Asianet Suvarna News Asianet Suvarna News

ಬಿಜೆಪಿ ತೊರೆದರೆ ಕಾಂಗ್ರೆಸ್‌ನಿಂದ ನಿಗಮಾಧ್ಯಕ್ಷ ಹುದ್ದೆ ಆಮಿಷ: ಮಣಿಕಂಠ ಆರೋಪ

ಖರ್ಗೆ ಕುಟುಂಬದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಗಂಭೀರ ಆರೋಪ ಮಾಡಿದ್ದಾರೆ.

Congress lured Manikant Rathore to quit BJP at kalaburagi rav
Author
First Published Dec 10, 2023, 4:28 AM IST

ಕಲಬುರಗಿ (ಡಿ.10) :  ಖರ್ಗೆ ಕುಟುಂಬದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆಮಿಷ ಒಡ್ಡಲಾಗಿತ್ತು ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಖರ್ಗೆ ಕುಟುಂಬದ ವಿರುದ್ಧ ಮಾತಾಡುವುದನ್ನು ನಿಲ್ಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡುವುದಾಗಿ ಮಾಜಿ ಶಾಸಕ ಬಾಬೂರಾವ್‌ ಚಿಂಚನ್‌ಸೂರ್‌ ಮೂಲಕ ತಮ್ಮ ತಂದೆಯವರಿಗೆ ಸಂದೇಶ ರವಾನಿಸಲಾಗಿತ್ತು ಎಂದು ಹೇಳಿದರು. 

ಸುವರ್ಣಸೌಧದಿಂದ ಸಾವರ್ಕರ್‌ ಫೋಟೋ ತೆಗೆಯಬೇಕು: ಸಚಿವ ಪ್ರಿಯಾಂಕ್ ಖರ್ಗೆ

ಈ ಸಂಬಂಧ ಚಿಂಚನ್‌ಸೂರ್‌ ತಮ್ಮ ತಂದೆಯವರ ಜೊತೆ ಮಾತನಾಡಿದ್ದಾರೆನ್ನಲಾದ ಆಡಿಯೋವನ್ನೂ ಮಣಿಕಂಠ ರಾಥೋಡ್‌ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಪ್ರಿಯಾಂಕ್‌ ಖರ್ಗೆ ಮತ್ತವರ ಬೆಂಬಲಿಗರು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ದೂರು ಸಲ್ಲಿಸಿದರೂ ಪೊಲೀಸರು ದೂರು ದಾಖಲಿಸುತ್ತಿಲ್ಲ. ಬದಲಾಗಿ ಪ್ರಿಯಾಂಕ್‌ ಕುಮ್ಮಕ್ಕಿನಿಂದ ತಮ್ಮ ವಿರುದ್ಧವೇ ದೂರು ದಾಖಲಿಸುತ್ತಿದ್ದಾರೆಂದು ದೂರಿದ ಮಣಿಕಂಠ್‌ ರಾಥೋಡ್‌, ಅದೆಷ್ಟೇ ದೂರುಗಳು ತಮ್ಮ ವಿರುದ್ಧ ದಾಖಲಾದರೂ ತಾವು ಹೆದರುವುದಿಲ್ಲ ಎಂದು ಹೇಳಿದರು.

ಚುನಾವಣೆ ಗೆಲ್ಲಲು ಜನರ ಹೃದಯ ಗೆಲ್ಲಬೇಕು: ಪ್ರಧಾನಿ ಮೋದಿ

Follow Us:
Download App:
  • android
  • ios