂದೆ ಬೀಳಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಬಿಟ್ ಕಾಯಿನ್, ಕೋವಿಡ್, ಮೆಡಿಕಲ್ ಕಾಲೇಜು ಮಂಜೂರಾತಿ, ಶೇ.40 ಕಮಿಷನ್ ಹಗರಣ.. ಈ ಸಂಬಂಧ ನಾಲ್ಕು ಸಮಿತಿಗಳನ್ನು ರಚಿಸಿ ತನಿಖೆಗೆ ವಹಿಸಿದ್ದೇವೆ. ಕಮಿಟಿಗಳು ಇನ್ನೂ ವರದಿ ಕೊಟ್ಟಿಲ್ಲ. ಕುಮಾರಸ್ವಾಮಿ ಸುಳ್ಳು ಸುಳ್ಳೇ ಆರೋಪ ಮಾಡುತ್ತಾರೆ. ಅದನ್ನೆಲ್ಲ ತನಿಖೆ ಮಾಡೋಕೆ ಆಗುತ್ತಾ? ಆರೋಪ ಮಾಡಿದವರು ಪುರಾವೆ, ದಾಖಲೆಗಳಿದ್ದರೆ ಕೊಡಬೇಕು.  ದಾಖಲೆ ಕೊಟ್ಟರೆ ತನಿಖೆ ಮಾಡುತ್ತೇವೆ. ಅದುಬಿಟ್ಟು ದ್ವೇಷ, ಅಸೂಯೆಯಿಂದ ಸುಳ್ಳು ಹೇಳಿಕೆ ನೀಡಿದರೆ ಏನು ಮಾಡಬೇಕು ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.  

ಸಾಲದ ಬಗ್ಗೆ ಮಾತಾಡಲು ಸಿದ್ದುಗೆ ಯಾವ ನೈತಿಕತೆ ಇದೆ?: ಎಚ್.ಡಿ.ಕುಮಾರಸ್ವಾಮಿ

Follow Us:
Download App:
  • android
  • ios