ನಮ್ಮ ಸರ್ಕಾರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಬದ್ಧ: ಪ್ರಿಯಾಂಕ್ ಖರ್ಗೆ
ನಮ್ಮ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಳೆದ ಡಿಸೆಂಬರ್ 23 ರಂದು ಐದನೇ ಗ್ಯಾರೆಂಟಿ ಯುವನಿಧಿ ಯೋಜನೆಯನ್ನು ಸಹ ಸಿಎಂ ಲೋಕಾರ್ಪಣೆ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲಬುರಗಿ (ಜ.6): ನಮ್ಮ ಅಧಿಕಾರಕ್ಕೆ ಬರುತ್ತಿದ್ದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕಳೆದ ಡಿಸೆಂಬರ್ 23 ರಂದು ಐದನೇ ಗ್ಯಾರೆಂಟಿ ಯುವನಿಧಿ ಯೋಜನೆಯನ್ನು ಸಹ ಸಿಎಂ ಲೋಕಾರ್ಪಣೆ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವರು, ಕಳೆದ 10 ವರ್ಷದಲ್ಲಿ ಕೇಂದ್ರದ ಆರ್ಥಿಕ ನೀತಿ, ದುರಾಡಳಿತದಿಂದ ಐವತ್ತು ವರ್ಷ ಕಾಣದ ನಿರುದ್ಯೋಗ ಸಮಸ್ಯೆ ದೇಶದಲ್ಲಿ ಉದ್ಭವವಾಗಿದೆ. ಆದರೆ ಕೇಂದ್ರ ಸರಕಾರ ಅಂಕಿ ಅಂಶ ಮುಚ್ಚಿಟ್ಟು ಅರ್ಥಿಕ ಪ್ರಗತಿ ಅಂತ ಬಿಂಬಿಸುತ್ತಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಚೆಕ್‌ಬೌನ್ಸ್ ಕೇಸ್; ಸಚಿವ ಮಧು ಬಂಗಾರಪ್ಪ ಪರ ಪ್ರಿಯಾಂಕ್ ಖರ್ಗೆ ಬ್ಯಾಂಟಿಂಗ್!
ನಿರುದ್ಯೋಗಿಗಳಿಗೆ ಹಣ ಕೊಡುವುದು ಮುಖ್ಯವಲ್ಲ, ಉದ್ಯೋಗ ಸೃಷ್ಟಿ ಆಗಬೇಕು ಎನ್ನುವುದು ನಮ್ಮ ನಿಲುವು. ನಮ್ಮ ಸರಕಾರ ಉದ್ಯೋಗ ಕೊಡಲು ಬದ್ದವಾಗಿದೆ. ರಾಜ್ಯದಲ್ಲಿ 2 ಲಕ್ಷ 40 ಸಾವಿರ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹುದ್ದೆ ಭರ್ತಿ ಜೊತೆ ಜೊತೆಗೆ ಉದ್ಯಮಶೀಲತೆ ಹೆಚ್ಚಿಸಲು ಸರಕಾರ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಮಾನವ ಸಂಪನ್ಮೂಲ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನೀಲ ನಕ್ಷೆ ರೂಪಿಸಿದ್ದೇವೆ ಎಂದರು.
ನಮ್ಮದು ಸಂವಿಧಾನದಡಿ ನಡೆಯುವ ಸರ್ಕಾರ: ಸಚಿವ ಪ್ರಿಯಾಂಕ್ ಖರ್ಗೆ
ಈ ವರ್ಷ ಪಾಸ್ ಔಟ್ ಆಗಿ ಆರು ತಿಂಗಳಾದವರು ಯುವನಿಧಿಗೆ ಅರ್ಹರಾಗಿರುತ್ತಾರೆ. ನಿರುದ್ಯೋಗಿಗಳಿಗೆ ಕುಟುಂಬದವರ ಮೇಲೆ ಭಾರ ಆಗಲು ನಾವು ಬಯಸೋದಿಲ್ಲ. ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಹಾಕಲು, ಬೇರೆ ಬೇರೆ ಕೋರ್ಸ್ ಮಾಡಲು ಈ ಹಣ ಅವರಿಗೆ ಯುಸ್ ಅಗುತ್ತೆ. ಹೀಗಾಗಿ ಅರ್ಹರಾದವರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಯುವನಿಧಿಗೆ ನೋಂದಾಗಿಸಿಕೊಳ್ಳುವಂತೆ ತಿಳಿಸಿದರು.