Asianet Suvarna News Asianet Suvarna News

Mekedatu Politics: ಪಾದಯಾತ್ರೆಗೆ ಬಂದಿದ್ದ 85 ಪೊಲೀಸರಿಗೆ ಕೋವಿಡ್‌ ಸೋಂಕು ಬೋಗಸ್‌: ಡಿ.ಕೆ.ಶಿವಕುಮಾರ್‌

ಮೇಕೆದಾಟು ಪಾದಯಾತ್ರೆಗೆ ನಿಯೋಜಿಸಲಾಗಿದ್ದ ಪೊಲೀಸರ ಪೈಕಿ 85 ಮಂದಿಗೆ ಕೋವಿಡ್‌ ಸೋಂಕು ತಗುಲಿದೆ ಎಂಬುದು ಬೋಗಸ್‌. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.
 

Covid19 infection bogus for 85 policemen on Mekedatu Padayatre gvd
Author
Bangalore, First Published Jan 22, 2022, 1:15 AM IST

ಬೆಂಗಳೂರು (ಜ.22): ಮೇಕೆದಾಟು ಪಾದಯಾತ್ರೆಗೆ (Mekedatu Padayatre) ನಿಯೋಜಿಸಲಾಗಿದ್ದ ಪೊಲೀಸರ (Police) ಪೈಕಿ 85 ಮಂದಿಗೆ ಕೋವಿಡ್‌ ಸೋಂಕು (Covid19) ತಗುಲಿದೆ ಎಂಬುದು ಬೋಗಸ್‌. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾದಯಾತ್ರೆಗೆ ನಿಯೋಜಿಸಿದ್ದ 85 ಪೊಲೀಸರಿಗೆ ಸೋಂಕು ತಗುಲಿದೆ ಎಂಬುದು ಬೋಗಸ್‌. ಬೇಕಿದ್ದರೆ ಪಾದಯಾತ್ರೆಯ ವಿಡಿಯೋಗಳನ್ನು ತೆಗೆದುಕೊಂಡು ನೋಡಿ. ಯಾವುದೇ ಪೊಲೀಸ್‌ ಅಧಿಕಾರಿಗಳು ನಮ್ಮ ಪಾದಯಾತ್ರೆ ಸಮಯದಲ್ಲಿ ಕರ್ತವ್ಯದಲ್ಲಿ ಇರಲಿಲ್ಲ. ಯಾರೊಬ್ಬರೂ ನಮ್ಮ ಬೆಂಬಲಕ್ಕೆ, ಸಹಾಯಕ್ಕೆ ಬರಲಿಲ್ಲ. 

ಟ್ರಾಫಿಕ್‌ ನಿಯಂತ್ರಣಕ್ಕೂ ನೆರವಾಗಲಿಲ್ಲ. ನನ್ನ ಮೇಲೆ ಕಾರ್ಯಕರ್ತರು ಬೀಳುವಾಗಲೂ ಯಾರೂ ತಡೆಯಲಿಲ್ಲ. ಯಾವುದೇ ಪೊಲೀಸರು ತಮ್ಮ ಕರ್ತವ್ಯವನ್ನು ಅಲ್ಲಿ ನಿಭಾಯಿಸಿಲ್ಲ. ಸರ್ಕಾರ ಕೋವಿಡ್‌ ನಿಬಂರ್‍ಧ ಹೇರಿದಾಗ ಕೋವಿಡ್‌ ಸೋಂಕಿನ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ? ಇದೆಲ್ಲವೂ ಪಾದಯಾತ್ರೆ ನಿಲ್ಲಿಸಲು ಸೃಷ್ಟಿಸಿರುವ ಅಂಕಿ-ಅಂಶಗಳು ಅಷ್ಟೆಎಂದರು.

ಯಥಾವತ್ತಾಗಿ ಉಳಿಸಿ: ದೆಹಲಿಯಲ್ಲಿ ಅಮರ್‌ ಜವಾನ್‌ ಜ್ಯೋತಿ ಹಾಗೂ ರಾಷ್ಟ್ರೀಯ ವಾರ್‌ ಮೆಮೋರಿಯಲ್‌ ಜ್ಯೋತಿಗಳನ್ನು ವಿಲೀನ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಲ್ಲೂ ಈ ರೀತಿ ತಾರತಮ್ಯ ಮಾಡುತ್ತಿದೆಯೋ ಗೊತ್ತಿಲ್ಲ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಗೌರವಿಸಬೇಕು. ಅದನ್ನು ಬಿಟ್ಟು ವಿಲೀನ ಮಾಡುವುದು. ಸ್ಥಳಾಂತರ ಮಾಡುವುದು ನೈತಿಕ ಮೌಲ್ಯಗಳಲ್ಲ. ಕಾಂಗ್ರೆಸ್‌ ಇದನ್ನು ಖಂಡಿಸುತ್ತದೆ. ಎರಡೂ ಸ್ಥಳಗಳನ್ನು ಯಥಾವತ್ತಾಗಿ ಉಳಿಸಬೇಕು ಎಂದು ಆಗ್ರಹಿಸಿದರು.

