2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿ ದಾಖಲಾತಿಗೆ ನಿಗದಿಪಡಿಸಿರುವ ವಯೋಮಿತಿ ಮರುಪರಿಶೀಲಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ಒಂದು ವಾರದ ಗಡುವು. ವಯೋಮಿತಿ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಮೇ.21): ಮುಂಬರುವ 2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿಗೆ ದಾಖಲಾಗಲು ವಯೋಮಿತಿ ಸಡಿಲಿಕೆ ಆದೇಶವನ್ನು ಮರು ಪರಿಶೀಲಿಸಿ ವಾರದೊಳಗೆ ಸೂಕ್ತ ಆದೇಶ ಹೊರಡಿಸುವಂತೆ ರಾಜ್ಯ ಶಾಲಾ ಶಿಕ್ಷ ಣ ಇಲಾಖೆಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Add Asianetnews Kannada as a Preferred SourcegooglePreferred

ಬೆಂಗಳೂರಿನ ಮಾಸ್ಟರ್‌ ಕೃಷ್ಣ ಗಣೇಶ್‌ ಸೇರಿ 6 ಮಂದಿ ವಿದ್ಯಾರ್ಥಿಗಳ ಪರವಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರ‌ ಪೀಠ, ವಯೋಮಿತಿ ವಿಚಾರದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ತೊಂದರೆ ಎದುರಿಸುತ್ತಿದ್ದಾರೆ. ಈ ಸಂಬಂಧ ಒಂದು ವಾರದೊಳಗೆ ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲರು, ವಯೋಮಿತಿ ನಿಗದಿಪಡಿಸಿ ಶಾಲಾ ಶಿಕ್ಷ ಣ ಇಲಾಖೆ ಮಾ.28ರಂದು ಅದೇಶ ಹೊರಡಿಸಿದೆ. ಅರ್ಜಿದಾರರು ಇನ್ನೂ 6 ವರ್ಷ ಪೂರ್ಣಗೊಳಿಸಿಲ್ಲ. ಆದರೆ, 2025-26ನೇ ಸಾಲಿನ ಪೂರ್ವ ಪ್ರಾಥಮಿಕ ಶಿಕ್ಷ ಣ ಪೂರೈಸಿದ್ದಾರೆ. ಸರ್ಕಾರದ ಆದೇಶದಿಂದ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಆ ವಿದ್ಯಾರ್ಥಿಗಳು ಮತ್ತೆ ಯುಕೆಜಿ ಅಧ್ಯಯನ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ, ಮುಂದಿನ ಶೈಕ್ಷ ಣಿಕ ವರ್ಷಕ್ಕೆ ವಯೋಮಿತಿ ಸಡಿಲಿಸಿ ಶಾಲಾ ದಾಖಲಾತಿಗೆ ಅವಕಾಶ ಕಲ್ಪಿಸಬೇಕು ಎಂದು ವಿವರಿಸಿದರು.

ಅದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ನ್ಯಾಯಸಮ್ಮತ ಸಮಯ ನೀಡಿದಲ್ಲಿ ಅರ್ಜಿದಾರರು ಸಲ್ಲಿಸಿರುವ ವಯೋಮಿತಿ ಸಡಿಲಿಕೆ ಮನವಿ ಪರಿಗಣಿಸಿ ಅಗತ್ಯ ಆದೇಶವನ್ನು ಹೊರಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಮನವಿ:

ಈವರೆಗೆ ಶಾಲೆಗಳು ಅನುಸರಿಸುತ್ತಿದ್ದ ಪ್ರವೇಶ ಪದ್ಧತಿ ಮತ್ತು ಅರ್ಹತಾ ಮಾನದಂಡಗಳ ಆಧಾರದ ಮೇಲೆ ಶಾಲಾ ಶಿಕ್ಷ ಣ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಪೋಷಕರು ತಮ್ಮ ಮಕ್ಕಳು 2026-27ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ತರಗತಿಗೆ ದಾಖಲಾಗುವ ನಿರೀಕ್ಷೆಯೊಂದಿಗೆ ಪೂರ್ವ ಪ್ರಾಥಮಿಕ ಶಾಲೆಗೆ ದಾಖಲಿಸಿದ್ದರು. ಪ್ರೀ-ಸ್ಕೂಲ್‌ ಶಿಕ್ಷಣ ಪೂರ್ಣಗೊಳಿಸಿ, ಪ್ರಥಮ ತರಗತಿಗೆ ಸಿದ್ಧರಾಗಿರುವ ಅನೇಕ ಮಕ್ಕಳು ಈಗ ಒಂದು ಸಂಪೂರ್ಣ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ.

ಆದ್ದರಿಂದ ಕಳೆದ ವರ್ಷದಲ್ಲಿ ನೀಡಿದ ಮಾದರಿಯಲ್ಲೇ 2026-27ನೇ ಶೈಕ್ಷ ಣಿಕ ವರ್ಷದ ಪ್ರಥಮ ತರಗತಿ ಪ್ರವೇಶಕ್ಕಾಗಿ ಕನಿಷ್ಠ ವಯೋಮಿತಿಯಲ್ಲಿ‌ ಒಮ್ಮೆ ಸಡಿಲಿಕೆ ನೀಡಿ 5 ವರ್ಷ 5 ತಿಂಗಳು ವಯಸ್ಸಿನ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ,