Asianet Suvarna News Asianet Suvarna News

Murugha Shree Case: ಮುರುಘಾ ಶ್ರೀ ವಿರುದ್ದ ಸುಳ್ಳು ಕೇಸ್ ದಾಖಲಿಸಲು ಪಿತೂರಿ

 Murugha Swamy Pocso Case: ಮುರುಘಾ ಶ್ರೀಗಳ ವಿರುದ್ದ ಈಗಾಗಲೇ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿವೆ.‌ ಆದರೆ ದಿನದಿಂದ ದಿನಕ್ಕೆ ಪ್ರಕರಣಗಳಲ್ಲಿ ಹೊಸ ತಿರುವು ಸಿಗುತ್ತಿರುವುದರಿಂದ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ. ಮುರುಘಾ ಶ್ರೀ ವಿರುದ್ದ ಸುಳ್ಳು ಕೇಸ್ ದಾಖಲಿಸಲು ಪಿತೂರಿ ಮಾಡಿರುವ ಆರೋಪದಡಿ ಮಠದ ಮಾಜಿ‌ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನವಾಗಿದೆ.

Conspiracy to file a false case against Muruga shree sat
Author
First Published Nov 14, 2022, 6:31 PM IST

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ನ.14) : ಮುರುಘಾ ಶ್ರೀಗಳ ವಿರುದ್ದ ಈಗಾಗಲೇ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿವೆ.‌ ಆದರೆ ದಿನದಿಂದ ದಿನಕ್ಕೆ ಕೇಸ್ ಗಳಲ್ಲಿ ಹೊಸ ತಿರುವು ಸಿಗುತ್ತಿರುವುದರಿಂದ ಎಲ್ಲರಲ್ಲೂ ಕುತೂಹಲ ಹೆಚ್ಚಾಗಿದೆ. ಮುರುಘಾ ಶ್ರೀ ವಿರುದ್ದ ಸುಳ್ಳು ಕೇಸ್ ದಾಖಲಿಸಲು ಪಿತೂರಿ ಮಾಡಿರುವ ಆರೋಪದಡಿ ಮಠದ ಮಾಜಿ‌ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ ಆಗಿರೋದು ಉಳಿದವರ ನಿದ್ದೆಗೆಡಿಸಿದೆ. 

ಮರುಘಾ ಶ್ರೀಗಳ ವಿರುದ್ಧ ಎರಡನೇ ಪೋಕ್ಸೋ ಕೇಸ್ ದಾಖಲಾಗಿ ಈಗಾಗಲೇ ಚಿತ್ರದುರ್ಗ ಪೊಲೀಸರು ಸೂಕ್ತ ತನಿಖೆ ನಡೆಸ್ತಿದ್ದಾರೆ. ಇದರ ಬೆನ್ನಲ್ಲೇ‌ ಮುರುಘಾ ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳು (Basavaprabhu Shree) ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ‌ ದಾಖಲಿಸಿರುವ ದೂರಿನ ಬಳಿಕ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಈ ಹಿಂದೆ ಮುರುಘಾ (Murugha) ಮಠದಲ್ಲಿ ಕೆಲಸ ಮಾಡ್ತಿದ್ದ ಓರ್ವ ಶಿಕ್ಷಕ ಸಂತ್ರಸ್ತ ಬಾಲಕಿಗೆ ಪ್ರಚೋದನೆ ಮಾಡಿ ಸುಳ್ಳು ಕೇಸ್ (Fake Case) ದಾಖಲಿಸಲು ಮುಂದಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ ಬಸವರಾಜನ್ (Basavarajan) ಅವರಿಗೆ ಚಿತ್ರದುರ್ಗ ಒಂದನೇ ಜೆಎಂಎಫ್‌ಸಿ ನ್ಯಾಯಾಲಯ (JMFC Court) ಮಾಜಿ ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಇದರಿಂದಾಗಿ ಪ್ರಕರಣದ ಹಿಂದಿರುವ ಕಾಣದ ಕೈಗಳಿಗೆ ನಡುಕ ಶುರುವಾಗಿದೆ.

ನ್ಯಾಯ ಕೋರಿ ಪಿಎಂ, ಸಿಎಂಗೆ ಮುರುಘಾಶ್ರೀ ಸಂತ್ರಸ್ತೆ ಪತ್ರ

ಆಡಳಿತಾಧಿಕಾರಿ ನ್ಯಾಯಾಂಗ ಬಂಧನ:
ಇನ್ನು ಆಡಿಯೋ ಪ್ರಕರಣದಲ್ಲಿ ಮೊದಲ (ಎ1) ಆರೋಪಿ ಆಗಿರುವ ಶಿಕ್ಷಕ ಬಸವರಾಜೇಂದ್ರ (Teacher Basavarajendra) ಹೇಳಿಕೆಯ ಪರಿಣಾಮವಾಗಿ ಮಾಜಿ ಆಡಳಿತಾಧಿಕಾರಿ ಇಂದು ಬಂಧನವಾಗಿದ್ದಾರೆ. ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಬಸವರಾಜನ್ ಅವರನ್ನು ಸಿಪಿಐ ಬಾಲಚಂದ್ರ ನಾಯ್ಕ ನೇತೃತ್ವದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ (Inquiry) ನಡೆಸಲಾಯಿತು. ಬಳಿಕ ಇಂದು ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಸೂಚಿಸಿ ಆದೇಶ ಹೊರಡಿಸಿತು.

ನಾಳೆ ಜಾಮೀನು ಸಿಗುವ ಸಾಧ್ಯತೆ:
ಮುರುಘಾ ಶ್ರೀ ವಿರುದ್ದ ಎರಡನೇ ಕೇಸ್ (Second Case) ಸುಳ್ಳು ಪ್ರಕರಣದಲ್ಲಿ ಮಾಜಿ ಶಾಸಕ,‌ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ ಆಗಿರೋದಕ್ಕೆ ಅವರ ಪರ ವಕೀಲರು ಹಾಗೂ ಜಿಲ್ಲೆಯ ಜ‌ನರು ಇದೊಂದು ಷಡ್ಯಂತ್ರ ಎಂದು ಮಾತನಾಡುತ್ತಿದ್ದಾರೆ. ಆದರೂ ಕೂಡ  ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಸದ್ಯಕ್ಕೆ ನಾವು ಏನೂ ಹೇಳಲು ಬರುವುದಿಲ್ಲ. ನಾಳೆ ಜಿಲ್ಲಾ ನ್ಯಾಯಾಲದಲ್ಲಿ ನಮಗೆ ಜಾಮೀನು (Bail) ಸಿಗುವ ಭರವಸೆಯಿದೆ. ಸದ್ಯ ಕೋರ್ಟ್ ಬಸವರಾಜನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ‌. ಮಕ್ಕಳ ಪರವಾಗಿ ಧ್ವನಿ ಎತ್ತಿದ ಪರಿಣಾಮ ಇಂದು ಈ ರೀತಿ ಆಗಿದೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಆರೋಪಿ ಬಸವರಾಜನ್ ಪರ ವಕೀಲರು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಚಾರ್ಜ್ ಶೀಟ್ ಹೇಳಿದ ಕರಾಳ ಕಥೆ: ಮುರುಘಾ ಶ್ರೀಗಳಿಗೆ ಮಠದಿಂದ ಗೇಟ್ ಪಾಸ್?

ಒಂದೇ ಜೈಲಲ್ಲಿ ಮದ್ದೆ ಊಟ:
ಒಟ್ಟಾರೆಯಾಗಿ ಮುರುಘಾ ಶ್ರೀ ವಿರುದ್ದದ ಎರಡನೇ ಪೋಕ್ಸೋ ಪ್ರಕರಣಕ್ಕೆ (Pocso Case) ಸಂಬಂಧಿಸಿದಂತೆ ಹಲವಾರು ಬೆಳವಣಿಗೆ ನಡೆಯುತ್ತಿವೆ. ಕಳೆದ ಒಂದೂವರೆ ದಶಕದಿಂದ ಹಾವು ಮುಂಗುಸಿ ತರ ಕಚ್ಚಾಡ್ತಿದ್ದ ಆರೋಪಿಗಳಾಗಿರುವ ಮುರುಘಾ ಶ್ರೀ ಹಾಗೂ ಎಸ್. ಕೆ ಬಸವರಾಜನ್ ಒಂದೇ ಜೈಲಿನಲ್ಲಿ ಮುದ್ದೆ (Lump) ಮುರಿಯುತ್ತಿರೋದು ನಿಜಕ್ಕೂ ವಿಪರ್ಯಾಸವೇ ಸರಿ. ಇನ್ನು ಈ ಕೇಸ್ ನಲ್ಲಿ ಏನೆಲ್ಲಾ ಸತ್ಯ ಬಯಲಿಗೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.
 

Follow Us:
Download App:
  • android
  • ios