ಬೆಂಗಳೂರಿಗೆ ಮೊದಲ ಅಧಿಕೃತ ಭೇಟಿ ನೀಡಿದ ಅಮೇರಿಕ ದೂತಾವಾಸದ ಕನ್ಸೂಲ್ ಜನರಲ್ ಕ್ರಿಸ್ಟೊಫರ್ ಡಬ್ಲ್ಯು ಹಾಡ್ಜಸ್
ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಕಾನ್ಸೂಲ್ ಜನರಲ್ ಕ್ರಿಸ್ಟೊಫರ್ ಡಬ್ಲ್ಯು ಹಾಡ್ಜಸ್ ಅವರು ನಗರದ ಚೊಚ್ಚಲ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅಮೇರಿಕ ಮತ್ತು ಭಾರತದ ನಡುವಿನ ಗಾಢ ಆರ್ಥಿಕ ಮತ್ತು ವಾಣಿಜ್ಯ ಸಂಬಂಧವನ್ನು ಎತ್ತಿ ತೋರಿಸಲು ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ.

ಬೆಂಗಳೂರು (ಆ.18): ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಕಾನ್ಸೂಲ್ ಜನರಲ್ ಕ್ರಿಸ್ಟೊಫರ್ ಡಬ್ಲ್ಯು ಹಾಡ್ಜಸ್ ಅವರು ನಗರದ ಚೊಚ್ಚಲ ಅಧಿಕೃತ ಭೇಟಿಯ ಸಂದರ್ಭದಲ್ಲಿ ಅಮೇರಿಕ ಮತ್ತು ಭಾರತದ ನಡುವಿನ ಗಾಢ ಆರ್ಥಿಕ ಮತ್ತು ವಾಣಿಜ್ಯ ಸಂಬಂಧವನ್ನು ಎತ್ತಿ ತೋರಿಸಲು ಸರ್ಕಾರಿ ಅಧಿಕಾರಿಗಳು, ವಿಜ್ಞಾನಿಗಳು, ಉದ್ಯಮಿಗಳನ್ನು ಭೇಟಿ ಮಾಡಲಿದ್ದಾರೆ. ಈ ಭೇಟಿಯ ಭಾಗವಾಗಿ ಬೆಂಗಳೂರಿನಲ್ಲಿ ಯು.ಎಸ್. ಕಮರ್ಷಿಯಲ್ ಸರ್ವೀಸ್‌ನ 30ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಗುರುವಾರ ಆಗಸ್ಟ್ 17 ರಂದು ಭಾಗವಹಿಸಿದರು.
ಈ ಸಂದರ್ಭದ ಸ್ಮರಣಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಕಾನ್ಸೂಲ್ ಜನರಲ್ ಹಾಡ್ಜಸ್ ಅವರು ಸದೃಢ ವಾಣಿಜ್ಯ ಸಂಬಂಧಗಳನ್ನು ಸ್ಥಾಪಿಸುವಲ್ಲಿ ಮತ್ತು ಸಹಯೋಗಗಳನ್ನು ಸುಗಮಗೊಳಿಸುವಲ್ಲಿ ಯು.ಎಸ್. ಕಮರ್ಷಿಯಲ್ ಸರ್ವೀಸ್ ಪ್ರಮುಖ ಪಾತ್ರವಹಿಸಿದೆ ಎಂದ ಅವರು, ಅಮೇರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ವಾಣಿಜ್ಯ ವ್ಯವಹಾರ ಮತ್ತು ಹೂಡಿಕೆಗೆ ಕಮರ್ಷಿಯಲ್ ಸರ್ವೀಸ್ ವೇಗವರ್ಧಕವಾಗಿ ಕೆಲಸ ಮಾಡುತ್ತಿದೆ ಎಂದರು. 'ಅಮೇರಿಕ ಮತ್ತು ಭಾರತದ ನಡುವಿನ ಆರ್ಥಿಕ ಪಾಲುದಾರಿಕೆಯು ಏರುಗತಿಯಲ್ಲಿದ್ದು, ಎರಡೂ ದೇಶಗಳಲ್ಲಿ ನೂರಾರು ಸಾವಿರ ಉದ್ಯೋಗಗಳಿಗೆ ನೆರವಾಗುತ್ತಿದೆ.
