Asianet Suvarna News Asianet Suvarna News

ಮೋದಿ ಸಭೆ ವೇಳೆ ಮೈಮುರಿದ ಕೇಜ್ರಿವಾಲ್, ಮ್ಯಾನರ್ಸ್ ಇಲ್ಲ ಎಂದ ಬಿಜೆಪಿ!

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಸಭೆಯ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿಕೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾನಗೆಟ್ಟ ಸಿಎಂ ಎಂದು ಬಿಜೆಪಿ ಹೇಳಿದೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದ ವೇಳೆ ಅರವಿಂದ್ ಕೇಜ್ರಿವಾಲ್ ಮೈಮುರಿಯುತ್ತಿರುವುದನ್ನು ಕಾಣಬಹುದಾಗಿದೆ.
 

BJP angry on Delhi CM Arvind Kejriwal says he is Mannerless after he stretches during PM Modi meet san
Author
Bengaluru, First Published Apr 27, 2022, 7:02 PM IST

ನವದೆಹಲಿ (ಏ.27): ಭಾರತೀಯ ಜನತಾ ಪಕ್ಷವು (BJP) ಬುಧವಾರ ಮಧ್ಯಾಹ್ನ ಮಾಡಿರುವ ಟ್ವೀಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ (Delhi Chief Minister) ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಮಾನಗೆಟ್ಟವರು ಎಂದು ಟೀಕಿಸಿದೆ.

ಬುಧವಾರ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Prime Minister Naredra Modi) ಅವರ ಕೋವಿಡ್ ಪರಿಶೀಲನಾ ಸಭೆಯ ವೀಡಿಯೊ ತುಣುಕನ್ನು ಬಿಜೆಪಿ ಪಕ್ಷವು ಪೋಸ್ಟ್ ಮಾಡಿದೆ. ವಿಡಿಯೋದಲ್ಲಿ ಆಮ್ ಆದ್ಮಿ ಪಕ್ಷದ (Aam Admi Party) ನಾಯಕ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಭಾಷಣದ ವೇಳೆ ತಮ್ಮ ತೋಳುಗಳನ್ನು ಬಳಸಿ ಮೈಮುರಿಯುತ್ತಿರಿಯುವುದನ್ನು ಕಾಣಬಹುದಾಗಿದೆ. 

ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಕೂಡ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಡವಳಿಕೆಯನ್ನು ಎತ್ತಿ ತೋರಿಸುತ್ತದೆ. 19 ಸೆಕೆಂಡುಗಳ ಕ್ಲಿಪ್‌ನಲ್ಲಿ, ರಾಷ್ಟ್ರದ ಹಿತದೃಷ್ಟಿಯಿಂದ ಇಂಧನದ ಮೇಲಿನ ವ್ಯಾಟ್ ಅನ್ನು ಕಡಿಮೆ ಮಾಡಲು ಪ್ರಧಾನಿ ಮೋದಿ ರಾಜ್ಯಗಳಿಗೆ ವಿನಂತಿಸುವುದನ್ನು ಕೇಳಬಹುದು.


ದೆಹಲಿ ಬಿಜೆಪಿಯು ಕೇಜ್ರಿವಾಲ್ ಅವರನ್ನು 'ಮಾರ್ನರ್ಲೆಸ್ ಸಿಎಂ ಆಫ್ ದಿಲ್ಲಿ' ಎಂದು ಕರೆದಿದೆ. ವೀಡಿಯೋದಲ್ಲಿ, ಕೇಜ್ರಿವಾಲ್‌ಗೆ ಸಭೆಯ ವಿಷಯದ ಯಾವುದೇ ಆಸಕ್ತಿ ಇದ್ದಂತೆ ಕಂಡಿರಲಿಲ್ಲ.ಅವರಿಗೆ ವಿಚಾರ ಬೋರ್ ಹೊಡೆಸುತ್ತಿದ್ದ ಕಾರಣಕ್ಕೆ ಗಂಭೀರವಾಗಿ ಬಿಜೆಪಿಯೇತರ ಪಕ್ಷಗಳು ಆಳುವ ರಾಜ್ಯಗಳಲ್ಲಿ ಹೆಚ್ಚಿನ ಇಂಧನ ಬೆಲೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುತ್ತಿದ್ದಂತೆ ಕೇಜ್ರಿವಾಲ್ ಅವರು ತಮ್ಮ ತೋಳುಗಳನ್ನು ಚಾಚುವುದನ್ನು ಕಾಣಬಹುದಾಗಿದೆ. ಬಿಜೆಪಿ ಐಟಿ ಸೆಲ್ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ (Amit Malaviya) ಅವರು ಕೂಡ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, "ತಮ್ಮ ಕೆಟ್ಟ ವರ್ತನೆಯಿಂದ ಅರವಿಂದ್ ಕೇಜ್ರಿವಾಲ್ ಸ್ವತಃ ತಾವೇ ಕೆಳಮಟ್ಟಕ್ಕೆ ಇಳಿಯುತ್ತಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.

