ಡಿಸೆಂಬರ್‌ವರೆಗೂ ಡಿಕೆಶಿಗೆ ಬೇಲ್ ಇಲ್ಲ! ಯಾಕೆ ಅಂತೀರಾ?
ಡಿಸೆಂಬರ್ 9ರವರೆಗೆ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ಸಿಗಲ್ಲ!/ ಉಪಚುನಾವಣೆ ಫಲಿತಾಂಶದವರೆಗೂ ಡಿಕೆಶಿ ಕಾಯಬೇಕೆ? / ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಆಧಾರ ಏನು?
ಬೆಂಗಳೂರು(ಅ. 10) ವಿಧಾನಸಭೆ ಕಲಾಪ ಆರಂಭವಾಗಿದೆ. ಹಿಂದಿನ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ, ಟ್ರಬಲ್ ಶೂಟರ್ ಎಂದೇ ಕರೆಸಿಕೊಂಡಿದ್ದ ಡಿಕೆ ಶಿವಕುಮಾರ್ ಅನುಪಸ್ಥಿತಿ ಕಾಂಗ್ರೆಸ್ ಗೆ ಕಾಡುತ್ತಲೇ ಇದೆ. ಈಗ ಇನ್ನೊಂದು ಮಾತು ಸಹ ಕೇಳಿ ಬರುತ್ತಿದ್ದು ಡಿಸೆಂಬರ್ 9 ರವರೆಗೆ ಡಿಕೆಶಿ ಅವರಿಗೆ ಜಾಮೀನು ಸಿಗುವುದು ಅಸಾಧ್ಯ! ತಿಹಾರ್ ಜೈಲಿನಲ್ಲೇ ಡಿಕೆಶಿ ಇನ್ನಷ್ಟು ದಿನ ಕಳೆಯಬೇಕಾದೀತು.
ಡಿಕೆ ಶಿವಕುಮಾರ್ ರಾಜಕಾರಣದ ತಂತ್ರಗಾರಿಕೆ ಬಲ್ಲವರು. ಕರ್ನಾಟಕದಲ್ಲಿ ಅನರ್ಹ ಶಾಸಕರ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದ್ದು ಡಿಕೆಶಿ ಇದ್ದರೆ ಒಬ್ಬರೆ ಮುಂದೆ ನಿಂತು ಐದರಿಂದ ಆರು ಸೀಟುಗಳನ್ನು ಕಾಂಗ್ರೆಸ್ ಬುಟ್ಟಿಗೆ ಹಾಕಬಲ್ಲರು. ಇದೇ ಕಾಣಕ್ಕೆ ಬಿಜೆಪಿ ಭಯಪಡುತ್ತಿದ್ದು ಡಿಕೆಶಿ ಅವರಿಗೆ ಇನ್ನಷ್ಟು ಪ್ರಶ್ನೆ ಕೇಳಿ ದಿನ ದೂಡಲು ಬಿಜೆಪಿ ಜಾರಿ ನಿರ್ದೇಶನಾಲಯ ಬಳಸಿಕೊಂಡು ತಂತ್ರಗಾರಿಕೆ ಮಾಡಬಹುದು ಎಂಬುದು ಕಾಂಗ್ರೆಸ್ ಗಂಭೀರ ಆರೋಪ.
ಡಿಕೆಶಿಗೆ ಶುರುವಾಯ್ತು ಮತ್ತೊಂದು ಸಂಕಟ
ಡಿಸೆಂಬರ್ 5 ರಂದು ಉಪಚುನಾಚಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಹೊರಕ್ಕೆ ಬರಲಿದೆ. ಇದೇ ಕಾರಣಕ್ಕೆ ಬಿಜೆಪಿ ಇಡಿಯನ್ನು ತನಗೆ ಬೇಕಾದಂತೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಕೆಂಗಲ್ ಶ್ರೀಪಾದ್ ರೇಣು ಆರೋಪ ಮಾಡುತ್ತಾರೆ.
ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿರುವ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ. ಬಿಜೆಪಿಯ ಬಹಳಷ್ಟು ನಾಯಕರ ಬಳಿಯೂ ಕೋಟ್ಯಂತರ ಹಣವಿಲ್ಲವೇ? ದೇಶದ ಕೆಟ್ಟ ಆರ್ಥಿಕ ಸ್ಥಿತಿ, ಉದ್ಯೋಗ ಅವಕಾಶಗಳ ಕೊರತೆಯಂತಹ ವಿಚಾರಗಳಿಂದ ಜನರನ್ನು ಬೇರೆ ಕಡೆ ಸೆಳೆಯಲು ಬಿಜೆಪಿ ಇಂತಹ ಕುತಂತ್ರ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.
'ಪಾಪ ಮಂತ್ರಿ ಆಗಬೇಕಿತ್ತು, ಸಿಎಂಗೆ ಡಿಸಿಎಂಗಳ ಹೆಸರೇ ಹೊತ್ತಿಲ್ಲ'
ಯಾರೂ ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲೇಬೇಕು. ಬಿಜೆಪಿ ಯಾವ ಆಧಾರವನ್ನು ಇಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು ಕಾಂಗ್ರೆಸ್ ಕಣ್ಣಿಗೆ ಬೀಳುತ್ತಿಲ್ಲ ಎಂದು ಬಿಜೆಪಿ ವಕ್ತಾರ ವಾಮನಾಚಾರ್ಯ ತಿರುಗೇಟು ನೀಡಿದ್ದಾರೆ.
ಡಿಕೆ ಶಿವಕುಮಾರ್ ಮಾತ್ರ ಅಲ್ಲ, ಹಣ ಇದ್ದ ನಾಯಕರನ್ನು ಕಾಂಗ್ರೆಸ್ ಕಾಪಾಡಿಕೊಂಡೇ ಬಂದಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಅವರಿಗೆ ಬೇಲ್ ಸಿಕ್ಕು ಅವರು ಬಿಡುಗಡೆಯಾದರೂ ಕಾಂಗ್ರೆಸ್ ತಾನು ಹೊಂದಿರುವ ಕೆಟ್ಟ ಇಮೇಜ್ ನಿಂದಲೇ ಸೋಲು ಕಾಣಲಿದೆ ಎಂದು ಆಚಾರ್ಯ ಹೇಳುತ್ತಾರೆ.