ಧಾರವಾಡ ಎಸ್ಪಿಗೆ ಶಬ್ಬಾಶ್ ಗಿರಿ ಕೊಟ್ಟ ಸಚಿವ ಪರಮೇಶ್ವರ್!
ತಾಂತ್ರಿಕ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುತ್ತಿದೆ,' ಎಂದು ಹೇಳಿದ ಕಾನ್ಸೂಲ್ ಜನರಲ್ ಹಾಡ್ಜಸ್, 'ಭಾರತದಲ್ಲಿ ಅಮೇರಿಕದ ಪ್ರಮುಖ ವಾಣಿಜ್ಯ ಸಹಭಾಗಿಗಳಲ್ಲಿ ಬೆಂಗಳೂರು ನಗರವೂ ಒಂದಾಗಿದೆ. ಈ ನಗರವು ಸುಮಾರು 650ಕ್ಕೂ ಹೆಚ್ಚು ಅಮೇರಿಕನ್ ಕಂಪನಿಗಳಿಗೆ ಆತಿಥ್ಯ ನೀಡಿದ್ದು, ಈ ಯಶೋಗಾಥೆಯ ಬಹುದೊಡ್ಡ ಭಾಗವಾಗುವ ಮೂಲಕ ಅಮೇರಿಕ- ಭಾರತ ದ್ವಿಪಕ್ಷೀಯ ಸಂಬಂಧಗಳಿಗೆ ಕೊಡುಗೆ ನೀಡುತ್ತಿದೆ,'ಎಂದು ಹೇಳಿದರು.
ಅಮೇರಿಕ- ಭಾರತ ವ್ಯಾಪಾರದ ಪಾಲುದಾರಿಕೆಯನ್ನು ಹೆಚ್ಚಿಸಲು ಕರ್ನಾಟಕವೂ ಸೇರಿದಂತೆ ದಕ್ಷಿಣಭಾರತದಾದ್ಯಂತ ವ್ಯಾಪಾರ ವಹಿವಾಟು ನಡೆಸುವ ಸಮುದಾಯಗಳೊಂದಿಗೆ ಒಡಗೂಡಿ ಕೆಲಸಮಾಡುವ ಯು.ಎಸ್. ಕಾನ್ಸಲೇಟ್ ಜನರಲ್ ಚೆನ್ನೈನ ಬದ್ಧತೆಯನ್ನು ಪುನರುಚ್ಚರಿಸಿದ ಕಾನ್ಸುಲ್ ಜನರಲ್ ಹಾಡ್ಜಸ್ ಅವರು, 'ಅಮೇರಿಕ- ಭಾರತದ ನಡುವಣ ವಾಣಿಜ್ಯವ್ಯವಹಾರವು ಬಾಹ್ಯಾಕಾಶ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಆರೋಗ್ಯ, ಶಿಕ್ಷಣ, ಮತ್ತು ಏರೋಸ್ಪೇಸ್ ವಲಯಗಳಲ್ಲಿ ಹಿಂದೆಂದಿಗಿಂತಲು ಬಲವಾಗಿದೆ. ಬೆಂಗಳೂರಿನಲ್ಲಿ ಯು.ಎಸ್. ಕಮರ್ಷಿಯಲ್ ಸರ್ವೀಸ್‌ನ ಸಂಭ್ರಮಾಚರಣೆ ಮಾಡುತ್ತಿರುವ ಹೊತ್ತಿನಲ್ಲೇ ಮುಂದಿನ ಮೂವತ್ತು ವರ್ಷಗಳಲ್ಲಿ ಎಂಹತ ಸಹಭಾಗಿತ್ವಗಳು ಮತ್ತು ಸಮೃದ್ಧಿಯನ್ನು ತರುತ್ತದೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ,' ಎಂದರು.
ಹೊಸದಿಲ್ಲಿಯಲ್ಲಿನ ಅಮೇರಿಕ ರಾಯಭಾರ ಕಚೇರಿಯ ಮಿನಿಸ್ಟರ್ ಕೌನ್ಸಲರ್ ಫಾರ್ ಕಮರ್ಷಿಯಲ್ ಅಫೇರ್ಸ್ ಜೊನಾಥನ್ ಹೀಮರ್, ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಪ್ರಿನ್ಸಿಪಲ್ ಕಮರ್ಷಿಯಲ್ ಆಫೀಸರ್ ಕೇರಿ ಅರುಣ್, ಮತ್ತು ಚೆನ್ನೈನಲ್ಲಿ ಪೊಲಿಟಿಕಲ್/ಎಕನಾಮಿಕ್ ವಿಭಾಗದ ಮುಖ್ಯಸ್ಥೆ ವಿರ್ಸಾ ಪರ್ಕಿನ್ಸ್ ಅವರೂ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸ್ಥಳೀಯ, ಅಂತರಾಷ್ಟ್ರೀಯ ಉದ್ಯಮಗಳ ನಾಯಕರು, ಸರ್ಕಾರದ ಪ್ರತಿನಿಧಿಗಳು, ಪ್ರಭಾವಿ ವ್ಯಕ್ತಿಗಳು, ಮತ್ತು ಹಲವಾರು ಉದ್ಯಮಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಕಿರುಪರಿಚಯ: ಕ್ರಿಸ್ಟೋಫರ್ ಡಬ್ಲ್ಯೂ. ಹಾಡ್ಜಸ್ ಅವರು ಚೆನ್ನೈ ಅಮೇರಿಕ ದೂತಾವಾಸದ ಮುಖ್ಯಸ್ಥರಾಗಿದ್ದಾರೆ. ಇದಕ್ಕೂ ಮುನ್ನ ಹಾಡ್ಜಸ್ ಅವರು ಕೋಆರ್ಡಿನೇಟರ್ ಫಾರ್ ಆಫ್ಘನ್ ರಿಲೊಕೇಷನ್ ಎಫರ್ಟ್ಸ್(ಕೇರ್) ಕಚೇರಿಯ ಹಿರಿಯ ಸಲಹೆಗಾರರಾಗಿದ್ದರು. ಅದಕ್ಕೂ ಮುನ್ನ ಬ್ಯೂರೋ ಫಾರ್ ನಿಯರ್ ಈಸ್ಟ್ರನ್ ಅಫೇರ್ಸ್ ನಲ್ಲಿ ಅಸಿಸ್ಟೆನ್ಸ್ ಕೋಆರ್ಡಿನೇಷನ್ ಅಂಡ್ ಪ್ರೆಸ್ ಅಂಡ್ ಪಬ್ಲಿಕ್ ಡಿಪ್ಲೊಮಸಿ ವಿಭಾಗದ ಡೆಪ್ಯುಟಿ ಅಸಿಸ್ಟೆಂಟ್ ಸೆಕ್ರೆಟರಿಯಾಗಿ ಹಾಗೂ ಇಸ್ರೇಲಿ-ಪ್ಯಾಲೆಸ್ಟಿನಿಯನ್ ವ್ಯವಹಾರಗಳ ಉಪ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಅವರು ಕಡೆಯದಾಗಿ ವಿದೇಶದಲ್ಲಿ ಕಾರ್ಯನಿರ್ವಹಿಸಿದ್ದು ಜೆರೂಸಲೇಂನ ರಾಯಭಾರ ಕಚೇರಿಯಲ್ಲಿ ಅಸಿಸ್ಟೆಂಟ್ ಡೆಪ್ಯುಟಿ ಛೀಫ್ ಆಫ್ ಮಿಷನ್ ಮತ್ತು ಛೀಫ್ ಆಫ್ ದಿ ಪ್ಯಾಲೆಸ್ತೇನಿಯನ್ ಅಫೇರ್ಸ್ ಯೂನಿಟ್ ನಲ್ಲಿ. ಹಾಡ್ಜಸ್ ಅವರು 2000ರಲ್ಲಿ ವಿದೇಶಾಂಗ ಸೇವೆಗೆ ಸೇರಿಕೊಂಡರು. ಅವರು ಜೆರೂಸಲೇಂ, ಹನೊಯ್, ವಿಯೆಟ್ನಾಂ; ಮತ್ತು ಅಕ್ಕ್ರಾ, ಘಾನಾದಲ್ಲಿ ಪಬ್ಲಿಕ್ ಅಫೇರ್ಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಅಲ್ಲದೆ ಆಸ್ಟ್ರಿಯಾ, ಜರ್ಮನಿ, ಸ್ವಿಟ್ಜರ್ ಲೆಂಡ್ ಮತ್ತು ಲಿಷೆನ್ ಸ್ಟೀನ್ ಗಳಲ್ಲಿ ಆಫೀಸ್ ಆಫ್ ದಿ ಸೆಂಟ್ರಲ್ ಯೂರೋಪಿಯನ್ ಅಫೇರ್ಸ್ ನಲ್ಲಿ ಡೆಪ್ಯುಟಿ ಡೈರೆಕ್ಟರ್ ಆಗಿ ದುಡಿದಿದ್ದಾರೆ. ಸುವಾ, ಫಿಜಿ ಮತ್ತು ಫ್ರಾಂಕ್ ಫರ್ಟ್, ಜರ್ಮನಿಗಳಲ್ಲೂ ಕೆಲಸ ಮಾಡಿದ್ದಾರೆ.
