ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಅಂಕಿ-ಸಂಖ್ಯೆ ಕೊಟ್ಟ ಸಚಿವ ಸುಧಾಕರ್
* ಕರ್ನಾಟಕದಲ್ಲಿ ತಗ್ಗಿದ ಕೊರೋನಾ ಎರಡನೇ ಅಲೆ
* ಹೊಸದಾಗಿ 504 ಜನರಿಗೆ ಕೊರೋನಾ, 20 ಸಾವು
* ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ ಸಚಿವ ಡಾ ಕೆ ಸುಧಾಕರ್
ಬೆಂಗಳೂರು, (ಸೆ.27): ರಾಜ್ಯದಲ್ಲಿ ಇಂದು (ಸೆ.27) 1,03,800 ಕೋವಿಡ್ (Covid) ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ ಹೊಸದಾಗಿ 504 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇನ್ನು 20 ಜನ ಬಲಿಯಾಗಿದ್ದು, 893 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಲಸಿಕೆ ಇನ್ನೂ ಪಡೆದಿಲ್ವಾ? ಸಿಬ್ಬಂದಿ ಮನೆಗೇ ಬರ್ತಾರೆ..!
ರಾಜಧಾನಿ ಬೆಂಗಳೂರಿನಲ್ಲಿ 181 ಜನರಿಗೆ ಸೋಂಕು ತಗುಲಿದೆ. 265 ಜನ ಗುಣಮುಖರಾಗಿದ್ದಾರೆ. 5 ಜನ ಸೋಂಕಿತರು ಮೃತಪಟ್ಟಿದ್ದು, 7394 ಸಕ್ರಿಯ ಪ್ರಕರಣಗಳಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನೈಟ್ ಕರ್ಫ್ಯೂ (ರಾತ್ರಿ10ರಿಂದ ಬೆಳಗ್ಗೆ 05ರ ವರೆಗೆ) ಅಕ್ಟೋಬರ್ 11ರ ವರೆಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇಕಡ 0.48 ರಷ್ಟು ಇದ್ದು, 12,804 ಸಕ್ರಿಯ ಪ್ರಕರಣಗಳು ಇವೆ. ಒಟ್ಟಿನಲ್ಲಿ ಕೊರೋನಾ ಎರಡನೇ ಅಲೆ ಸೋಂಕಿನ ತೀವ್ರತೆಯಲ್ಲಿ ಭಾರೀ ಕಡಿಮೆಯಾಗಿದೆ. ಆದರೂ ಜನ ಯಾವುದೇ ಕಾರಣಕ್ಕೂ ಮೈಮರೆಯಬಾರದು.
ತಜ್ಞ ವೈದ್ಯರು ಮೂರನೇ ಅಲೆ ಎಚ್ಚರಿಕೆ ಕೊಟ್ಟಿದ್ದರಿಂದ ಜನರು ತಪ್ಪದೇ ಮಾಸ್ಕ್ ಹಾಗೂ ಸಮಾಜಿಕ ಅಂತರ ಕಾಮಾಡಿಕೊಳ್ಳಬೇಕು.