ತುಂಬಾ ಗಂಭೀರವಾದ ಸಭೆಗಳಲ್ಲಿ ಮುಖ್ಯಮಂತ್ರಿಯ ವರ್ತನೆಗಳು ಹೇಗಿರಬೇಕು ಎನ್ನುವುದರ ಬಗ್ಗೆ ಮಾತನಾಡಿದ ಬಿಜೆಪಿ ವಕ್ತಾರ ಶೇಹಜಾದ್ ಪೊನಾವಾಲಾ, ಬಹುಶಃ ನನಗೆ ಗೊತ್ತಿಲ್ಲ, ಕೇಜ್ರಿವಾಲ್ ಅವರಿಗೆ ಬೋರ್ ಆಗಿದೆಯೋ ಅಥವಾ ಮರ್ಯಾದೆ ಇಲ್ಲವೋ ಅಥವಾ ಇವೆರಡೂ ಇರುವ ವ್ಯಕ್ತಿಯೂ ಆಗಿರಬಹುದು ಎಂದಿದ್ದಾರೆ.

ಅರಾಜಕತಾವಾದಿ ಅರವಿಂದ್ ಕೇಜ್ರಿವಾಲ್ ತಾನು ಎಲ್ಲರಿಗಿಂತ ಭಿನ್ನ, ಅತ್ಯಂತ ಕೆಟ್ಟದಾಗಿ ಅಗೌರವ ತೋರಿಸಲು ಬಲ್ಲೆ ಎನ್ನುವ ಸಲುವಾಗಿ ಉದ್ದೇಶಪೂರ್ವಕವಾಗಿ ಇವೆಲ್ಲವನ್ನೂ ಮಾಡುತ್ತಾನೆ.ಪ್ರತಿ ಬಾರಿಯೂ ಇದನ್ನು ಅವರು ಮಾಡುತ್ತಿರುತ್ತಾರೆ. ! ಇತಿಹಾಸದುದ್ದಕ್ಕೂ ಅವರಂತಹ ಸಣ್ಣ ಮನುಷ್ಯರು ದೈತ್ಯರ ಸಾಧನೆಯನ್ನು ಹೀಯಾಳಿಸಲು, ಗಮನ ಸೆಳೆಯಲು ಅವರ ಭುಜದ ಮೇಲೆ ನಿಂತಿದ್ದಾರೆ! ಇದೊಂದು ದೊಡ್ಡ ಅವಮಾನ ಎಂದು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದಾರೆ.

ನೆಟಿಜನ್‌ಗಳು ಅರವಿಂದ್ ಕೇಜ್ರಿವಾಲ್ ಅವರ ನಡವಳಿಕೆಯನ್ನು ಖಂಡಿಸಿದ್ದಾರೆ. ಟ್ವಿಟರ್ ಬಳಕೆದಾರ ಅಂಕುರ್ ಸಿಂಗ್, "ಪ್ರಧಾನಿ ಅವರೊಂದಿಗಿನ ಮಹತ್ವದ ಸಭೆಯಲ್ಲಿ ಕೇಜ್ರಿವಾಲ್ ಹೇಗೆ ಕುಳಿತಿದ್ದಾರೆ ಎಂಬುದನ್ನು ನೀವೇ ನೋಡಿ; ಎಂದು ಹೇಳಿದ್ದಾರೆ. ಅವರು ಶೇರ್ ಮಾಡಿರುವ ವಿಡಿಯೋದಲ್ಲಿ ಸಿಎಂ ಕೇಜ್ರಿವಾಲ್ ತಲೆಯ ಹಿಂದೆ ತೋಳುಗಳನ್ನು ಇಟ್ಟುಕೊಂಡು ನಿರಾಳವಾಗಿ ಕುಳಿತಿರುವುದು ಕಂಡುಬಂದಿದೆ. ನವೀದ್ ಎನ್ನುವ ವ್ಯಕ್ತಿ, ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು, ಮತ್ತು ಸಿಎಂ ಕೇಜ್ರಿವಾಲ್ ಅವರು ತಮ್ಮ ತಂದೆಯ ಮದುವೆಗೆ ಬಂದಿದ್ದಾರೋ ಅಥವಾ ಪ್ರಧಾನಿಯೊಂದಿಗಿನ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆಯೇ ಎನ್ನುವ ಅನುಮಾನವಿದೆ ಎಂದಿದ್ದಾರೆ.

 

Follow Us:
Download App:
  • android
  • ios