Kodagu: ಸಾಕು ನಾಯಿ ಕಚ್ಚಿದರೆ ಮಾಲೀಕನಿಗೆ 6 ತಿಂಗಳು ಜೈಲು ಶಿಕ್ಷೆ ಫಿಕ್ಸ್!
ಯು.ಎಸ್. ಕಮರ್ಷಿಯಲ್ ಸರ್ವೀಸ್ ಬಗ್ಗೆ: ಬೆಂಗಳೂರಿನಲ್ಲಿ ಯು.ಎಸ್. ಕಮರ್ಷಿಯಲ್ ಸರ್ವೀಸ್ 1993ರಲ್ಲಿ ಆರಂಭವಾಗಿದ್ದು, ದಕ್ಷಿಣ ಭಾರತದ ರಾಜ್ಯವಾದ ಕರ್ನಾಟಕದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ. ಇದು ಭಾರತದಾದ್ಯಂತ ಇರುವ ಏಳು ಕಮರ್ಷಿಯಲ್ ಸರ್ವೀಸ್ ಕಚೇರಿಗಳ ಜಾಲದ ಭಾಗವಾಗಿದೆ. ಬೆಂಗಳೂರು ಕೇಂದ್ರವು ಯು.ಎಸ್. ಕಾನ್ಸಲೇಟ್ ಜನರಲ್ ಚೆನ್ನೈನ ಉಪಕೇಂದ್ರವಾಗಿದೆ. ಯು.ಎಸ್. ಕಮರ್ಷಿಯಲ್ ಸರ್ವೀಸ್, ಯು.ಎಸ್. ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಇಂಟರ್‌ನ್ಯಾಶನಲ್ ಟ್ರೇಡ್ ಅಡ್ಮಿನಿಸ್ಟ್ರೇಷನ್‌ನ ಬಂಡವಾಳ ಹೂಡಿಕೆ ಮತ್ತು ವ್ಯಾಪಾರ ವಹಿವಾಟು ಪ್ರೋತ್ಸಾಹಿಸುವ ಅಂಗವಾಗಿದೆ. ಯು.ಎಸ್. ಕಮರ್ಷಿಯಲ್ ಸರ್ವೀಸ್ ವಿದೇಶಗಳಲ್ಲಿರುವ ವಾಣಿಜ್ಯ ವ್ಯವಹಾರ ಅವಕಾಶಗಳಿಗೆ ಅಮೇರಿಕನ್ ರಫ್ತುದಾರರನ್ನು ಸಂಪರ್ಕಿಸುತ್ತದೆ, ಹಾಗೆಯೇ ಅಮೇರಿಕದಲ್ಲಿ ಹೂಡಿಕೆ ಮಾಡುವ ಇರಾದೆ ಹೊಂದಿರುವ ವಿದೇಶಿ ಹೂಡಿಕೆದಾರರಿಗೂ ಒತ್ತಾಸೆ ನೀಡುತ್ತದೆ. ಯು.ಎಸ್. ಕಮರ್ಷಿಯಲ್ ಸರ್ವೀಸ್ ಬೆಂಗಳೂರು, ನಗರದಲ್ಲಿರುವ ಏಕಮಾತ್ರ ಯು.ಎಸ್. ಮಿಷನ್ ಕಚೇರಿ.