ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಬೆಂಗಳೂರು (ಜು.19): ನಗರದ ಹೊರವಲಯದ ರಸ್ತೆಗಳು ಸೇರಿದಂತೆ ರಾಜ್ಯದ ವಿವಿಧ ಘಟಕಗಳಲ್ಲಿ ಕೆಲ ವಾಹನ ಸವಾರರಿಂದ ಅಪಾಯಕಾರಿ ವ್ಹೀಲಿಂಗ್‌ ಸಾಹಸಗಳು ಹೆಚ್ಚಾಗಿವೆ. ಹೀಗಾಗಿ ಈ ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಸಂಬಂಧಪಟ್ಟ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಘಟಕಗಳಲ್ಲಿ ಅದರಲ್ಲೂ ಬೆಂಗಳೂರು ನಗರದ ಹೊರವಲಯದ ರಿಂಗ್‌ ರಸ್ತೆ, ನೈಸ್‌ ರಸ್ತೆ, ಏರ್‌ಪೋರ್ಚ್‌ ರಸ್ತೆ, ಹೊಸಕೋಟೆ ರಸ್ತೆ, ಬೆಂಗಳೂರು- ಬೆಳಗಾವಿ ಹೆದ್ದಾರಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ, ಮೈಸೂರು ರಿಂಗ್‌ ರಸ್ತೆಗಳಲ್ಲಿ ಕೆಲವು ವಾಹನ ಸವಾರರು ಅಪಾಯಕಾರಿ ರೀತಿ ವಾಹನಗಳನ್ನು ವ್ಹೀಲಿಂಗ್‌, ಸ್ಟಂಟ್‌ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಸಂಬಂಧ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು, ನಿಷ್ಪಕ್ಷಪಾತವಾಗಿ ಪ್ರಕರಣ ದಾಖಲಿಸಬೇಕು. ಸವಾರರ ಚಾಲನಾ ಪರವಾನಗಿ ಅಮಾನತು, ಪದೇ ಪದೇ ತಪ್ಪು ಮಾಡಿದರೆ ಆ ಸವಾರನ ಚಾಲನಾ ಪರವಾನಗಿ ರದ್ದುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

35ರ ಆಂಟಿಯ ಸುಳ್ಳು ಪ್ರೀತಿಗೆ ಬಿದ್ದು ಲಕ್ಷ ಲಕ್ಷ ಹಣ ಕಳೆದುಕೊಂಡ ಯುವಕ ಆತ್ಮಹತ್ಯೆ

ರಸ್ತೆಗಳಲ್ಲಿ ವ್ಹೀಲಿಂಗ್‌ ಹಾಗೂ ಸಾಹಸ ಮಾಡುವ ಸವಾರರ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾಗುತ್ತಿದೆ. ಈ ಬಗ್ಗೆ ಎಲ್ಲಾ ಘಟಕಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅದರಲ್ಲೂ ಬೆಂಗಳೂರು ನಗರದಲ್ಲಿ ವ್ಹೀಲಿಂಗ್‌ ಮಾಡುವ ವಾಹನ ಸವಾರರ ವಿರುದ್ಧ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರು ಕಠಿಣ ಕ್ರಮ ತೆಗೆದುಕೊಂಡು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಅಲೋಕ್‌ ಕುಮಾರ್‌ ಸೂಚಿಸಿದ್ದಾರೆ.

ಬೆಂ-ಮೈ ಹೈವೇಯಲ್ಲಿ ಅತಿವೇಗಕ್ಕೆ 1000 ರು. ದಂಡ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಓವರ್‌ ಸ್ಪೀಡ್‌ಗೆ ಬ್ರೇಕ್‌ ಹಾಕಲಾಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗಮಿತಿಯನ್ನು ಗಂಟೆಗೆ 100 ಕಿ.ಮೀ.ಗೆ ನಿಗದಿ ಪಡಿಸಲಾಗಿದೆ. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ವಾಹನಗಳ ಅತಿ ವೇಗವೇ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಸ್ಪೀಡ್‌ ಬ್ರೇಕ್‌ಗೆ ಸ್ಪೀಡ್‌ ಡಿಟೆಕ್ಷನ್‌ ಗನ್‌ ಅಳವಡಿಸಲಾಗಿದೆ. ವೇಗಮಿತಿ ಮೀರಿದರೆ ಇದು ವಾಹನ ಮತ್ತು ಸಂಖ್ಯೆ ಸಹಿತ ಫೋಟೋ ಕ್ಲಿಕ್ಕಿಸಿ ರವಾನಿಸುತ್ತದೆ. ಅದಕ್ಕೆ ಪೂರಕವಾಗಿ ದಂಡ ಹಾಕಿ ವಾಹನ ಮಾಲೀಕರ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತಿದೆ. ಹೆದ್ದಾರಿಯಲ್ಲಿ ಬುಧವಾರ ಒಂದೇ ದಿನ 44 ಓವರ್‌ಸ್ಪೀಡ್‌ ಪ್ರಕರಣಗಳು ದಾಖಲಾಗಿವೆ.

ಪ್ರೀತಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಈ ಸಂಬಂಧ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಟ್ವೀಟ್‌ ಮಾಡಿದ್ದು, 122 ಕಿ.ಮೀ.ವರೆಗೆ ವಾಹನ ಚಲಾಯಿಸಿದ 44 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಮನಗರ ಎಸ್ಪಿ ಕಾರ್ತಿಕ್‌ ರೆಡ್ಡಿ ಮಾತನಾಡಿ, ಮುಖ್ಯವಾಗಿ ನಾಲ್ಕು ನಿಯಮಗಳ ಮೇಲೆ ನಿಗಾ ಇಡುತ್ತಿದ್ದೇವೆ. ಅತಿ ವೇಗ, ಲೈನ್‌ ಟ್ರ್ಯಾಕ್‌, ಸೀಟ್‌ ಬೆಲ್ಟ್‌ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ. ರೂಲ್ಸ್‌ ಬ್ರೇಕ್‌ ಮಾಡಿದರೆ ಒಂದು ಸಾವಿರ ರು.ದಂಡ. ಅಷ್ಟೇ ಅಲ್ಲ ಚಾಲನಾ ಪರವಾನಗಿ ಸಹ ರದ್ದು ಮಾಡಬಹುದು. ಎಎನ್‌ಪಿಆರ್‌ ಕ್ಯಾಮರ್‌ ಹಾಕಲಾಗುತ್ತಿದ್ದು, ಒಟ್ಟು 28 ಸ್ಥಳಗಳಲ್ಲಿ ಕ್ಯಾಮರಾಗಳು ನಿಗಾ ವಹಿಸುತ್ತವೆ. ರೂಲ್ಸ್‌ ಬ್ರೇಕ್‌ ಮಾಡಿದ ತಕ್ಷಣ ಮೊಬೈಲ್‌ಗೆ ಸಂದೇಶ ಹೋಗುತ್ತೆ. ದಯವಿಟ್ಟು ಯಾರೂ ಅತಿ ವೇಗದಲ್ಲಿ ವಾಹನ ಚಲಾಯಿಸಬೇಡಿ ಎಂದು ಮನವಿ ಮಾಡಿದರು.