ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಿಗಿ ಭದ್ರತೆ ನಡುವೆ ಭಾರತ ಹಾಗೂ ನೆದರ್‌ಲ್ಯಾಂಡ್ ಪಂದ್ಯ; ಯಾರು ಗೆಲ್ತಾರೆ?
ನಾಳೆ ನಗರದ ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಭಾರತ ಹಾಗೂ ನೆದರ್‌ಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆ; ಕ್ರೀಡಾಂಗಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಬೆಂಗಳೂರು (ನ.11) : ನಾಳೆ ನಗರದ ಎಂ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಭಾರತ ಹಾಗೂ ನೆದರ್‌ಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿರುವ ಹಿನ್ನೆಲೆ; ಕ್ರೀಡಾಂಗಣದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್, ಕ್ಯಾಬ್ ಗಳಿಗೆ ಪಿಕ್ ಅಪ್ ಅಂಡ್ ಡ್ರಾಪ್ ಸ್ಥಳಗಳನ್ನ ಗುರುತಿಸಲಾಗಿದೆ. ನಾಳೆ ಕ್ರಿಕೆಟ್ ವೀಕ್ಷಣೆಗೆ ಬರುವ ಕ್ರೀಡಾಭಿಮಾನಿಗಳ ಹೆಚ್ಚಳದಿಂದ ಸಂಚಾರ ದಟ್ಟಣೆ ಉಂಟಾಗಲಿದೆ. ಸಾರ್ವಜನಿಕರು ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಪ್ರಯಾಣ ಸಾಧ್ಯವಾದಷ್ಡು ಕಡಿಮೆ ಮಾಡಿದ್ರೆ ಉತ್ತಮ. ಈಗಾಗಲೇ ಅಗತ್ಯ ಬಂದೋಬಸ್ತ್ ಕಲ್ಪಿಸಿ ಯಾವುದೇ ರೀತಿಯ ಸಂಚಾರ ದಟ್ಡಣೆ ಆಗದಂತೆ ಕ್ರಮವಹಿಸಲಾಗಿದೆ ಎಂದರು.
ಕ್ರಿಕೆಟ್ ವಿಶ್ವಕಪ್‌ಗೂ ದೀಪಾವಳಿ ಟಚ್, ಗೇಟ್‌ವೇ ಆಫ್ ಇಂಡಿಯಾದಲ್ಲಿ ಬೆಳಕಿನ ಚಿತ್ತಾರ!
ಕ್ರಿಕೆಟ್ ಪ್ರೇಮಿಗಳು ನಿಯಮ ಪಾಲಿಸಿ:ಕೇಂದ್ರ ವಿಭಾಗ ಡಿಸಿಪಿ ಮನವಿ:
ಬೆಂಗಳೂರಲ್ಲಿ ಒಟ್ಟು ಐದು ಪಂದ್ಯ ನಿಗದಿಯಾಗಿತ್ತು. ಈಗಾಗಲೇ ನಾಲ್ಕು ಪಂದ್ಯಗಳು ಮುಗಿದಿದೆ, ಐದನೇ ಮತ್ತು ಕೊನೆಯ ಪಂದ್ಯ ಭಾರತ-ನೆದರ್ಲ್ಯಾಂಡ್ ನಡುವೆ ನಾಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ-ಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 9 ಜನ ಎಸಿಪಿ, 28 ಇನ್ಸ್ ಪೆಕ್ಟರ್, 86 ಜನ ಪಿಎಸ್ಐ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 4 ಕೆಎಸ್ ಆರ್ ಪಿ ತುಕಡಿ, 2 ಡಿ ಸ್ವಾಟ್ ಆ್ಯಂಬುಲೆನ್ಸ್ ವ್ಯವಸ್ಥ ಮಾಡಲಾಗಿದೆ. ವಿಧ್ವಂಸಕ ಕೃತ್ಯ ತಡೆಗಟ್ಟಲು 7 ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕ್ರಿಕೆಟ್ ಪ್ರೇಮಿಗಳು ಟಿಕೆಟ್ ಹಿಂದೆ ನಮೂದಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಏಕದಿನ ಪಂದ್ಯಗಳಲ್ಲಿ ವಿಶ್ವದ ನಂ.1 ಬ್ಯಾಟರ್ ಎನಿಸಿಕೊಂಡ ಶುಭ್‌ಮನ್ ಗಿಲ್: ಬೌಲಿಂಗ್‌ನಲ್ಲೂ ಸಿರಾಜ್‌ಗೆ ಅಗ್ರಸ್ಥಾನ