Asianet Suvarna News Asianet Suvarna News

ಮುಗಿಯದ ಜೈಲು ವಾಸ: ಡಿಕೆಶಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ!

ಡಿಕೆಶಿಗೆ ಮುಂದುವರೆದ ಜೈಲು ವಾಸ| ಅರ್ಜಿ ವಿಚಾರಣೆ ನಾಳೆ, ಮಂಗಳವಾರಕ್ಕೆ ಮುಂದೂಡಿಕೆ| ಮಂಗಳವಾರ ಮಧ್ಯಾಹ್ನ 03.30ಕ್ಕೆ ಮುಂದೂಡಿಕೆ

Congress leader DK Shivakumar bail plea postponed to October 15th
Author
Bangalore, First Published Oct 14, 2019, 12:02 PM IST

ಬೆಂಗಳೂರು[ಅ.14]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಾಳೆ, ಮಂಗಳವಾರ ಮಧ್ಯಾಹ್ನ 03.30ಕ್ಕೆ ಮುಂದೂಡಿದೆ.

"

ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?

ಜಾರಿ ನಿರ್ದೇಶನಾಲಯದ (ಇ.ಡಿ.) ವಿಶೇಷ ನ್ಯಾಯಾಲಯವು ಜಾಮೀನು ಅರ್ಜಿ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ದೆಹಲಿಯ ಹೈಕೋರ್ಟ್ ಮೊರೆ ಹೋಗಿದ್ದರು. ಸೆ.30ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇ.ಡಿ.ಗೆ ನೋಟಿಸ್ ಜಾರಿ ಮಾಡಿ, ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 14ಕ್ಕೆ ಮುಂದೂಡಿತ್ತು. ಆದರೀಗ ಮತ್ತೆ ಡಿಕೆ ಶಿವಕುಮಾರ್‌ಗೆ ಹಿನ್ನಡೆಯಾಗಿದ್ದು, ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 03.30ಕ್ಕೆ ಮುಂದೂಡಲಾಗಿದೆ.

ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಸಂದರ್ಭದಲ್ಲಿ ಡಿಕೆಶಿ ಮತ್ತವರ ಆಪ್ತರ ದೆಹಲಿ ನಿವಾಸದಲ್ಲಿ ಸಿಕ್ಕಿದ್ದ ₹8.59 ಕೋಟಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಸೆ.3ರಂದು ಡಿಕೆಶಿಯನ್ನು ಬಂಧಿಸಿತ್ತು. ಬಳಿಕ ವಿಚಾರಣೆ ಸಂದರ್ಭದಲ್ಲಿ ಡಿಕೆಶಿ ಮತ್ತಷ್ಟು ಅವ್ಯವಹಾರ ನಡೆಸಿದ್ದಾರೆ ಎಂದು ಇ.ಡಿ. ಆರೋಪಿಸಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯವು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ, ಬಳಿಕ ನ್ಯಾಯಾಂಗ ಬಂಧನ ವಿಧಿಸಿತ್ತು.

ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?

ಡಿಕೆಶಿ ಸೆ.17ರಿಂದ ನ್ಯಾಯಾಂಗ ಬಂಧನದಲ್ಲಿದ್ದು ಅನಾರೋಗ್ಯದ ಕಾರಣ 2 ದಿನ ಚಿಕಿತ್ಸೆ ಬಳಿಕ, ಅಂದರೆ ಸೆ.19ರಿಂದ ತಿಹಾರ್ ಸೆಂಟ್ರಲ್ ಜೈಲಿನಲ್ಲಿದ್ದಾರೆ.

ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios