ಸಾಫ್ಟ್ ಹಿಂದುತ್ವ ಹಾಗಂದ್ರೆ ಏನು? ನಾವು ಹಿಂದುಗಳಲ್ವಾ? ರಾಮನ ಭಕ್ತರು ಅಲ್ವಾ?: ಸಿಎಂ ಸಿದ್ದರಾಮಯ್ಯ
ನಾವು ಹಿಂದುಗಳೇ, ರಾಮನ ಪೂಜೆ ಮಾಡ್ತೇವೆ, ಭಜನೆ ಮಾಡ್ತೇವೆ. ಎಲ್ಲರೂ ಸಮಾನರಾಗಿ ಬಾಳಬೇಕು ಇದು ಕಾಂಗ್ರೆಸ್ ನ ಸಿದ್ದಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಕಾಂಗ್ರೆಸ್ ಪಕ್ಷ ಉದಯವಾಗಿ 138 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಇಂದು ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರು (ಡಿ.28): ನಾವು ಹಿಂದುಗಳೇ, ರಾಮನ ಪೂಜೆ ಮಾಡ್ತೇವೆ, ಭಜನೆ ಮಾಡ್ತೇವೆ. ಎಲ್ಲರೂ ಸಮಾನರಾಗಿ ಬಾಳಬೇಕು ಇದು ಕಾಂಗ್ರೆಸ್ ನ ಸಿದ್ದಾಂತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷ ಉದಯವಾಗಿ 138 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಇಂದು ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲವರು ಸಾಫ್ಟ್ ಹಿಂದುತ್ವ ಎಂದು ಹೇಳುವುದು ಕೇಳಿದ್ದೇನೆ ಹಾಗಂದ್ರೆ ಏನು? ಸಾಫ್ಟ್ ಹಿಂದುತ್ವ, ಹಾರ್ಡ್ ಹಿಂದುತ್ವ? ಅನ್ನುವುದು ಇದೆಯಾ? ಹಿಂದುತ್ವ ಅಂದ್ರೆ ಹಿಂದುತ್ವ ಅಷ್ಟೆ. ನಾವು ಹಿಂದುಗಳು ಅಲ್ವಾ? ನಾನು ಮೊದಲು ರಾಮನ ಭಜನೆಗೆ ಹೋಗ್ತಿದ್ದೆ. ಧನುರ್ಮಾಸದಲ್ಲಿ ಭಜನೆ ಮಾಡೋದು ರಾಮ ಮಂದಿರದಲ್ಲಿ ಆಗ ನಾನು ಹೋಗ್ತಿದ್ದೆ. ನಾವು ರಾಮನ ಪೂಜೆ ಮಾಡಲ್ವಾ? ನಾವು ಹಿಂದುಗಳೇ, ಎಲ್ಲರೂ ಸಮಾನರಾಗಿ ಬಾಳಬೇಕು ಇದು ಕಾಂಗ್ರೆಸ್ ನ ಸಿದ್ದಾಂತ ಎಂದರು.
ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ
ದೇಶದ ಜನರ ಸುಧಾರಣೆಗೆ ಕಾಂಗ್ರೆಸ್ ಪಕ್ಷ ಉದಯ:
ಇಡೀ ದೇಶದಲ್ಲಿಂದು ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಉದಯವಾಗಿ ಇಂದಿಗೆ 138 ವರ್ಷ ಪೂರ್ಣಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ಸ್ಥಾಪನೆಯಾಯಿತು. ದೇಶದ ಜನರ ಜೀವನ ಸುಧಾರಣೆಗಾಗಿ ಉದಯವಾದ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಹೋರಾಟದ ನೇತೃತ್ವದ ವಹಿಸಿಕೊಳ್ಳಲೆಂದು ಗಾಂಧೀಜಿಯನ್ನ ಬಾಲಗಂಗಾಧರನಾಥ ತಿಲಕ್ ಕರೆತಂದ್ರು. ಅಹಿಂಸಾತ್ಮಕ ಸತ್ಯಾಗ್ರಹದ ಮೂಲಕ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು.ನೆಹರು, ಲಾಲ್ ಬಹದ್ದೂರ ಶಾಸ್ತ್ರಿ, ವಲ್ಲಭಬಾಯ್ ಪಟೇಲ್ ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ರು. ಭಾರತ ಸ್ವಾತಂತ್ರ್ಯಗೊಳ್ಳಲು ಕಾಂಗ್ರೆಸ್ ಪಕ್ಷ ಕಾರಣ, ಬೇರೆ ಯಾವ ಪಕ್ಷ ಕಾರಣರಲ್ಲ ಎಂದರು.
ಮತಾಂತರ ನಿಷೇಧವಿದ್ರೂ ಅಂಗನವಾಡಿ ಕಾರ್ಯಕರ್ತೆಯಿಂದಲೇ ಮತಾಂತರ ಕೃತ್ಯ; ಪ್ರಮೋದ್ ಮುತಾಲಿಕ್ ಆಕ್ರೋಶ
ಬಿಜೆಪಿ ಜನ ಸಂಘದ ಒಬ್ಬರು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಉದಾಹರಣೆ ಇದ್ಯ? ಬಿಜೆಪಿಯವ್ರು ಬಹಳ ದೇಶ ಭಕ್ತರು ಅಂತಾರಲ್ಲ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಉದಾಹರಣೆ ಇದ್ಯ? ಇದನ್ನ ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಹಿಂದುತ್ವದ ಬಗ್ಗೆ, ದೇಶದ ಬಗ್ಗೆ ಉದ್ಧುದ್ದ ಮಾತನಾಡ್ತಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ ಯಾಕ್ರಿ ಸುಳ್ಳು ಹೇಳ್ತೀರ, ಸುಳ್ಳನ್ನ ಸತ್ಯದ ತಲೆ ಮೇಲೆ ಹೊಡೆದಂತೆ ಹೇಳ್ತಾರೆ. ಬಿಜೆಪಿಯ ಡೋಂಗಿ ರಾಜಕಾರಣ ಬಯಲು ಮಾಡುವುದು ಕಾಂಗ್ರೆಸ್‌ನ ಕರ್ತವ್ಯ. ಆಧುನಿಕ ಭಾರತದ ಅಭಿವೃದ್ದಿಗೆ ನೆಹರು ಅಡಿಪಾಯ ಹಾಕಿದ್ರು ಎಂಬುದನ್ನ ಮರೆಯಬಾರದು. ದೇಶದ ಜನರ ಜೀವನಮಟ್ಟ ಸುಧಾರಣೆ ಆಗಿರೋದು ಕಾಂಗ್ರೆಸ್ ನಿಂದ ಮುಂದಿನ ಲೋಕಸಭಾ ಚುನಾವಣೆ ಮತ್ತೆ ಕಾಂಗ್ರೆಸ್ ತರಬೇಕು ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.