ಬೆಂಗಳೂರು(ಜು.19): ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಗೆ ರಾಜ್ಯ ಸರ್ಕಾರ ಇನ್ನೂ 10 ಲಕ್ಷ ರಾರ‍ಯಪಿಡ್‌ ಆ್ಯಂಟಿಜನ್‌ ಕಿಟ್‌ಗಳ ಖರೀದಿಗೆ ಆದೇಶ ಮಾಡಿದೆ. ಆದರೆ, ಈ ಕಿಟ್‌ಗಳ ಮೂಲಕ ನಡೆದ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದ ಸಾಕಷ್ಟುಜನರಿಗೆ ಕೋವಿಡ್‌ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ (ಆರ್‌ಟಿಪಿಸಿಆರ್‌) ಪಾಸಿಟಿವ್‌ ಬಂದ ಪ್ರಕರಣಗಳು ವರದಿಯಾಗುತ್ತಿವೆ.

ಇದರಿಂದಾಗಿ ಸರ್ಕಾರ ಕೋಟ್ಯಾಂತರ ರು. ವೆಚ್ಚ ಮಾಡಿ ಖರೀಸುತ್ತಿರುವ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ಗಳಿಂದ ಬರುವ ವರದಿ ಎಷ್ಟರ ಮಟ್ಟಿಗೆ ನಿಖರ ಅಥವಾ ಸ್ಪಷ್ಟಎಂಬ ಬಗ್ಗೆ ಅನುಮಾನ ಸೃಷ್ಟಿಸಿದೆ.

ಇತ್ತೀಚೆಗಷ್ಟೆ Rapid‌ ಆ್ಯಂಟಿಜನ್‌ ಪರೀಕ್ಷೆ ಮಾಡಿಸಿಕೊಂಡಿದ್ದ ಬಿಬಿಎಂಪಿಯ ಸಿಬ್ಬಂದಿಯೊಬ್ಬರಿಗೆ ನೆಗೆಟಿವ್‌ ವರದಿ ಬಂದಿತ್ತು. ಆದರೆ, ಅವರು ತಮಗೆ ಕೆಲ ಅನ್ಯ ರೀತಿಯ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಕೋವಿಡ್‌ ಪ್ರಯೋಗಾಲಯದಲ್ಲಿ ಗಂಟಲ ದ್ರವ ನೀಡಿ ಮತ್ತೊಮ್ಮೆ ಪರೀಕ್ಷೆಗೊಳಗಾಗಿದ್ದಾರೆ. ಈ ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ವರದಿ ಬಂದಿದ್ದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಇವರೊಬ್ಬರ ಹೇಳಿಕೆಯಲ್ಲ, ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆಗೆ ಒಳಗಾದ ಇನ್ನೂ ಅನೇಕ ಜನರಿಂದ ಇಂತಹದ್ದೇ ಆರೋಪ ಕೇಳಿಬರುತ್ತಿದೆ.

ಸೋಂಕು ಹೆಚ್ಚಳ ಬೆಂಗಳೂರು ನಂ.1: ರಾಜ್ಯ ರಾಜಧಾನಿ ಈಗ ದೇಶದ ಕೊರೋನಾ ಹಾಟ್‌ಸ್ಪಾಟ್‌!

ಅಧಿಕಾರಿಗಳು ಹೇಳಿದ್ದ ಪ್ರಕಾರ, ‘ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ ಕೋವಿಡ್‌ ಪಾಸಿಟಿವ್‌ ಇರುವವರಿಗೆ ಶೇ.90ರಷ್ಟುನಿಖರ ವರದಿ ಬರುತ್ತದೆ. ಉಳಿದ ಶೇ.10ರಷ್ಟುಪರೀಕ್ಷಾ ವರದಿಯಲ್ಲಿ ತಪ್ಪುಗಳಾಗುವ ಸಾಧ್ಯತೆ ಇದೆ. ಹಾಗಾಗಿಯೇ ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೂ, ಲಕ್ಷಣಗಳಿದ್ದರೆ ಅವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನೂ ನಡೆಸಲಾಗುತ್ತದೆ ಎನ್ನುತ್ತಾರೆ.

ಆದರೆ, ಪ್ರಸ್ತುತ ಕೇಳಿಬರುತ್ತಿರುವ ಆರೋಪಗಳು ಅಧಿಕಾರಿಗಳು ಹೇಳುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ವರದಿ ನಿಖರಾಗಿಲ್ಲವೆಂಬ ಅನುಮಾನ ಹುಟ್ಟುಹಾಕಿದೆ.

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

Rapid‌ ಆಂಟಿಜನ್‌ ಪರೀಕ್ಷೆ ಶೇ.50ರಿಂದ 60ರಷ್ಟುನಿಖರವಾಗಿರುತ್ತದೆ. ಬೇರೆ ಬೇರೆ ರಾಜ್ಯಗಳಂತೆ ನಮ್ಮ ರಾಜ್ಯದಲ್ಲೂ ಬೇಡಿಕೆ ಬಂದಿದ್ದರಿಂದ ಈ ಪರೀಕ್ಷೆ ನಡೆಸಲಾಗುತ್ತಿದೆ. ಈಗಾಗಲೇ ಪರೀಕ್ಷೆ ನಡೆಸಲಾಗುತ್ತಿರುವ 1 ಲಕ್ಷ ಕಿಟ್‌ಗಳ ಜೊತೆಗೆ ಇನ್ನೂ 10 ಲಕ್ಷ ಕಿಟ್‌ಗಳ ಖರೀದಿಗೆ ಸರ್ಕಾರ ಆದೇಶ ಮಾಡಿದೆ. ಈ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೂ ಲಕ್ಷಣ ಇದ್ದವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನೂ ಮಾಡಲಾಗುತ್ತದೆ. ಆದರೆ, ಆರ್‌ಟಿಪಿಸಿಆರ್‌ ಪರೀಕ್ಷೆಗಳನ್ನು ಯಾವ ಕಾರಣಕ್ಕೂ ಕಡಿಮೆ ಮಾಡುವುದಿಲ್ಲ, ಇನ್ನಷ್ಟುಹೆಚ್ಚಿಸುತ್ತೇವೆ.

- ಡಾ.ಕೆ.ಸುಧಾಕರ್‌, ವೈದ್ಯಕೀಯ ಶಿಕ್ಷಣ ಸಚಿವ