Asianet Suvarna News Asianet Suvarna News

Covid 19 Spike: ಕೋವಿಡ್ 4ನೇ ಅಲೆ ಭೀತಿ ಎದುರಿಸಲು ರಾಜ್ಯ ಸರ್ಕಾರದಿಂದ ಸಿದ್ದತೆ!

ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸಿದ ಕೋವಿಡ್ ಎಂಬ ದುಸ್ವಃಪ್ನ ಇನ್ನೇನು ಮರೆಯಾಗುತ್ತಿದೆ ಎಂಬಷ್ಟರಲ್ಲೇ ಮತ್ತೆ ನಾಲ್ಕನೆಯ ಅಲೆ ರೂಪದಲ್ಲಿ ಎದುರಾಗಿ ಮತ್ತೆ ಆತಂಕ ಮೂಡಿಸಿದೆ. 

Covid 19 New Covid Guidelines Will Impose In State After PM Narendra Modi Meeting With CM gvd
Author
Bangalore, First Published Apr 27, 2022, 9:51 PM IST

ಬೆಂಗಳೂರು (ಏ.27): ಇಡೀ ಮನುಕುಲವನ್ನೇ ಬೆಚ್ಚಿ ಬೀಳಿಸಿದ ಕೋವಿಡ್ (Covid19) ಎಂಬ ದುಸ್ವಃಪ್ನ ಇನ್ನೇನು ಮರೆಯಾಗುತ್ತಿದೆ ಎಂಬಷ್ಟರಲ್ಲೇ ಮತ್ತೆ ನಾಲ್ಕನೆಯ ಅಲೆ ರೂಪದಲ್ಲಿ ಎದುರಾಗಿ ಮತ್ತೆ ಆತಂಕ ಮೂಡಿಸಿದೆ. ನಿಧಾನವಾಗಿ ಕಡಿಮೆಯಾಗುತ್ತಿದ್ದ ಕೋವಿಡ್ ಕೇಸ್‌ಗಳ (Covid Cases) ಸಂಖ್ಯೆಯಲ್ಲಿ ಕಳೆದೊಂದು ವಾರದಿಂದ ಏರು ಗತಿಯಲ್ಲಿ ಸಾಗುತ್ತಿದೆ. ಮೊದಲನೆಯ ಮತ್ತು ಎರಡನೆಯ ಅಲೆ ಸಂಧರ್ಭದಲ್ಲಿ ಆದಂತಹಾ ಅನಾಹುತಗಳು ಮತ್ತೆ ಮರುಕಳಿಸಬಾರದೆಂಬ ಮುನ್ನೆಚ್ಚರಿಕಯಲ್ಲಿ ಸರ್ಕಾರ (Karnataka Govt) ಕೂಡ ಈಗಿನಿಂದಲೇ ಕೋವಿಡ್ ಎದುರಿಸಲು ಸಿದ್ದತೆಗಳನ್ನು ಮಾಡಿಕೊಳ್ಳತೊಡಗಿದೆ. 

ಕಳೆದ ಎರಡು ದಿನಗಳ ಹಿಂದೆ ತಜ್ಞರ ಜೊತೆ ಸಭೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ (Dr Sudhakar) ಒಂದಷ್ಟು ಹೊಸ ಮಾರ್ಗಸೂಚಿಗಳನ್ನೂ ಹಾಗೂ ಎಚ್ಚರಿಕೆಗಳನ್ನು ರಾಜ್ಯದ ಜನರಿಗೆ ಕೊಟ್ಟಿದ್ದಾರೆ. ಕೋವಿಡ್ ಅನ್ನು ಮರೆತೇ ಹೋದಂತೆ ಉದಾಸೀನ ಮಾಡ್ತಿದ್ದ ಜನರಿಗೆ ಮತ್ತೆ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚನೆಗಳನ್ನು ಕೊಟ್ಟಿದ್ದಾರೆ. ಮಾಸ್ಕ್ (Mask) ಧರಿಸುವುದನ್ನು ಕಡ್ಡಾಯಗೊಳಿಸಿ, ಒಂದು ವೇಳೆ ಮಾಸ್ಕ್ ಮರೆತರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ಕೊಡಲಾಗಿದೆ.

ಮೋದಿ ಸಭೆ ವೇಳೆ ಮೈಮುರಿದ ಕೇಜ್ರಿವಾಲ್, ಮ್ಯಾನರ್ಸ್ ಇಲ್ಲ ಎಂದ ಬಿಜೆಪಿ!

ಪ್ರಧಾನಿ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್: ಮೋದಿ ಹೇಳಿದ್ದೇನು?: ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ವಿವಿಧ ರಾಜ್ಯಗಳ ಮುಖ್ಯಮಂತ್ರಿ ಗಳ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ವಿಡಿಯೋ ಸಂವಾದ ನಡೆಸಿದರು. ಆಯಾ ರಾಜ್ಯಗಳಲ್ಲಿ ಸೋಂಕು ನಿಯಂತ್ರಣಕ್ಕಾಗಿ ತೆಗೆದುಕೊಂಡ ಕ್ರಮಗಳು, ಆಸ್ಪತ್ರೆಗಳ ಸಿದ್ದತೆ, ಸದ್ಯ ಆಯಾ ರಾಜ್ಯಗಳಲ್ಲಿ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜೊತೆಗೆ ಯಾವುದೇ ಕಾರಣಕ್ಕೂ ನಾಲ್ಕನೆ ಅಲೆಯ ಬಗ್ಗೆ ಉದಾಸೀನ ಮಾಡದೇ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಗಳನ್ನು ನೀಡಿದರು. 

