ಉಚಿತ ಗ್ಯಾರಂಟಿ ಹೊಡೆತಕ್ಕೆ ಶೀಘ್ರದಲ್ಲೇ ಬಂದ್ ಆಗಲಿವೆಯಾ ನ್ಯಾಯಬೆಲೆ ಅಂಗಡಿಗಳು?
ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ರಾಜ್ಯದ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿ ಇದೀಗ ಅಕ್ಕಿ ಪೂರೈಸಲಾಗದೆ ಪೇಚಿಗೆ ಸಿಲುಕಿದೆ. ಗ್ಯಾರೆಂಟಿ ನೀಡೋ ಭರದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಐದು ಕೆಜಿ ಅಕ್ಕಿ ಇಲ್ಲಿವರೆಗೆ ಬಂದಿಲ್ಲ. ಇತ್ತ ಕೇಂದ್ರದಿಂದ ಬರೋ ಐದು ಕೆಜಿ ಅಕ್ಕಿ ವಿತರಣೆಯಿಂದ ಮತ್ತು ಅದರಿಂದ ಬರೋ ಕಮಿಷನ್ ನಿಂದ ಪಡಿತರ ಅಂಗಡಿ ನಡೆಸೋದು ಕಷ್ಟಕರವಾಗಿದೆ ಅಂತಿರೋ ವಿತರಕರು\
ಬಳ್ಳಾರಿ (ನ.3) : ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ರಾಜ್ಯದ ಪಡಿತರ ಚೀಟಿದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿ ಇದೀಗ ಅಕ್ಕಿ ಪೂರೈಸಲಾಗದೆ ಪೇಚಿಗೆ ಸಿಲುಕಿದೆ.
ಗ್ಯಾರೆಂಟಿ ನೀಡೋ ಭರದಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಐದು ಕೆಜಿ ಅಕ್ಕಿ ಇಲ್ಲಿವರೆಗೆ ಬಂದಿಲ್ಲ. ಇತ್ತ ಕೇಂದ್ರದಿಂದ ಬರೋ ಐದು ಕೆಜಿ ಅಕ್ಕಿ ವಿತರಣೆಯಿಂದ ಮತ್ತು ಅದರಿಂದ ಬರೋ ಕಮಿಷನ್ ನಿಂದ ಪಡಿತರ ಅಂಗಡಿ ನಡೆಸೋದು ಕಷ್ಟಕರವಾಗಿದೆ ಅಂತಿರೋ ವಿತರಕರು. ಹೀಗಾಗಿ ರಾಜ್ಯಾದ್ಯಂತ ಈ ತಿಂಗಳ ಅಕ್ಕಿಯನ್ನು ಗೋದಾಮಿನಿಂದ ಬಿಡಿಸದೇ ಇರೋದಕ್ಕೆ ನಿರ್ಧರಿಸಿರುವ ಪಡಿತರ ವಿತರಕರು.
ಐದು ಕೆಜಿ ಅಕ್ಕಿ ಬದಲಾಗಿ ಸರ್ಕಾರ ಜನರ ಅಕೌಂಟ್‌ಗೆ ನೇರ ಹಣ ಹಾಕ್ತಿದೆ. ಹಣವಾದ್ರೂ ಸರಿಯಾಗಿ ತಲುಪ್ತಿದೆಯಾ ಅಂದ್ರೆ ಅದೂ ಸಹ ಸರಿಯಾಗಿ ಜನರ ಅಕೌಂಟ್ ಗೆ ಬಿಳ್ತಿಲ್ಲ. ಬಿದ್ರೂ ಅದನ್ನು ಜನರ ವೈಯಕ್ತಿಕ ಸಾಲಕ್ಕೆ ಬ್ಯಾಂಕ್ ನವರು ಮುಟ್ಟು ಗೋಲು ಹಾಕ್ತಿದ್ದಾರೆ. ಇದರಿಂದ ಜನರು ಪಡಿತರ ವಿತರಕರ ಬಳಿ ಬಂದ್ ಜಗಳವಾಡ್ತಿದ್ದಾರಂತೆ. ಅತ್ತ ವಿತರಕರಿಗೆ ಬರೋ ಕಮಿಷನ್ ಹಣ ಬರುತ್ತಿಲ್ಲ. ಇತ್ತ ಹಣವೂ ಪಡಿತರದಾರರ ಕೈಸೇರದೆ ಜನರು ಜಗಳ ಮಾಡುತ್ತಿದ್ದಾರೆ. ಈ ಎಲ್ಲ ತೊಂದರೆಗಳಿಂದ ಬೇಸತ್ತ ಪಡಿತರ ವಿತರಕರು ಪಡಿತರ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಿದ್ದಾರೆ.
Ration ಅಂಗಡಿಗಳ ಮುಷ್ಕರ: ಈ ತಿಂಗಳು ರಾಜ್ಯದಲ್ಲಿ ಪಡಿತರ ವಿತರಣೆ ತಡ?
ರಾಜ್ಯದಲ್ಲಿ ಒಟ್ಟು 4.30 ಕೋಟಿ ಪಡಿತರದಾರರು ಇದ್ದಾರೆ. ಪ್ರತಿ ಫಲಾನುವಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ವಿತರಿಸಬೇಕು. ಅಂದರೆ ಪ್ರತಿತಿಂಗಳು ಸರ್ಕಾರಕ್ಕೆ ತಿಂಗಳಿಗೆ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕು. ಹೀಗಿರುವಾಗ ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಅಕ್ಕಿ ನೀಡುವಷ್ಟು ಸಂಗ್ರಹವಿರಲಿಲ್ಲ. ಬೇರೆ ರಾಜ್ಯಗಳಿಂದ ಖರೀದಿಸುವುದಾಗಿ ಹೇಳಿದರೂ ಯಾವುದೇ ರಾಜ್ಯದಿಂದ ಸಿಗಲಿಲ್ಲ. ಈ ಹಿನ್ನೆಲೆ ಅಕ್ಕಿ ಬದಲು ಡಿಬಿಟ್ ಮೂಲಕ ಹಣ ನೀಡಲು ಮುಂದಾಯಿತು. ಇದೀಗ ಹಣವೂ ಸರಿಯಾಗಿ ತಲುಪುತ್ತಿಲ್ಲ. ಐದು ಕೆಜಿ ಅಕ್ಕಿಯೂ ಸಿಗುತ್ತಿಲ್ಲ. ಒಂದು ಕಡೆ ರಾಜ್ಯಾದ್ಯಂತ ಬರಗಾಲ ಕೆಲಸ ಇಲ್ಲದೆ ದಿನದೂಡುತ್ತಿರುವ ಜನರು. ಒಂದೊತ್ತಿನ ಊಟಕ್ಕೆ ಅಕ್ಕಿ ಸಿಗದೆ ಪರದಾಡುವಂತಾಗಿದೆ.
ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: 90 ವರ್ಷದವರಿಗೆ ನವೆಂಬರ್‌ನಿಂದ ಮನೆಗೇ ರೇಷನ್?