ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಕಾಂಗ್ರೆಸ್ ಸರ್ಕಾರದ ಸಮೀಕ್ಷೆಯು ಕ್ರಿಶ್ಚಿಯಾನಿಟಿಯನ್ನು ಬೆಳೆಸಿ ಹಿಂದೂ ಧರ್ಮವನ್ನು ನಾಶಮಾಡುವ ಹುನ್ನಾರ ಎಂದು ಆರೋಪಿಸಿದ್ದಾರೆ. ಈ ಸಮೀಕ್ಷೆಯು ಮತಾಂತರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಗಂಭೀರ ಆರೋಪ ಮಾಡಿದರು.

ಕೊಪ್ಪಳ (ಸೆ.18): ಇಟಲಿಯಪೋಪ್‌ರಂತೆ ಕ್ರಿಶ್ಚಿಯಾನಿಟಿ ಬೆಳೆಸುವ ಹುನ್ನಾರ ಸಮೀಕ್ಷೆಯಲ್ಲಿ ಅಡಗಿದ್ದು, ಈ ಮೂಲಕ ಹಿಂದು ಧರ್ಮ ನಾಶ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರಲ್ಲಿಯೇ ಸರ್ಕಾರ ಮುಳುಗಿ ಹೋಗಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಪಂಚಮಸಾಲಿ ಕ್ರಿಶ್ಚಿಯನ್ ಎನ್ನುವ ಕಾಲಂ ನೀಡುವ ಮೂಲಕ ಎಲ್ಲ ಜಾತಿಗಳಲ್ಲಿಯೂ ಕ್ರಿಶ್ಚಿಯಾನಿಟಿ ತರಲು ಯತ್ನ ನಡೆಸಿದ್ದು, ಇದು ಅವರಿಗೆ ಮುಳುವಾಗಲಿದೆ ಎಂದರು.

ಹಿಂದೂ ಧರ್ಮವನ್ನ ಮತಾಂತರ ಮಾಡಲು ಯತ್ನ:

ಹಿಂದೂ ಧರ್ಮದವರನ್ನು ಮತಾಂತರ ಮಾಡಲು ಯತ್ನಿಸಿದ್ದಾರೆ. ದೇಶದಲ್ಲಿ ಸಾವಿರಾರು ವರ್ಷಗಳ ಕಾಲ ಬೇರೆ ಬೇರೆ ಧರ್ಮದವರು ಆಳ್ವಿಕೆ ನಡೆಸಿದರೂ ಹಿಂದೂ ಧರ್ಮವನ್ನು ಏನು ಮಾಡಲು ಆಗಿಲ್ಲ. ಇವರಿಂದಲೂ ಆಗಲು ಸಾಧ್ಯವಿಲ್ಲವೆಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು. 

ಕುರುಬ ಸಮುದಾಯ ಎಸ್‌ಟಿ ಸೇರ್ಪಡೆಗೆ ಭಿನ್ನಾಭಿಪ್ರಾಯಕ್ಕೆ ಸರ್ಕಾರ ಯತ್ನ:

ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಮೂಲಕ ಎರಡು ಸಮೂದಾಯಗಳ ನಡುವೆ ಭಿನ್ನಾಭಿಪ್ರಾಯ ತರಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.