Asianet Suvarna News Asianet Suvarna News

Corona, omicron:ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಏರಿಕೆ, ಇರಲಿ ಎಚ್ಚರಿಕೆ

* ಕರ್ನಾಟಕದಲ್ಲಿ ಕೊರೋನಾ, ಒಮಿಕ್ರಾನ್ ಏರಿಕೆ
* 335 ಕೊರೋನಾ ಪಾಸಿಟಿವ್ ಕೇಸ್
* ಒಮಿಕ್ರಾನ್ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 14ಕ್ಕೆ ಏರಿಕೆ

Corona omicron In Karnataka here is December 18th Cases rbj
Author
Bengaluru, First Published Dec 18, 2021, 10:08 PM IST
  • Facebook
  • Twitter
  • Whatsapp

ಬೆಂಗಳೂರು, (ಡಿ.18): ಕರ್ನಾಟಕದಲ್ಲಿ (Karnataka) ಇಂದು (ಶನಿವಾರ) ಕೊರೋನಾ (Coronavirus) ಹಾಗೂ ಅದರ ರೂಪಾಂತರಿ ಒಮಿಕ್ರಾನ್ (Omicron) ಸೋಂಕಿನ ಸಂಖ್ಯೆ ಏರಿಕೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಇಂದು ಒಟ್ಟು 335 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 5 ಮರಣ ಪ್ರಕರಣ ದಾಖಲಾಗಿದೆ. ಇನ್ನು ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ಪಾಸಿಟಿವ್ ಪ್ರಕರಣಗಳ ಒಟ್ಟು ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 

Covid 19 Variant: ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಬೀಳುತ್ತಾ ಬ್ರೇಕ್‌?

ಈ ಮೂಲಕ ಕೊರೋನಾ ಸೋಂಕಿತರ ಒಟ್ಟು ಸಂಖ್ಯೆ  30,02,127ಕ್ಕೆ ಏರಿಕೆಯಾಗಿದ್ರೆ, ಈ ಪೈಕಿ 29,56,691 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ 7,120 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಮರಣ ಪ್ರಮಾಣ ಶೇ.1.49 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.28 ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಇಂದು(ಡಿ.18) ಒಟ್ಟು 2,38,442 ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಒಟ್ಟು 1,18,032 ಸ್ಯಾಂಪಲ್ (ಆರ್‌ಟಿಪಿಸಿಆರ್ 97,541 + 20,491 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. 

ಜಿಲ್ಲಾವಾರು ಕೊರೋನಾ ಸಂಖ್ಯೆ 
ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 225, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 6, ಚಿತ್ರದುರ್ಗ 0, ದಕ್ಷಿಣ ಕನ್ನಡ 19, ದಾವಣಗೆರೆ 0, ಧಾರವಾಡ 5, ಗದಗ 0, ಹಾಸನ 8, ಹಾವೇರಿ 0, ಕಲಬುರಗಿ 1, ಕೊಡಗು 25, ಕೋಲಾರ 5, ಕೊಪ್ಪಳ 0, ಮಂಡ್ಯ 2, ಮೈಸೂರು 14, ರಾಯಚೂರು 1, ರಾಮನಗರ 2, ಶಿವಮೊಗ್ಗ 2, ತುಮಕೂರು 2, ಉಡುಪಿ 6, ಉತ್ತರ ಕನ್ನಡ 9, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಮೂರನೇ ಅಲೆ ಮುಂಜಾಗ್ರತಾ ಕ್ರಮವಾಗಿ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರ(Government of Karnataka) ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ (MakeShift Model) ಆಸ್ಪತ್ರೆಯನ್ನು ವಿದೇಶದಿಂದ(Foreign) ಬಂದ ಕೊರೋನಾ ಸೋಂಕಿತರು ಮತ್ತು ಒಮಿಕ್ರೋನ್‌ ಸೋಂಕಿತರ ಚಿಕಿತ್ಸೆಗೆ ಬಳಸಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.

ಸದ್ಯ ಬೌರಿಂಗ್‌ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಆದರೆ, ಕಳೆದ ಎರಡು ದಿನಗಳಿಂದ ವಿದೇಶದಿಂದ ಬಂದವರಲ್ಲಿ ಸೋಂಕು ಹೆಚ್ಚಳವಾಗಿರುವುದು ಮತ್ತು ಒಮಿಕ್ರೋನ್‌(Omicron) ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆ ಹೆಚ್ಚುವರಿಯಾಗಿ ರಾಜೀವ್‌ಗಾಂಧಿ ಆಸ್ಪತ್ರೆಯನ್ನು(Hospital) ನಿಗದಿಪಡಿಸಲಾಗಿದೆ. ಸದ್ಯ ಬೌರಿಂಗ್‌ನಲ್ಲಿ 120 ಹಾಸಿಗೆಗಳನ್ನು ಚಿಕಿತ್ಸೆಗೆಂದು ಮೀಸಲಿಟ್ಟಿದ್ದು, 20 ಹಾಸಿಗೆ ಭರ್ತಿಯಾಗಿವೆ. ಎಲ್ಲಾ ಹಾಸಿಗೆಗಳು ಭರ್ತಿಯಾದ ಬಳಿಕ ಗಾಜೀವ್‌ಗಾಂಧಿ ಆಸ್ಪತ್ರೆಗೆ ಸೋಂಕಿತರನ್ನು ಕಳುಹಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ(Department of Health) ಅಧಿಕಾರಿಗಳು ತಿಳಿಸಿದ್ದಾರೆ.

ಇಡೀ ಜಗತ್ತಿನಾದ್ಯಂತ ತಲ್ಲಣಕ್ಕೆ ಕಾರಣವಾಗಿರುವ ‘ಒಮಿಕ್ರೋನ್‌’(Omicron) ಕೋವಿಡ್‌ ರೂಪಾಂತರಿ ತಳಿ ಬ್ರಿಟನ್‌ನಲ್ಲಿ(Britain) ವ್ಯಾಪಿಸುತ್ತಿರುವಂತೆ ಭಾರತದಲ್ಲಿ(India) ಸಮುದಾಯಕ್ಕೆ ಹರಡಿದರೆ ನಿತ್ಯ 14 ಲಕ್ಷ ಪ್ರಕರಣಗಳು ದೃಢಪಡುವ ಸಾಧ್ಯತೆ ಇದೆ. ಅದೇ ರೀತಿ ಫ್ರಾನ್ಸ್‌(France) ಮಾದರಿಯಲ್ಲಿ ಹರಡಿದರೆ ದೇಶದಲ್ಲಿ ನಿತ್ಯ 13 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿದೆ ಎಂದು ಕೇಂದ್ರ ಸರ್ಕಾರ(Central Government) ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನಗತ್ಯ ಓಡಾಟ ಮತ್ತು ಹೊಸ ವರ್ಷಾಚರಣೆ, ಸಭೆ-ಸಮಾರಂಭಗಳಲ್ಲಿ ಸೇರುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸರ್ಕಾರ ಶುಕ್ರವಾರ ಜನರಿಗೆ ಮನವಿ ಮಾಡಿದೆ. ಮಾಸ್ಕ್‌(Mask) ಮತ್ತು ಸಾಮಾಜಿಕ ಅಂತರ(Social Distance) ಸೇರಿ ಕೋವಿಡ್‌ ಮಾರ್ಗಸೂಚಿ(Covid Guidelines) ಕಡ್ಡಾಯ ಪಾಲನೆಗೆ ಕೋರಿದೆ.

Follow Us:
Download App:
  • android
  • ios