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡಾ ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಈಗಾಗಲೇ ಪ್ರಧಾನ ಮಂತ್ರಿ ನೇತೃತ್ವದಲ್ಲಿ ನಾವು ಕೋವಿಡ್ ನ ಮೂರೂ ಅಲೆಗಳ ಸಂದರ್ಭದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನಾಲ್ಕನೇಯ ಅಲೆಯನ್ನು ಸಮರ್ಥವಾಗಿ ಎದುರಿಸಲು ಸೂಕ್ತ ಸಿದ್ದತೆ ಮಾಡಿಕೊಳ್ಳಿ ಎಂಬ ಸಲಹೆಯನ್ನು ಅಮಿತ್ ಶಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೀಡಿದರು. ಕರ್ನಾಟಕದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಒಂದು ವೇಳೆ ನಾಲ್ಕನೆಯ ಅಲೆ ಎದುರಾದರೆ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂಬ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಧಾನಿಗಳಿಗೆ ಮಾಹಿತಿ ನೀಡಿದರು.

ಇಂದಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ 3Tಸೂತ್ರವನ್ನು ಪಾಲಿಸುವಂತೆ ಎಲ್ಲಾ ರಾಜ್ಯಗಳ ಸಿಎಂಗಳಿಗೆ ಮೋದಿ ಸಲಹೆ ನೀಡಿದ್ದಾರೆ, ಅಂದರೆ ಟೆಸ್ಟಿಂಗ್, ಟ್ರೇಸಿಂಗ್, ಮತ್ತು ಟ್ರೀಟ್‌ಮೆಂಟ್. ಟೆಸ್ಟ್ ಸಂಖ್ಯೆ ಹೆಚ್ಚು ಮಾಡುವುದು, ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ಪಡೆಯುವಂತೆ ಜಾಗೃತಿ ಮೂಡಿಸುವುದು, ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಲಹೆ ನೀಡಲಾಯಿತು. ಸೋಂಕು ಹೆಚ್ಚಿರುವ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ, ಹಾಗೂ ಲಸಿಕಾ ಡ್ರೈವ್ ಹೆಚ್ಚಿಸುವ ಬಗ್ಗೆ ಕೂಡಾ ಮೋದಿ ಸಲಹೆ ನೀಡಿದ್ದಾರೆ.

ಪ್ರಮುಖವಾಗಿ ಮೇ 16 ರಿಂದ ಶಾಲೆಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ನಿಗಾ ಇಡುವಂತೆ ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಆರು ವರ್ಷದ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ.  ಅನವಶ್ಯಕ ಭಯ ಬಿಟ್ಟು ಜಾಗೃತೆಯಿಂದ ಕೋವಿಡ್ ಎದುರಿಸುವ ಬಗ್ಗೆ ಪ್ರಮುಖವಾಗಿ ಇಂದಿನ ಸಭೆಯಲ್ಲಿ ಚರ್ಚೆ ಆಗಿದೆ. ಇನ್ನು ರಾಜ್ಯದ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಎಲ್ಲಾ ಜಿಲ್ಲಾ, ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸನ್ನದ್ದವಾಗಿ ಇಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.

ಸೋಂಕು ತಗುಲಿ ವರ್ಷ ಕಳೆದರೂ ನಾಲ್ಕರಲ್ಲಿ ಒಬ್ಬ ಕೋವಿಡ್ ರೋಗಿ ಮಾತ್ರ ಸಂಪೂರ್ಣ ಚೇತರಿಕೆ: ಯುಕೆ ಅಧ್ಯಯನ

ಬೂಸ್ಟರ್ ಡೋಸ್ ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಮಧುಮೇಹ, ರಕ್ತದೊತ್ತಡ ಇರುವವನ್ನು ಪರೀಕ್ಷೆಗೆ ಒಳಪಡಿಸಿ ಅದನ್ನೆಲ್ಲಾ ದಾಖಲು ಮಾಡಲಾಗಿತ್ತಿದೆ. ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದ್ದ ಕೋವಿಡ್ ವಾರಿಯರ್ಸ್ ಅವಧಿಯನ್ನು ಇನ್ನೂ ಆರು ತಿಂಗಳವರೆಗೂ ವಿಸ್ತರಿಸಲು ಆರ್ಥಿಕ ಇಲಾಖೆಗೆ ಆರೋಗ್ಯ ಸಚಿವ ಡಾ ಸುಧಾಕರ್ ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ನಾಲ್ಕನೆ ಅಲೆ ಅಷ್ಟೇನೂ ಆತಂಕಕಾರಿ ಅಲ್ಲದೇ ಇದ್ದರೂ ಯಾವುದೇ ಅನಾಹುತಕ್ಕೆ ಎಡೆ ಮಾಡಿಕೊಡದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

Follow Us:
Download App:
  • android
  • ios