Weekend Curfew ಬದುಕಿದವರ ಸಾಯಿಸುವಂಥ ಕ್ರಮ: ಡಿ.ಕೆ.ಶಿವಕುಮಾರ್‌

ಮೇಧಾ ಪಾಟ್ಕರ್‌, ಎಚ್‌ಡಿಕೆಗೆ ಡಿಕೆಶಿ ಟಾಂಗ್‌: ಮೇಕೆದಾಟು ಯೋಜನೆಯನ್ನು (Mekedatu Project) ವಿರೋಧಿಸಿರುವ ಪರಿಸರವಾದಿ ಮೇಧಾ ಪಾಟ್ಕರ್‌ (Medha Patkar) ಹಾಗೂ ಪಾದಯಾತ್ರೆಯನ್ನು ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಟಾಂಗ್‌ ನೀಡಿದ್ದಾರೆ. ಪರಿಸರವಾದಿ ಮೇಧಾ ಪಾಟ್ಕರ್‌ ಅವರು ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. 

ಅವರಿಗೆ ಉತ್ತರಿಸಲು ಸರ್ಕಾರ, ಮುಖ್ಯಮಂತ್ರಿ ಅವರಿದ್ದಾರೆ. ಅವರಿಗೆ ಉತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ. ಇನ್ನು, ಪಾದಯಾತ್ರೆಗೆ ಬಾವುಟ ಕಟ್ಟಲು ತಮಿಳುನಾಡಿನಿಂದ ಜನರನ್ನು ಕರೆತಂದಿದ್ದರು ಎಂಬ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರಿಗೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್‌, ತಮಿಳರು ನಮ್ಮ ಸಹೋದರರು. ಅವರು ಭಾರತೀಯರಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮೇಕೆದಾಟು ಡ್ಯಾಮ್‌ಗೆ ಮೇಧಾ ಪಾಟ್ಕರ್‌ ವಿರೋಧ: ರಾಜ್ಯದಲ್ಲಿ ಬಹುಚರ್ಚಿತ ವಿಷಯವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಪರಿಸರವಾದಿ, ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ವಿರೋಧ ವ್ಯಕ್ತಪಡಿಸಿದ್ದು, 1,200 ಹೆಕ್ಟೇರ್‌ ಅರಣ್ಯ ಹಾಗೂ ಜೀವ ಸಂಕುಲದ ನಾಶಕ್ಕೆ ಕಾರಣವಾಗುವ ಯೋಜನೆಗೆ ಜನರೂ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದ್ದರು.

Notice to DK Shivakumar: ಡಿಕೆಶಿ ಮನೆ ಮುಂದೆ ತಡರಾತ್ರಿ ಹೈಡ್ರಾಮಾ..!

ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿಯು ಜ.13ರಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ವಿಷಯ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರ ಮಾತನಾಡಿದರು.ನಾನು ಮೇಕೆದಾಟು ಪರವಾಗಿದ್ದೇನೆ. ಹೀಗಾಗಿ ಅಣೆಕಟ್ಟು ನಿರ್ಮಾಣಕ್ಕೆ ವಿರೋಧಿಸುತ್ತಿದ್ದೇನೆ. ಅಣೆಕಟ್ಟು ಕಟ್ಟುವ ಬದಲು ಕೆರೆ ಕುಂಟೆಗಳನ್ನು ಕಟ್ಟಿಜೀವ ಜಲ ರಕ್ಷಿಸಬೇಕು. ಈ ಹೋರಾಟದಲ್ಲಿ ದಲಿತ, ಬುಡಕಟ್ಟು , ಆದಿವಾಸಿ ಜನರೆಲ್ಲಾ ಒಂದಾಗಿ ಸೇರಿ ಯೋಜನೆ ವಿರೋಧಿಸಬೇಕಿದೆ ಎಂದು ಕರೆ ನೀಡಿದ್ದರು.

Follow Us:
Download App:
  • android
  • ios