Asianet Suvarna News Asianet Suvarna News

ರಾಮಯ್ಯಗೌಡ ಪ್ರತಿಮೆ ನಿರ್ಮಾಣ ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಪತ್ತೆಗೆ ಪೂರಕ: ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಈವರೆಗೆ ಬೆಳಕಿಗೆ ಬಾರದ ರಾಮಯ್ಯಗೌಡರ ಸ್ವಾತಂತ್ರ್ಯ ಹೋರಾಟದ ನೈಜ ಕಥೆ ಈಗ ಸಿಕ್ಕಿದೆ. ಈಗ ಅವರ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದ್ದು, ಇತಿಹಾಸದಲ್ಲಿ ಇಂಥಹ ಮತ್ತಷ್ಟು ಸತ್ಯಗಳನ್ನು ಹೊರಗೆ ತೆಗೆಯಲು ಪೂರಕವಾಗಿದೆ. ರಾಮಯ್ಯಗೌಡ ಒಬ್ಬ ಶ್ರೇಷ್ಠ ಕ್ರಾಂತಿಕಾರಿ ಪುರುಷರಾಗಿದ್ದು, ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯವು ಗಲ್ಲಿಗೇರಿಸಲಾಗಿದೆ. ಇಂಥಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Construction of Ramayya Gowda statue helps to find anonymous freedom fighters: CM Bommai
Author
First Published Nov 19, 2022, 12:43 PM IST


ಮಂಗಳೂರು (ನ.19): ಇಂದು ಮಂಗಳೂರಿನ ಇತಿಹಾಸಕ್ಕೆ ಅತ್ಯಂತ ಮಹತ್ವದ ದಿನವಾಗಿದೆ. ಈವರೆಗೆ ಬೆಳಕಿಗೆ ಬಾರದ ರಾಮಯ್ಯಗೌಡರ ಸ್ವಾತಂತ್ರ್ಯ ಹೋರಾಟದ ನೈಜ ಕಥೆ ಈಗ ಸಿಕ್ಕಿದೆ. ಈಗ ಅವರ ಪ್ರತಿಮೆ ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದ್ದು, ಇತಿಹಾಸದಲ್ಲಿ ಇಂಥಹ ಮತ್ತಷ್ಟು ಸತ್ಯಗಳನ್ನು ಹೊರಗೆ ತೆಗೆಯಲು ಪೂರಕವಾಗಿದೆ. ರಾಮಯ್ಯಗೌಡ ಒಬ್ಬ ಶ್ರೇಷ್ಠ ಕ್ರಾಂತಿಕಾರಿ ಪುರುಷರಾಗಿದ್ದು, ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯವು ಗಲ್ಲಿಗೇರಿಸಲಾಗಿದೆ. ಇಂಥಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮಂಗಳೂರಿನ ಬಾವುಟಗುಡ್ಡೆ (Bavutagudde)ಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ (kedambadi Ramaiahgowda) ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ದೇಶದ ಸ್ವಾತಂತ್ರಕ್ಕೆ ಕನ್ನಡ ನಾಡಿನಲ್ಲಿ ಹೋರಾಟ (freedom Fight) ಮಾಡಿದ ಅನೇಕ ಮಹನೀಯರಿದ್ದಾರೆ. ಈ ಪೈಕಿ ರಾಮಯ್ಯ ಗೌಡರ ಹೋರಾಟದ (Strugle) ಸತ್ಯ ಬೆಳಕಿಗೆ ಬಂದಿದ್ದು, ಅವರ ಮೂರ್ತಿ ಸ್ಥಾಪನೆ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದ್ದಾರೆ. ಅಂತಹವರನ್ನು ಗುರುತಿಸಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಇಂದು ನನಗೆ ಸ್ಪೂರ್ತಿ (Inspiration) ಬಂದಿದೆ. ಇಂದಿನ ಯುವ (Youth) ಪೀಳಿಗೆಗೆ ಸ್ವಾತಂತ್ರ ಹೋರಾಟದ ಬಗ್ಗೆ ತಿಳಿಸಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.

ನಳೀನ್‌ ಕುಮಾರ್ ಕಟೀಲ್‌ ಆರೋಗ್ಯ ವಿಚಾರಿಸಿದ ಸಿಎಂ ಬೊಮ್ಮಾಯಿ

ಕಾಂಗ್ರೆಸ್‌ ಆರೋಪ ನಿರಾಧಾರ: ಮತದಾರರ ಪಟ್ಟಿ (Voters List) ದುರುಪಯೋಗ ಕುರಿತಂತೆ ಕಾಂಗ್ರೆಸ್ ಆರೋಪಕ್ಕೆ ಯಾವುದೇ ಸಾಕ್ಷ್ಯಗಳು (Evidence) ಇಲ್ಲ. ಅದು ಪೂರ್ಣವಾಗಿ ನಿರಾಧಾರವಾಗಿದೆ. ಅದನ್ನ ಮಾಡೋದು ಚುನಾವಣಾ ಆಯೋಗ (Election commission), ನಮಗೂ ಅದಕ್ಕೂ ಸಂಬಂಧ ಇಲ್ಲ. ಪ್ರತಿ ವರ್ಷವೂ ಹೆಸರು ಸೇರ್ಪಡೆ, ಡಿಲಿಟೇಷನ್ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ (Congress) ನವರು ಸೋಲುವ ಭಯದಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ನಕಲಿ ಮತದಾರರು ಡಿಲೀಟ್ (Delete) ಆದ ಭಯದಲ್ಲಿ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್. ಅಂಗಾರ, ಐಟಿ, ಬಿಟಿ, ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ,  ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಶಾಸಕರು, ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Follow Us:
Download App:
  • android
  • ios