ತಮಿಳುನಾಡು ಪಾಸ್‌ ಪಡೆದು ಕರ್ನಾಟಕಕ್ಕೆ ಬಂದ್ರೆ ವಾಹನ ಸೀಜ್

  • ನೀವು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರ್ತಾ ಇದ್ದೀರಾ? ಎಚ್ಚರ
  • ಕೊರೋನಾ ಕಾಲದಲ್ಲಿ ಜನರ ತುರ್ತು ಸಂಚಾರಕ್ಕೆ ತಮಿಳುನಾಡಲ್ಲಿ ಪಾಸ್ ವ್ಯವಸ್ಥೆ
  •  ತಮಿಳುನಾಡು ಪಾಸ್ ಪಡೆದು ಬರುವವರಿಗೆ ಕರ್ನಾಟಕದಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ
Covid pandemic Tamil Nadu pass Not Allowed in Karnataka snr

ಆನೇಕಲ್ (ಮೇ.23):  ನೀವು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರ್ತಾ ಇದ್ದೀರಾ? ಅಲ್ಲಿಂದ ಇಲ್ಲಿ ಬರಲು ಪಾಸ್ ಪಡೆದಿದ್ದರೆ ಎಚ್ಚರ. ತಮಿಳುನಾಡಿನ  ಪಾಸ್ ಇಲ್ಲಿ ನಡೆಯಲ್ಲ.  

ಕೊರೋನಾ ಕಾಲದಲ್ಲಿ ಜನರ ತುರ್ತು ಸಂಚಾರಕ್ಕೆ ತಮಿಳುನಾಡು ಸರ್ಕಾರ ಪಾಸ್ ಕೊಡುತ್ತಿದೆ. ಆದರೆ ಅಂತಹ ಪಾಸ್ ಪಡೆದು ಕರ್ನಾಟಕಕ್ಕೆ ಬಂದರೆ ಇಲ್ಲಿ ಅವಕಾಶವಿರುವುದಿಲ್ಲ. ಇಲ್ಲಿ ಪೊಲೀಸ್ ಇಲಾಖೆ ತಮಿಳುನಾಡು ಪಾಸ್ ಪಡೆದು ಬರುವವರಿಗೆ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ.  

 ಕೊರೊನಾದಿಂದ ಮುಕ್ತಿಗಾಗಿ ದೇವಸ್ಥಾನ ನಿರ್ಮಾಣ, 48 ದಿನ ವಿಶೇಷ ಪೂಜೆ
ಸೂಕ್ತ ದಾಖಲೆಯಿಲ್ಲದೇ ಬಂದ ಎಲ್ಲಾ ವಾಹನಗಳನ್ನು ಎಲೆಕ್ಟ್ರಾನಿಕ್ ಸಿಟಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ.  ಇಲ್ಲಿ ಸದ್ಯ 25 ಹೆಚ್ಚು ಪೊಲೀಸ್ ಸಿಬ್ಬಂದಿ  ವಾಹನಗಳ ತಪಾಸಣೆ ಮಾಡುತ್ತಿದ್ದಾರೆ.  ತಮಿಳುನಾಡಿನಿಂದ ಬಂದ ಹಲವು ವಾಹನಗಳನ್ನು ಕರ್ನಾಟಕದಲ್ಲಿ ಸೀಜ್ ಮಾಡಲಾಗಿದೆ. 

 ತುರ್ತಾಗಿ ಪಾಸ್ ಪಡೆದು ಬಂದರೂ ಕರ್ನಾಟಕದಲ್ಲಿ ಅವಕಾಶವಿರುವುದಿಲ್ಲ. ಈ ನಿಟ್ಟಿನಲ್ಲಿ ನಾಗರಿಕರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

 ರಾಜ್ಯದಲ್ಲಿ ಸದ್ಯ ಮಹಾಮಾರಿ ಅಟ್ಟಹಾಸ ಜೋರಾಗಿಯೇ ಇದ್ದು ಈ ನಿಟ್ಟಿನಲ್ಲಿ ಇಲ್ಲಿ ಯಾವುದೇ ಪಾಸ್ ವ್ಯವಸ್ಥೆಯನ್ನು ಮಾಡಿಲ್ಲ.  ಸರ್ಕಾರ ಯಾವುದೇ ಪಾಸ್ ವ್ಯವಸ್ಥೆ  ಬಗ್ಗೆ ಈ ಬಾರಿ ಸೂಚನೆ ನೀಡಿಲ್ಲ.  ಜನ ಸಂಚಾರ ನಿಯಂತ್ರಣದ ಉದ್ದೇಶದಿಂದ ಅಲ್ಲದೇ ಪಾಸ್‌ಗಳನ್ನು ಬಳಸಿಕೊಂಡು ಜನರು ಅನಗತ್ಯ ಸಂಚಾರ ಮಾಡುಬಹುದಾದ ನಿಟ್ಟಿನಲ್ಲಿ ಈ ಬಾರಿ ಪಾಸ ವ್ಯವಸ್ಥೆ ಕೈ ಬಿಡಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios