ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಕಾರ್ಡ್ ಹೋಲ್ಡರ್, ಸ್ಪಷ್ಟನೆ ಕೊಟ್ಟ MLA
* ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಕಾರ್ಡ್ ಹೋಲ್ಡರ್,
* ಸ್ವಜನಪಕ್ಷಪಾತದ ಮೂಲಕ ಭೂ ಕಬಳಿಕೆ ಮಾಡಿರುವ ಆರೋಪ
* ಇದಕ್ಕೆಲ್ಲ ಸ್ಪಷ್ಟನೆ ಕೊಟ್ಟ ಶಾಸಕ
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ.
ಕೋಲಾರ, (ಮೇ.17): ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ. ಇಂದಿಗೂ ಶಾಸಕರ ತಾಯಿ ಮುನಿಯಮ್ಮನವರ ಹೆಸರಿನಲ್ಲಿ ಬಿಪಿಎಲ್ ಕಾಡ್೯ ಇದ್ದು ಶಾಸಕರ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬತಿ೯ದೆ. ದರಾಖಾಸ್ತು ಕಮಿಟಿ ಅಧ್ಯಕ್ಷರಾಗಿರುವ ಶಾಸಕರು ಸ್ವಜನಪಕ್ಷಪಾತ ಮಾಡಿ ಭೂ ಕಬಳಿಕೆ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿದ್ದು,ಜಿಲ್ಲೆಯಲ್ಲಿ ಸಾಕಷ್ಟು ಚಚೆ೯ಗೆ ಕಾರಣವಾಗಿದೆ..ಈ ಕುರಿತ ಸ್ಟೋರಿ ಇಲ್ಲಿದೆ.
ಕಾಂಗ್ರೆಸ್ ಪಕ್ಷದಿಂದ ಸತತ ಎರಡು ಬಾರಿ ಬಂಗಾರಪೇಟೆಯಲ್ಲಿ ಶಾಸಕರಾಗಿ ಆಯ್ಕೆ ಆಗಿರುವ ಎಸ್.ಎನ್ ನಾರಾಯಣಸ್ವಾಮಿ ವಿರುದ್ದ ಸ್ವಜನಪಕ್ಷಪಾತದ ಮೂಲಕ ಭೂ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ.ಆಶ್ಚಯ೯ ಅಂದ್ರೆ ಇಂದಿಗೂ ಸಹ ಶಾಸಕರ ತಾಯಿ ಮುನಿಯಮ್ಮನವರ ಹೆಸರಿನಲ್ಲಿ ಬಿಪಿಎಲ್ ಕಾಡ್೯ ಚಾಲ್ತಿಯಲ್ಲಿದ್ದು ಅದೇಗೆ ಸಾಧ್ಯ ಅಂತ ಹಲವು ಆರೋಪಗಳು ಕೇಳಿಬತಿ೯ದೆ. ಬಿಪಿಎಲ್ ಕಾಡ್೯ ಹೊಂದಿರುವ ಶಾಸಕರ ತಾಯಿಯ ಹೆಸರಿಗೆ ದರಾಖಾಸ್ತು ಕಮಿಟಿ ಮೂಲಕ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಸರ್ವೇ ನಂ.256 ರಲ್ಲಿ 3 ಎಕರೆ 10 ಗುಂಟೆ ಸರ್ಕಾರಿ ಜಮೀನು ಮುನಿಯಮ್ಮ ಹೆಸರಿಗೆ 2018-19ರಲ್ಲಿ ಮಂಜೂರು ಆಗಿದ್ದು,ಕಮಿಟಿಯ ಅಧ್ಯಕ್ಷರಾಗಿರುವ ಶಾಸಕ ಎಸ್,ಎನ್ ನಾರಾಯಣಸ್ವಾಮಿ ತಮ್ಮ ಪ್ರಭಾವ ಬಳಿಸಿಕೊಂಡು ಮಂಜೂರು ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದ್ದು,ಭಾರಿ ಚಚೆ೯ಗೆ ಗ್ರಾಸವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ರಾಜ್ಯ ಸರ್ಕಾರದ ಕುಮ್ಮಕ್ಕು!
