Asianet Suvarna News Asianet Suvarna News

ಹುಬ್ಬಳ್ಳಿ ಶಿಕ್ಷಕಿಯ ಮೇಲೆ ಅತ್ಯಾಚಾರವೆಸಗಿದ ಮಧ್ಯಪ್ರದೇಶ ಮುಸ್ಲಿಂ ಧರ್ಮಗುರು ಬಂಧನ!

ಮಧ್ಯ ಪ್ರದೇಶದ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಶಿಕ್ಷಕಿಗೆ ಮತ್ತು ಬರುವ ನಶೆಯನ್ನು ಕೊಟ್ಟು ಅತ್ಯಾಚಾರ ಎಸಗಿದ ಮುಸ್ಲಿಂ ಧರ್ಮಗುರುವನ್ನು ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. 

Madhya Pradesh Muslim Cleric raped Hubli teacher Karnataka police arrest Accused sat
Author
First Published Dec 29, 2023, 4:46 PM IST

ಬೆಂಗಳೂರು (ಡಿ.29): ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೂಲೀಸರು, ಮಧ್ಯಪ್ರದೇಶದಲ್ಲಿ ಅಡಗಿ ಕುಳಿತಿದ್ದ ದೇಶದ ಖ್ಯಾತ ಮುಪ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮುಪ್ತಿ, ಗುಲಾಮ ಜಿಲಾನಿ ಅಜಹರಿ ಎಂಬಾತನನ್ನು ಮಧ್ಯಪ್ರದೇಶದ ಖಂಡ್ವಾ ಎಂಬಲ್ಲಿ ಬಂಧಿಸಿ, ಹುಬ್ಬಳ್ಳಿಗೆ ಕರೆತರುತ್ತಿದ್ದಾರೆ.

ಹುಬ್ಬಳ್ಳಿ ಪೊಲೀಸರಿಂದ ಬಂಧಿತನಾಗಿರುವ ಮುಪ್ತಿ ಗುಲಾಮ ಜಿಲಾನಿ ಅಜಹರಿ, ಆತನ ಮದರಸಾದಲ್ಲಿ ಶಿಕ್ಷಕಿಯಾಗಿದ್ದ ಹುಬ್ಬಳ್ಳಿ ಮೂಲದ ಯುವತಿಗೆ ನಶೆ ಬರುವ ಔಷಧಿ ಕೊಟ್ಟು ಅತ್ಯಾಚಾರ ಮಾಡಿದ ಆರೋಪವಿದೆ. ಮದುವೆ ಮಾಡಿಕೊಳ್ಳುವದಾಗಿ ಹೇಳಿ ಎರಡು ವರ್ಷದ ಅವಧಿಯಲ್ಲಿ ಮೇಲಿಂದ ಮೇಲೆ ಬಲಾತ್ಕಾರ ಮಾಡಿದ್ದಾನೆಂದು ಯುವತಿ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರಿ ದಾಖಲಿಸಿದ್ದಳು. ಎರಡು ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಯ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. 

ಹೈಸ್ಕೂಲ್‌ ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿಯ ಖುಲ್ಲಂ ಖುಲ್ಲಾ ರೊಮ್ಯಾನ್ಸ್: ಅಮಾನತು ಮಾಡಿದ ಶಿಕ್ಷಣ ಇಲಾಖೆ!

ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ತವರು ಮನೆ ಹುಬ್ಬಳ್ಳಿಗೆ ಬಂದು ಬಿಟ್ಟು ಹೋಗಿದ್ದ, ನನ್ನ ನಿನ್ನ ನಡುವೆ ಯಾವುದೇ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗ ಮಾಡಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ಯುವತಿ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಸದ್ಯ ಆ ಯುವತಿ 6 ತಿಂಗಳ ಗರ್ಭಿಣಿಯಾಗಿದ್ದಾಳೆ.

ಹುಬ್ಬಳ್ಳಿ ಮೂಲದ 23 ವರ್ಷದ ಯುವತಿ, ಆಲಿಮ್ ಕೋರ್ಸ್ ಮುಗಿಸಿದ್ದು ಮಧ್ಯಪ್ರದೇಶದ ಖಂಡವಾದಲ್ಲಿರುವ ಈತನ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.ಈ ಮೊದಲೇ ಹುಬ್ಬಳ್ಳಿಯಲ್ಲಿರುವ ಯುವತಿಯ ತಂದೆಯ ಜೊತೆ ಪರಿಚಯನಾಗಿದ್ದ ಗುಲಾಮ ಜಿಲಾನಿ ಅಜಹರಿ, ನಿಮ್ಮ ಮಗಳಿಗೆ ನಮ್ಮಲ್ಲಿ ಕೆಲಸ ಇದೆ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ಯುವತಿ ಖಂಡವಾ ಪಟ್ಟಣಕ್ಕೆ ಹೋಗಿದ್ದಳು. ಯುವತಿಯನ್ನು ಪುಸಲಾಯಿಸಿದ ಮುಫ್ತಿ ಗುಲಾಮ ಜಿಲಾನಿ ಅಜಹರಿ, ನನಗೆ ಮೊದಲ ಹೆಂಡತಿಯಿಂದ ವಿಚ್ಚೆದನವಾಗಿದೆ. ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಲೇ ನಿರಂತರವಾಗಿ ಅತ್ಯಾಚಾರ ಮಾಡುತ್ತಾ ಬಂದಿದ್ದ ಎನ್ನಲಾಗಿದೆ.

Breaking Teacher death: ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಹೃದಯಾಘಾತಕ್ಕೆ ಬಲಿಯಾದ ಮುಖ್ಯ ಶಿಕ್ಷಕ

ಸದ್ಯ ದೂರನ್ನು ಧಾಖಲಿಸಿಕೊಂಡ ಹಳೇ ಹುಬ್ಬಳ್ಳಿ ಪೊಲೀಸರು, ಆರೋಪಿ ಮುಷ್ತಿ ಗುಲಾಮ ಜಿಲಾನಿ ಅಜಹರಿಯನ್ನು ಬಂಧಿಸಿದ್ದಾರೆ. ಮಧ್ಯಪ್ರದೇಶದ ಖಂಡವಾದಿಂದ ಆತನನ್ನು ಹುಬ್ಬಳ್ಳಿಗೆ ಕರೆತರಲಾಗುತ್ತಿದೆ.
 

Follow Us:
Download App:
  • android
  • ios