ಇನ್ನು ಶಾಸಕರ ತಾಯಿಗೆ ಮಂಜುರಾಗಿರುವ ಜಮೀನಿನ ಪಕ್ಕದಲ್ಲೇ,ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯಲ್ಲೇ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಕೆಲ ವಷ೯ಗಳಿಂದ ಎಸ್.ಎನ್ ಸಿಟಿ ಎಂದು ಕೋಟ್ಯಾಂತರ ರುಪಾಯಿ ಬೆಲೆ ಬಾಳುವ ಲೇಔಟ್ ಸಹ ಮಾಡಿಕೊಂಡಿದ್ದಾರೆ,ಇದು ಹಲವೂ ಅನುಮಾನಗಳಿಗೆ ಕಾರಣವಾಗಿದ್ದು,ವಿರೋಧ ಪಕ್ಷದವರಿಗೆ ಶಾಸಕರು ಆಹಾರವಾಗಿದ್ದಾರೆ.ಇನ್ನು ಶಾಸಕ ಎಸ್.ಎನ್ ನಾರಾಯಣಸ್ವಾಮಿ ವಿರುದ್ದ ಈ ಹಿಂದೆಯೂ ಭೂ ಕಬಳಿಕೆ ಆರೋಪ ಕೇಳಿ ಬಂದಿತ್ತು,ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ದಿವಂಗತ ಡಿ.ಕೆ ರವಿ ಸಹ ಗಾಲ್ಫ್ ರೆಸಾರ್ಟ್‌ಗೆ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಎಂದು ದಾಖಲೆ ಸಮೇತ ಆರೋಪ ಮಾಡಿದ್ದರು,ಆ ಹೈಕೋರ್ಟ್ನಲ್ಲಿಯೇ ಇತ್ಯರ್ಥವಾಗಿತ್ತು.
ಇನ್ನು ಈ ಬಗ್ಗೆ ಬಂಗಾರಪೇಟೆ ತಹಶಿಲ್ದಾರ್ ದಯಾನಂದ್ ಪ್ರತಿಕ್ರಿಯೆ ನೀಡಿದ್ದು,ಫೆಬ್ರವರಿ 20 2018 ರಲ್ಲಿ ಶಾಸಕರ ತಾಯಿ ಮುನಿಯಮ್ಮ ಅವರಿಗೆ ಸರ್ವೇ ನಂ.256 ರಲ್ಲಿ 3 ಎಕರೆ 10 ಗುಂಟೆ ಮಂಜೂರು ಮಾಡಲಾಗಿದೆ,ಅವರ ತಾಯಿ ಅಜಿ೯ ಹಾಕಿಕೊಂಡಿದ್ದರಿಂದ ದರಖಾಸ್ತು ಕಮಿಟಿ ಮೂಲಕ ಅವರಿಗೆ ಮಂಜೂರು ಮಾಡಿರುವುದು ನಿಜ,ಈ ಯಾರೋ ಎಸಿಬಿಯಲ್ಲಿ ದೂರು ನೀಡಿದ್ದಾರೆ ಅಂತ ನಾವು ಕೇಳಿದ್ದೇವೆ ಹೊರತು ನಮಗೆ ಯಾವುದೇ ದೂರುಗಳು,ತಕರಾರು ಅಜಿ೯ಗಳು ಬಂದಿಲ್ಲ,ಇದರ ಬಗ್ಗೆ ಕಾನುನಿನ ಪಂಡಿತರು ಹೇಳಬೇಕಾಗುತ್ತೆ,ಮೇಲಧಿಕಾರಿಗಳಿಂದ ನಮಗೆ ನಿದೇಶ೯ನ ಬಂದ್ರೆ ನಾವು ಕ್ರಮ ಕೈಗೊಳ್ಳಬೇಕಾಗುತ್ತೆ ಅಂತ ತಿಳಿಸಿದ್ರು…
ಸ್ಪಷ್ಟನೆ ಕೊಟ್ಟ ಶಾಸಕ
ಈ ಆರೋಪಗಳ ಬಗ್ಗೆ ಬಂಗಾರಪೇಟ್ ಶಾಸಕ ಎಸ್,.ಎನ್ ನಾರಾಯಣಸ್ವಾಮಿ ಸಹ ಪ್ರತಿಕ್ರಿಯೆ ನೀಡಿದ್ದು, ನಮ್ಮ ತಾಯಿ 1998 ರಲ್ಲಿ ದರಖಾಸ್ತು ಕಮಿಟಿಯಲ್ಲಿ ಅಜಿ೯ ಹಾಕಿಕೊಂಡಿದ್ರು. ಅಜಿ೯ ಹಾಕಿಕೊಂಡು 30 ವಷ೯ಗಳಿಂದ ಅವರೇ ಸ್ವಾಧಿನದಲ್ಲಿದ್ದಾರೆ. ಸ್ವ ಗ್ರಾಮ ಕುಪ್ಪನಹಳ್ಳಿ ತೊರೆದು 42 ವಷ೯ಗಳಿಂದ ಬಂಗಾರಪೇಟೆಯಲ್ಲಿ ವಾಸವಿದ್ದೇನೆ. 1995 ರಲ್ಲಿ ಕುಟುಂಬದಿಂದ ಹಕ್ಕು ನಿವೃತ್ತಿಯನ್ನು ಪಡೆದುಕೊಂಡು,ಎಲ್ಲ ಆಸ್ತಿಗಳನ್ನು ಬಿಟ್ಟುಕೊಟ್ಟು ಕುಟುಂಬದಿಂದ ಬೇರೆ ಆಗಿದ್ದೇನೆ.ರಕ್ತ ಸಂಬಂಧ ಬಿಟ್ಟರೆ ಬೇರೆ ಯಾವುದೇ ಸಂಬಂದವಿಲ್ಲ.
ನನ್ನ ತಾಯಿಯ ಆಸ್ತಿಯಲ್ಲೂ ನನಗೆ ಭಾಗವಿಲ್ಲ.1998 ರಲ್ಲೆ ಅವರು ಬಗರುಕ್ಕುಂ ಮೂಲಕ ಜಮೀನಿಗೆ ಅಜಿ೯ ಹಾಕಿಕೊಂಡಿದ್ರು. ಅಜಿ೯ದಾರರ ಮಾನದಂಡವನ್ನು ಪರಿಗಣಿಸಿ ನಾನು ಅಧ್ಯಕ್ಷನಾಗಿದ್ದಾಗೆ ಜಮೀನು ಮಂಜೂರು ಮಾಡಿದ್ದಾನೆ. ನನ್ನ ತಾಯಿ ಸಣ್ಣ ಆಗಿರೋದ್ರಿಂದ ಅವರು ಬಿಪಿಎಸ್ ಕಾಡ್೯ ಇವತ್ತಿಗೂ ಹೊಂದಿದ್ದು ಸಕಾ೯ರ ನಿಗಧಿ ಮಾಡಿರುವ 4 ಎಕರೆ 38 ಗುಂಟೆ ಜಮೀನಿನ ಒಳಗಡೆ ಇದ್ದಾರೆ. ಅಧ್ಯಕ್ಷರಾಗಿ ಈ ರೀತಿ ಮಂಜುರಾತಿ ಮಾಡಬಾರದು ಎಂದು ಎಲ್ಲೂ ಹೇಳಿಲ್ಲ. ನಾವು ಒಟ್ಟು ಕುಟುಂಬದಲಿಲ್ಲ ಆಗಾಗಿ ಇದರಲ್ಲಿ ಯಾವುದೇ ಸ್ವಜನಪಕ್ಷಪಾತ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಸರ್ಕಾರಿ ಜಮೀನು ಕಬಳಿಕೆ ಆರೋಪ ಕೇಳಿ ಬಂದಿದ್ದು,ಚುನಾವಣೆ ವಷ೯ದಲ್ಲಿ ವಿರೋಧ ಪಕ್ಷದವರಿಗೆ ದೊಡ್ಡಅಸ್ತ್ರ ಸಿಕ್ಕಂತಾಗಿದೆ.ಈ ಆರೋಪಗಳ ಸತ್ಯಾಸತ್ಯತೆ ಹೊರ ಬರಬೇಕಾದ್ರೆ,ನಿಷ್ಪಕ್ಷಪಾತ ತನಿಖೆ ನಡೆದರೆ ಮಾತ್ರ ಸಾಧ್ಯ.